Daily Archives: ಜುಲೈ 7, 2024

ಹುಡುಗ, ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್‌; ಆರೋಪಿ ಅರೆಸ್ಟ್​

ಬೆಂಗಳೂರು, ಜು.07: ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕೆಂದು ಮೇಸೆಜ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸರು(Police) ಬಂಧಿಸಿದ್ದಾರೆ. ಆನಂದ್ ಶರ್ಮಾ ಬಂಧಿತ ಆರೋಪಿ. ಇತ ಹಲವಾರು ಮೊಬೈಲ್ ನಂಬರ್ ಬಳಸಿ, ಹುಡುಗಿಯರ ಸರ್ವಿಸ್ ಬೇಕಾ? ಎಂದು ಕರೆ ಮಾಡುತ್ತಿದ್ದ. ಅದರಂತೆ ಕರೆ ಮಾಡುತ್ತಿದ್ದರ ಬಗ್ಗೆ ಸುಭಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮೊಬೈಲ್ ನಂಬರ್ ಆಧರಿಸಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ …

Read More »

ಹುಬ್ಬಳ್ಳಿಯಲ್ಲಿ ಡೆಂಗ್ಯೂಗೆ ನಾಲ್ವರು ಸಾವು

ಬೆಂಗಳೂರು, ಜುಲೈ 07: ದಿನದಿಂದ ದಿನಕ್ಕೆ ಡೆಂಗ್ಯೂ (Dengue) ಜನರನ್ನ ಕಾಡುತ್ತಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 175 ಡೆಂಗ್ಯೂ ಕೇಸ್ ದೃಢಪಟ್ಟಿವೆ. ಬೆಂಗಳೂರಿನಲ್ಲೇ 115 ಕೇಸ್​ಗಳು ದಾಖಲಾಗಿವೆ. ರಾಜ್ಯದಲ್ಲಿ ಜನವರಿ 1ರಿಂದ ನಿನ್ನೆ ವರೆಗೆ ಒಟ್ಟು 7 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.   ಮೈಸೂರಿನಲ್ಲಿ 3 ದಿನಕ್ಕೆ ಇಬ್ಬರು ಸಾವನ್ನಪ್ಪಿದ್ದರೆ, ಹುಬ್ಬಳ್ಳಿಯಲ್ಲಿ (Hubballi) ನಾಲ್ವರು ಮೃತಪಟ್ಟಿರುವುದಾಗಿ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆ ನಿರ್ದೇಶಕ ಡಾ.ಎಸ್​.ಎಫ್​.ಕಮ್ಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಿಮ್ಸ್​ ಆಸ್ಪತ್ರೆ ನಿರ್ದೇಶಕ …

Read More »

ಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್‌: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ

ಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್‌: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ ಗೃಹಲಕ್ಷ್ಮೀ ಯೋಜನೆಯಡಿಯ ಫಲಾನುಭವಿಗಳಿಗೆ ಸರಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. 11 ಮತ್ತು 12 ನೇ ಕಂತಿನ ( Gruha Lakshmi 12th Installment ) ಹಣವನ್ನು ಮೊದಲ ಹಂತದಲ್ಲಿ 16ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದ್ದ ಕರ್ನಾಟಕ ಸರಕಾರ ಇದೀಗ ಎರಡನೇ ಹಂತದಲ್ಲಿ ಮತ್ತೆ 12 ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದೆ. ನಿಮ್ಮ ಖಾತೆಗೂ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ. …

Read More »

ಮಹಿಳೆಯನ್ನು ಕಡಿದ ಹಾವು ಅವರ ಅಂತ್ಯಸಂಸ್ಕಾರದ ದಿನವೂ ಬಂದಿತ್ತು !

