Breaking News
Home / ಹುಬ್ಬಳ್ಳಿ / ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.: ಗುರುಸ್ವಾಮಿ ಸ್ಪಷ್ಟನೆ

ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.: ಗುರುಸ್ವಾಮಿ ಸ್ಪಷ್ಟನೆ

Spread the love

ಹುಬ್ಬಳ್ಳಿ: ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿ, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿತ್ತು.

ಸದ್ಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶ ಮೋಹನ ಗುರುಸ್ವಾಮಿ, ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಡ ಮಠದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶಬರಿನಗರದ ವಿಜಯ ಪೂಜಾರಿ ಹಾಗೂ ಶಂಕರ ಇದ್ದಲಿ ಎಂಬುವವರೇ ನನ್ನ ಏಳಿಗೆಯನ್ನು ಸಹಿಸದೆ ನನ್ನ ವಸ್ತ್ರಗಳನ್ನು ತೆಗೆದು ನಗ್ನ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಮಾರು ದಿನಗಳಿಂದ ನನ್ನ ಏಳಿಗೆಯನ್ನು ಸಹಿಸದೇ ಈ ರೀತಿ ನನ್ನ ಮಾನಹಾನಿ ಮಾಡಿದ್ದಾರೆ. ಈ ಕುರಿತು ನಾನು ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ. ಉಳಿದಂತೆ ಗುರು ಸ್ವಾಮೀಜಿ ನೇತೃತ್ವದಲ್ಲಿಯೇ ಪ್ರತಿ ವರ್ಷ ನೂರಾರು ಜನರಿಗೆ ಮಾಲಾ ದೀಕ್ಷೆ ನೀಡಿ, ಅಂಬಾರಿ ಮೆರವಣಿಗೆ ಮಾಡಲಾಗುತ್ತಿತ್ತು.


Spread the love

About Laxminews 24x7

Check Also

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿರೋ ವಿಶ್ವಕರ್ಮ ಜನರು: ಸ್ಫೋಟಕ ಸಂಗತಿ ಬಯಲು!

Spread the love ಧಾರವಾಡ: ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರೋ ಹಿನ್ನೆಲೆಯಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