Daily Archives: ಜುಲೈ 4, 2024

ಚಿಕ್ಕೋಡಿ: ₹18 ಲಕ್ಷಕ್ಕೆ ಎತ್ತು ಖರೀದಿ

ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬಬಲಾದಿಯ ದ್ಯಾವನಗೌಡ ಪಾಟೀಲ ಅವರು ಸಾಕಿದ ಎತ್ತನ್ನು ರಾಯಬಾಗ ತಾಲ್ಲೂಕಿನ ಇಡ್ನಾಳ ಗ್ರಾಮದ ರೈತ ಸದಾಶಿವ ಢಾಂಗೆ ಅವರು ₹ 18 ಲಕ್ಷಕ್ಕೆ ಖರೀದಿಸಿದ್ದಾರೆ. ಆರು ವರ್ಷ ವಯಸ್ಸಿನ ಈ ಎತ್ತಿನ ಮೂಲ ಹೆಸರು ‘ಹಿಂದೂಸ್ತಾನ್‌’. ಈಗ ರೈತ ಇಟ್ಟ ಹೆಸರು ‘ಟೈಗರ್‌’. ಶರ್ಯತ್ತಿನಲ್ಲಿ ಇದರ ಹೆಸರು ಚಿರತೆ. ದ್ಯಾವನಗೌಡ ಅವರು ಇದನ್ನು ಮೂರು ವರ್ಷ ವಯಸ್ಸಿನ ಕರು ಇದ್ದಾಗ ₹1 ಲಕ್ಷಕ್ಕೆ ಖರೀದಿಸಿದ್ದರು. …

Read More »

ಭಾರೀ ಮಳೆ ಹಿನ್ನೆಲೆ : ದಕ್ಷಿಣ ಕನ್ನಡ ಜಿಲ್ಲೆಯ ಈ ತಾಲ್ಲೂಕುಗಳ ಶಾಲೆಗಳಿಗೆ ರಜೆ

ಉಡುಪಿ : ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಲೆಗಳಿಗೆ ಜು.4ರ ಇಂದು ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಬಂಟ್ವಾಳ ತಾಲೂಕಿನ ಎಲ್ಲ ಶಾಲೆಗಳಿಗೆ ತಹಶೀಲ್ದಾರ್ ರಜೆ …

Read More »

ಪವರ್‌ ಟಿವಿ ಪ್ರಸಾರ ಆರಂಭಕ್ಕೆ ಅನುಮತಿ ನೀಡದ ಕೋರ್ಟ್

ಬೆಂಗಳೂರು, ಜುಲೈ 04: ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರ ಮತ್ತೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿಲ್ಲ. ಪರವಾನಿಗೆ ನವೀಕರಿಸುವವರೆಗೂ ಪ್ರಸಾರ ರದ್ದು ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಲಾಗಿದೆ. ಪವರ್ ಟಿವಿ ಕಡೆಯಿಂದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿರುವ ಉತ್ತರವನ್ನು ಪರಿಗಣಿಸಿ ಪರವಾನಿಗೆ ನವೀಕರಿಸುವ ಕುರಿತು 6 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ …

Read More »

ರಸ್ತೆಗಿಳಿಯಲಿವೆ ‘ವಿಮಾನ ಮಾದರಿ ಬಸ್’

ನವದೆಹಲಿ: ಶೀಘ್ರದಲ್ಲಿಯೇ ವಿಮಾನ ಮಾದರಿಯ ಬಸ್ ಗಳನ್ನು ರಸ್ತೆಗಿಳಿಸಲಾಗುವುದು. ಈ ಬಸ್ ಗಳ ಪ್ರಯಾಣ ದರ ಮಾಮೂಲಿ ಬಸ್ ಗಳಿಗಿಂತಲೂ ಶೇಕಡ 30ರಷ್ಟು ಕಡಿಮೆ ಇರಲಿದೆ. ಸಧ್ಯವೇ ನಾಗಪುರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.   ಮಹಾರಾಷ್ಟ್ರದ ನಾಗಪುರದಲ್ಲಿ 132 ಸೀಟ್ ಗಳ ವಿಮಾನ ಮಾದರಿಯ ಬಸ್ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಬಸ್ ಸಖಿಯರು ಕೂಡ ಇರಲಿದ್ದು, ಪ್ರಯಾಣಿಕರಿಗೆ ನೆರವು …

Read More »

