Breaking News
Home / Tag Archives: rain

Tag Archives: rain

ಮದುವೆ ಸಂಭ್ರಮ ಕಸಿದುಕೊಂಡ ಅಕಾಲಿಕ ಮಳೆ – ತಂದೆ ಆಸ್ಪತ್ರೆಯಲ್ಲಿ, ಮಗಳು ಮನೆಯಲ್ಲಿ ಕಣ್ಣೀರು

ಬೆಳಗಾವಿ: ಕಳೆದ ಮೂರುನಾಲ್ಕು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಮಗಳ ಮದುವೆಯ ಸಂಭ್ರಮ ಕಸಿದುಕೊಂಡಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸುರಿದ ಬಾರಿ ಮಳೆ, ಗಾಳಿಗೆ ಚಂದ್ರಶೇಖರ್ ಹುಡೇದ್ ಅವರ ಮನೆ ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿವೆ. ಈ ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನು ನಿಶ್ಚಯ ಮಾಡಿಕೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ …

Read More »

ಹಲವು ಭಾಗಗಳಲ್ಲಿ ಮುಂದುವರಿಯಲಿದೆ ಮಳೆಯಬ್ಬರ,ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಬೆಳೆಗಳು ನಾಶ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿಯಲಿದೆ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ನಾಳೆ ಆರೆಂಜ್ ಮತ್ತು ನಾಡಿದ್ದು ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಲಬುರಗಿಯ ಮಂದಿ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, …

Read More »

ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್

ಶಿವಮೊಗ್ಗ: ರಾಜ್ಯದ ಬಹುತೇಕ ಕಡೆ ವರುಣ ಅಬ್ಬರಿಸಿದ್ದು, ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಆಗುಂಬೆ ಬಳಿ ಸಹ ಮಳೆ ವಿಪರೀತವಾಗಿ ಸುರಿಯುತ್ತಿದ್ದು, ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ನೀರು ಆಗುಂಬೆಯ ಭಾಗಗಳ ತೋಟ, ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಶಿವಮೊಗ್ಗ-ಆಗುಂಬೆ-ಮಂಗಳೂರು ಎನ್.ಹೆಚ್ 169-ಎ …

Read More »

ಮಳೆ ನೀರಲ್ಲಿ ಕೊಚ್ಚಿ ಹೋದ ಯುವಕ……

ಬೆಂಗಳೂರು: ರಾಜ್ಯದ ಹಲವೆಡೆ ಇಂದು ವರುಣ ಅಬ್ಬರಿಸಿದ್ದು, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಮಳೆ ನೀರಿನ ರಭಸಕ್ಕೆ ಯುವಕ ಕೊಚ್ಚಿಹೋಗಿದ್ದು, ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ್ದಿದ್ದು, ಅಫಜಲಪುರ್, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಅಲ್ಲದೆ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಮೃತ ಯುವಕ ಸಿದ್ದರಾಜು ಅಫಜಲಪುರ ಜೆಸ್ಕಾಂನಲ್ಲಿ ಎಇಇ …

Read More »

ಕರುನಾಡಲ್ಲಿ ಮತ್ತೆ ವರುಣ ಮತ್ತಷ್ಟು ಭೀತಿ ಹುಟ್ಟಿಸಿದ್ದಾನೆ.

ಬೆಂಗಳೂರು: ಕರುನಾಡಲ್ಲಿ ಮತ್ತೆ ವರುಣ ಮತ್ತಷ್ಟು ಭೀತಿ ಹುಟ್ಟಿಸಿದ್ದಾನೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ.ರಾಜಧಾನಿ ಬೆಂಗಳೂರಲ್ಲಿ 2 ದಿನಗಳ ಹಿಂದೆ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಕೊಂಚು ಬಿಡುವು ಕೊಟ್ಟಿದ್ದಾನೆ. ಆದರೆ ಮೋಡ ಕವಿದ ವಾತಾವರಣವಿದೆ. ಇನ್ನುಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ …

Read More »

ಆಟಿಕೆಗಳಂತೆ ಕೊಚ್ಚಿ ಹೋಯ್ತು ಬೈಕುಗಳು –

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ರಾತ್ರಿ ಮಳೆ ಮುಂದುವರೆದಿದೆ. ಬುಧವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ಮನೆ, ಅಪಾರ್ಟ್‍ಮೆಂಟ್‍ಗಳು ಜಲಾವೃತವಾಗಿವೆ. ಜನರು ಹೊರ ಬರುವುದಕ್ಕೂ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಮಳೆಗೆ ಪೂರ್ತಿ ಜಲಾವೃತವಾಗಿದ್ದ ಹೊರಮಾವು ನಗರಕ್ಕೆ ರಾತ್ರಿ ಸುರಿದ ಮಳೆ ಜಲದಿಗ್ಬಂಧನ ಹಾಕಿದೆ. ಆರ್‍ಆರ್ ನಗರದಲ್ಲಿ ರಾಜಕಾಲುವೆ ಒಡೆದುಕೊಂಡು ಮನೆಗಳಿಗೆ ನೀರು ನುಗ್ಗಿದೆ. ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಚೊಕ್ಕಸಂದ್ರ, ಶಿವಾನಂದ ಸರ್ಕಲ್, ಪೀಣ್ಯ, ದಾಸರಹಳ್ಳಿ ಮತ್ತು …

Read More »

ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆ……………

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ರಾತ್ರಿ ಪೂರ್ತಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ಸಿಲಿಕಾನ್ ಸಿಟಿಯ ಹೆಚ್‍ಎಸ್‍ಆರ್ ಲೇಔಟ್ ಮತ್ತು ಹೊರಮಾವು ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಶಾಂತಿನಗರ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಮಲ್ಲೇಶ್ವರಂ, ಶಿವಾಜಿನಗರ, ಹೆಬ್ಬಾಳ, ರಾಜಾಜಿನಗರ, ಕೋರಮಂಗಲ, ಕೆಆರ್ ಪುರಂ ಮತ್ತು ಹೆಗ್ಡೆ ನಗರ ಸೇರಿದಂತೆ ಹಲವೆಡೆ ವರಣ …

Read More »

ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಮಹಾ ಮಳೆಗೆ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಸಂಭವಿಸಿದ್ದು, ಇದೀಗ ಹವಾಮಾನ ಇಲಾಖೆ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಲ್ಲದೆ ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಆಗಸ್ಟ್ 9 ರಿಂದ 13ರವರೆಗೆ ವರುಣ ಅಬ್ಬರಿಸಲಿದ್ದಾನೆ. ಶಿವಮೊಗ್ಗ, ಚಿಕ್ಕಮಗಳೂರು, …

Read More »

ಮಳೆಗೆ ಇನ್ನೂ ಸಿದ್ಧವಾಗದ ನಗರಸಭೆ, ಗ್ರಾಮ ಪಂಚಾಯ್ತಿಗಳು…………

ಯಾದಗಿರಿ: ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆ ಬಂದಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.   ಪರಿಣಾಮ ರಸ್ತೆ ತುಂಬೆಲ್ಲಾ ಕೊಳಚೆನೀರು ನಿಂತು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಯಾದಗಿರಿ ನಗರದ ಗಾಂಧಿ ವೃತ್ತ, ನಗರ ಪೋಲಿಸ್ ಠಾಣೆಯ ಮುಂದೆ ನೀರು ನಿಂತು ಕೆರೆಯಂತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗಿದ್ದರೂ …

Read More »