ಮಂಜೇಶ್ವರ : ಮಂಜೇಶ್ವರ ತಾಲೂಕಿನ ಕುರುಡುಪದವಿನಲ್ಲಿ ನಾಗರ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಮಹಿಳೆಯ ಅಂತ್ಯ ಅಂತ್ಯಸಂಸ್ಕಾರ ಕ್ಕೆಂದು ಇಟ್ಟ ನೀರನ್ನು ಕುಡಿದು ಮನೆಯವರಲ್ಲಿ ಅಚ್ಚರಿ ಮೂಡಿಸಿದೆ. ಕುರುಡುಪದವಿನ ಪೈವಳಿಕೆ ಎಂಬಲ್ಲಿ ಜುಲೈ 4 ರಂದು ರಾತ್ರಿ 64 ವಯಸ್ಸಿನ ಚೋಮು ಎಂಬವರು ಹಾವುಕಡಿತಕ್ಕೊಳಗಾಗಿ ಮೃತಪಟ್ಟಿದ್ದರು. ಆಶ್ಚರ್ಯವೆಂದರೆ ಮರುದಿನ ಅವರ ಅಂತ್ಯಸಂಸ್ಕಾರದ ವಿಧಿಗೆ ಇಟ್ಟ ನೀರುನ್ನು ಕುಡಿಯುವ ಮೂಲಕ ಕಾಣಿಸಿಕೊಂಡು ಕಣ್ಮರೆಯಾಗಿದೆ. ಮಹಿಳೆಯ ಸಾವಿಗೆ ಕಾರಣವಾದ ನಾಗರ ಹಾವು ಮರುದಿನವೂ ಬಂದು …

Read More »

ಸಿ.ಎಂ ಬದಲಾವಣೆ ವಿಚಾರ ಹಾದಿ ಬೀದಿ ಮಾತಾಗಬಾರದು: ಎಚ್.ಎಂ.ರೇವಣ್ಣ

ಸಿ.ಎಂ ಬದಲಾವಣೆ ವಿಚಾರ ಹಾದಿ ಬೀದಿ ಮಾತಾಗಬಾರದು: ಎಚ್.ಎಂ.ರೇವಣ್ಣ ಮಾಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಈ ಸಮಯದಲ್ಲಿ ಸಿ.ಎಂ ಬದಲಾವಣೆ ಮಾತು ಅಪ್ರಸ್ತುತ ಎಂದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅದ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಬದಲಾವಣೆ ವಿಚಾರ ನಾಲ್ಕಾರು ಮಠದ ಶ್ರೀಗಳ ಮಾತಾಗಿದೆಯಷ್ಟೆ. ಇದು ಹಾದಿ ಬೀದಿ ಮಾತಾಗಬಾರದು. ಪಕ್ಷದಲ್ಲಿ ಏನೂ ಬದಲಾವಣೆ …

Read More »

ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಳವು

 ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಹಳ್ಳ ಬಳಿ ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಸಿದ ಕಳ್ಳರು ಪರಾರಿಯಾಗಿದ್ದಾರೆ. ಬೆಳಗಾವಿ ಶಾಸ್ತ್ರೀನಗರದ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಮಿತ್ ಅಶೋಕ ಪೇರಿವಾಲ ಅವರು ಶಿವಮೊಗ್ಗದ ಮಿತ್ರರಿಗೆ ₹10 ಲಕ್ಷ ಕೊಡಲು, ತಮ್ಮ ಅಂಗಡಿಯ ಕೆಲಸಗಾರ ಚಂದನಾಥ ರಾಮೇಶ್ವರ ಸಿದ್ ಹಾಗೂ ಸುನೀಲ ರಾಜಕುಮಾರ ಪ್ರಜಾಪತ್ ಅವರನ್ನು ಕಳುಹಿಸಿದ್ದರು. ಅವರು ಸಾಗುತ್ತಿದ್ದ ಕಾರ್‌ ಅಡ್ಡಗಟ್ಟಿದ ಕಳ್ಳರು ಹಣ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ …

Read More »

