Breaking News

ಡಿನ್ನರ್ ಗುತ್ತಿಗೆ ನಾವು ಪಡೆದಿಲ್ಲ…ಪದೋನ್ನತಿ ಬಗ್ಗೆ ಕಾಲ ಬಂದಾಗ ನಿರ್ಣಯ; ಸಚಿವ ಸತೀಶ್ ಜಾರಕಿಹೊಳಿ

Spread the love

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಶಾಸಕರು ಮತ್ತು ಪರಿಷತ್ ಸದಸ್ಯರು ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನಕ್ಕಾಗಿ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇದರಲ್ಲಿ ತಪ್ಪೇನಿದೆ. ಕ್ಷಮತೆಯಿದ್ದರೇ ಸಚಿವರಾಗಬಹುದು. ಒಳ್ಳೆಯ ಆಡಳಿತ ನೀಡಲೂ ಪಕ್ಷದಲ್ಲಿ ಗೊಂದಲ ಇರಬಾರದು. ಇದಕ್ಕಾಗಿಯೇ ಧ್ವನಿ ಎತ್ತಲಾಗಿದೆ ಎಂದರು.

ಇನ್ನು ಡಿನ್ನರ್ ಮೀಟಿಂಗ್’ಗೆ ಸಂಬಂಧಿಸಿದಂತೆ ನಾವೇನು ಎಲ್ಲರಿಗೂ ಊಟ ಮಾಡಿಸುವ ಗುತ್ತಿಗೆಯನ್ನು ಪಡೆದಿಲ್ಲ. ಅವರವರ ಗುಂಪುಗಳಿವೆ. ಅವರು ಕೂಡಿದ್ದಾರೆ. ಅದರಲ್ಲೇನು ವಿಶೇಷತೆಗಳಿಲ್ಲ ಎಂದರು. ಬಾಲಕೃಷ್ಣ ಅವರ ಹೇಳಿಕೆಗೆ ಸಂಬಂಧಿಸಿದಂತೆ ಗೊಂದಲ ಇರುವುದು ನಿಜ. ಅದನ್ನೇ ಅವರು ಇಲ್ಲಿ ಹೇಳಿದ್ದಾರೆ. ಹೈಕಮಾಂಡ್ ಗೊಂದಲ ಬಗೆಹರಿಸಲು ವೀಕ್ ಆಗಿಲ್ಲ ಎಂದರು. ಬೈಟ್

ದೆಹಲಿಯಲ್ಲಿ ಪಕ್ಷದ ಸಾರಥ್ಯದ ಬಗ್ಗೆ ಚರ್ಚೆಯಾಗಿಲ್ಲ ಕೇವಲ ಗೊಂದಲದ ಬಗ್ಗೆ ಚರ್ಚೆಯಾಗಿದೆ ಎಂದರು. ಪದೋನ್ನತಿ ಬಗ್ಗೆ ಕಾಲ ಬಂದಾಗ ನೋಡೋಣ ಎಂದರು.


Spread the love

About Laxminews 24x7

Check Also

ಸಂಸತ್ತು,ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ

Spread the loveಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