ಡಿಸ್ಚಾರ್ಜ್​ ಆದ ಬೆನ್ನಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಬಿಜೆಪಿ ಹಿರಿಯ ನಾಯಕ

ಡಿಸ್ಚಾರ್ಜ್​ ಆದ ಬೆನ್ನಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಬಿಜೆಪಿ ಹಿರಿಯ ನಾಯಕ ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿಯ ಹಿರಿಯ ನಾಯಕ ಲಾಲ್​ ಕೃಷ್ಣ ಅಡ್ವಾಣಿ ಅವರು ಮತ್ತೊಮ್ಮೆ ಇಂದು (ಜುಲೈ 04) ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ವಾರದ ಹಿಂದಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್​) ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಸ್ತುತ ಅಡ್ವಾಣಿ ಅವರು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದ್ದು, ಅವರ …

Read More »

ಪವಿತ್ರಾಗೌಡ ದರ್ಶನ್‌ ಪತ್ನಿ ಅಲ್ಲ, ನಾನು ಪತ್ನಿ : ವಿಜಯಲಕ್ಷ್ಮಿ ಪತ್ರ

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಪವಿತ್ರಾಗೌಡಳನ್ನು ದರ್ಶನ್‌ ಪತ್ನಿ ಎಂದು ಉಲ್ಲೇಖಿಸದಂತೆ ನಗರ ಪೊಲೀಸ್‌ ಆಯುಕ್ತರಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಪತ್ರ ಬರೆದಿದ್ದಾರೆ. ಈ ಕುರಿತು ಪತ್ರದಲ್ಲಿ ಉಲ್ಲೇಖಿಸಿರುವ ವಿಜಯಲಕ್ಷ್ಮೀ, ನಾನು ನಟ ದರ್ಶನ್‌ ಅವರನ್ನು ೨೦೦೩ ರಲ್ಲಿ ಮದುವೆಯಾಗಿದ್ದು, ನಮಗೆ ಓರ್ವ ಮಗನಿದ್ದಾನೆ. ಆದರೆ ಸಂಜಯ್‌ ಸಿಂಗ್‌ ಎಂಬುವರ ಜೊತೆಗೆ ಪವಿತ್ರಾಗೌಡಳಿಗೆ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗಳಿದ್ದಾಳೆ. ಆದರೆ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ದರ್ಶನ್‌ ಅವರ …

Read More »

ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ʻಡೆಂಗ್ಯೂʼ ಪರೀಕ್ಷೆಗೆ 300 ರೂ. ದರ ನಿಗದಿ : ರಾಜ್ಯ ಸರ್ಕಾರ ಆದೇಶ

ಬೆಂಗಲೂರು : ರಾಜ್ಯದಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘಿ ಪರೀಕ್ಷೆಗೆ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲ ರಾಜ್ಯ ಸರ್ಕಾರ ಪರೀಕ್ಷಾ ಶುಲ್ಕಗಳನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.   ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮ.ವಿ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ ಡೆಂಗಿಜ್ವರ ಪತ್ತೆ ಹಚ್ಚುವ ಪರೀಕ್ಷೆಗಳಾದ ಎಲಿಸಾ ಹಾಗೂ ರಾಪಿಡ್ …

Read More »

ವಿಶ್ವಕಪ್​ ಗೆದ್ದು ತಾಯ್ನಾಡಿಗೆ ಕಾಲಿಟ್ಟ ಟೀಮ್​ ಇಂಡಿಯಾ

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಪ್ರತಿಷ್ಠಿತ ವಿಶ್ವಕಪ್​ ಗೆದ್ದು 13 ವರ್ಷಗಳ ಕಪ್​ ದಾಹವನ್ನು ನೀಗಿಸಿರುವ ಟೀಮ್​ ಇಂಡಿಯಾ ಇಂದು ಬೆಳಗ್ಗೆ ತವರಿಗೆ ಮರಳಿದೆ. ತಾಯ್ನಾಡಿಗೆ ಮರಳಿದ ರೋಹಿತ್​ ಶರ್ಮ ಪಡೆಗೆ ಭರ್ಜರಿ ಸ್ವಾಗತ ಕೋರಲಾಗಿದೆ. ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ನಿಂದ ವಿಶೇಷ ಏರ್​ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಟೀಮ್​ ಇಂಡಿಯಾ ಇಂದು (ಜುಲೈ 04) ಬೆಳಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. …

Read More »