ಚೋರ್ಲಾ ಘಾಟ್‌ಗೆ ಕೇಂದ್ರ ‘ಪ್ರವಾಹ’ ತಂಡದ ಸದಸ್ಯರ ಭೇಟಿ

ಬೆಳಗಾವಿ: ಕರ್ನಾಟಕ- ಗೋವಾ ಗಡಿಯ ಚೋರ್ಲಾ ಘಾಟ್‌ಗೆ ಭಾನುವಾರ ಭೇಟಿ‌ ನೀಡಿದ ಕೇಂದ್ರದ ‘ಪ್ರವಾಹ’ ತಂಡದ ಸದಸ್ಯರು, ಮಳೆ‌ ನಡುವೆಯೇ ಮಹದಾಯಿ ಜಲಾನಯನ ಪ್ರದೇಶ ವೀಕ್ಷಿಸಿದರು. ಚೋರ್ಲಾ ಘಾಟ್ ಮತ್ತು ಹರತಾಳ ನಾಲೆ ವೀಕ್ಷಿಸಿದ ಅಧಿಕಾರಿಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ‘ಅನುಮತಿ ‌ಇಲ್ಲದೆ ಕರ್ನಾಟಕ ‌ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಿದೆ’ ಎನ್ನುವ ಗೋವಾ ಸರ್ಕಾರದ ‌ಆರೋಪದ ಹಿನ್ನೆಲೆಯಲ್ಲಿ ಈ‌ ಸದಸ್ಯರು ಪರಿಶೀಲನೆ ನಡೆಸಿದರು‌. ಆದರೆ, ಇಲ್ಲಿ ಯಾವುದೇ …

Read More »

ಕಳಸಾ – ಬಂಡೂರಿ ತಡೆಯಲು ಗೋವಾ ಯತ್ನ: ಶೆಟ್ಟರ್‌

ಬೆಳಗಾವಿ: ‘ಮಹದಾಯಿ ಜಲಾನಯನ ಪ್ರದೇಶಕ್ಕೆ ‘ಪ್ರವಾಹ’ ಸಂಸ್ಥೆ ಸದಸ್ಯರು ಭೇಟಿ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈಗಾಗಲೇ ನಾವು ಕಾನೂನು ರೀತಿ ಮೇಲುಗೈ ಸಾಧಿಸಿದ್ದೇವೆ. ಅವರು ಬಂದು ನೋಡಿಕೊಂಡು ಹೋಗಲಿ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳಸಾ- ಬಂಡೂರಿ ನಾಲಾ ತಿರುವು ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶ ಬಂದಿದೆ. ಆದರೂ ಗೋವಾ ಸರ್ಕಾರ ಕೇಂದ್ರದ ತಂಡವನ್ನು ಆಹ್ವಾನಿಸಿದೆ. ಯೋಜನೆ ತಡೆಹಿಡಿಯಲು …

Read More »

ಮಕ್ಕಳೇ ದೇವರು ಎಂದ ಸ್ಕೂಲ್‌ ಮಾಸ್ಟರ್‌: ಒಂದು ಶಾಲೆ, ಒಬ್ಬರೇ ಶಿಕ್ಷಕ, 29 ವರ್ಷ ಸೇವೆ!

ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ, ಹೆತ್ತವರ ಜವಾಬ್ದಾರಿ… ಇಂಥವೇ ಕಾರಣಗಳನ್ನು ಮುಂದಿಟ್ಟು ನೌಕರರು ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಬಯಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬರು ಶಿಕ್ಷಕರು ಪೂರ್ತಿ 29 ವರ್ಷಗಳನ್ನು ಒಂದೇ ಶಾಲೆಯಲ್ಲಿ ಕಳೆದಿದ್ದಾರೆ. ಸೇವೆ ಆರಂಭಿಸಿದ ಶಾಲೆಯಲ್ಲಿಯೇ ನಿವೃತ್ತಿ ಹೊಂದಿದ್ದಾರೆ! ವೇತನ ಪಡೆದು ಸರ್ಕಾರಿ ಕೆಲಸ ಮಾಡುವವ ರದ್ದು ಸೇವೆಯಲ್ಲ, ಅದು ಕರ್ತವ್ಯ ಅಂತ ಹೆಚ್ಚಿನವರು ಪ್ರತಿಪಾದಿಸುತ್ತಾರೆ. ಇಲ್ಲಿ ಪರಿಚಯಿಸುತ್ತಿರುವ ಶಿಕ್ಷಕರದ್ದು ಸೇವೆಯೋ, ಕರ್ತವ್ಯವೋ ಓದುಗರೇ ನಿರ್ಧರಿಸಬೇಕು. …

Read More »