Home / Tag Archives: laxminews (page 17)

Tag Archives: laxminews

ಮಳೆಗೆ ಇನ್ನೂ ಸಿದ್ಧವಾಗದ ನಗರಸಭೆ, ಗ್ರಾಮ ಪಂಚಾಯ್ತಿಗಳು…………

ಯಾದಗಿರಿ: ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆ ಬಂದಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.   ಪರಿಣಾಮ ರಸ್ತೆ ತುಂಬೆಲ್ಲಾ ಕೊಳಚೆನೀರು ನಿಂತು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಯಾದಗಿರಿ ನಗರದ ಗಾಂಧಿ ವೃತ್ತ, ನಗರ ಪೋಲಿಸ್ ಠಾಣೆಯ ಮುಂದೆ ನೀರು ನಿಂತು ಕೆರೆಯಂತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗಿದ್ದರೂ …

Read More »

ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು………..

ನವದೆಹಲಿ: 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಟೆಲಿಕಾಮ್ ಇಲಾಖೆ “ಚೀನಾ ವಸ್ತು ಬಹಿಷ್ಕಾರ”ದ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾವೇ ಕಂಪನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ …

Read More »

ಯೋಚಿಸಿ ಮಾತನಾಡುವಂತೆ ಸಿದ್ದುಗೆ ಕೋಟ ಶ್ರೀನಿವಾಸ್ ವಾರ್ನ್

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯೋಚಿಸಿ ಮಾತನಾಡುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ವಾರ್ನ್ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತ-ಚೀನಾ ಗಡಿಯಲ್ಲಿ ಬೆಳವಣಿಗೆ ಬಗ್ಗೆ ಪ್ರಧಾನಿ ಮೌನವನ್ನ ದೇಶದ್ರೋಹಕ್ಕೆ ಹೋಲಿಸಿ ಮಾತನಾಡಿದ್ದಕ್ಕೆ ಮಾಜಿ ಸಿಎಂಗೆ ಕೋಟ ತಿರುಗೇಟು ನೀಡಿದರು. ಈಗ ದೇಶದಲ್ಲಿ ತಾಕತ್ತಿನ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಸೈನಿಕರ ಬೆನ್ನಿಗೆ ನಿಂತು ಗುಂಡು ಹಾರಿಸಿ ಎಂದು ಹೇಳುವ ಪ್ರಧಾನಿ ಇದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಯುದ್ಧ …

Read More »

ವಿಧಾನಪರಿಷತ್‍ ಚುನಾವಣೆ ,ನಾಮಪತ್ರ ಸಲ್ಲಿಕೆ ಭರಾಟೆ ,,,,,,,,,,,,

ಬೆಂಗಳೂರು, ಜೂ.- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ನ ಏಳು ಸದಸ್ಯ ಸ್ಥಾನಗಳಿಗೆ ಇದೇ 29ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು  ನಾಮಪತ್ರ ಸಲ್ಲಿಸಲಿದ್ದಾರೆ. ವಿರೋಧ ಪಕ್ಷಗಳಾದ ಕಾಂಗ್ರೆಸ್‍ನ ಇಬ್ಬರು, ಜೆಡಿಎಸ್‍ನ ಒಬ್ಬ ಹಾಗೂ ಆಡಳಿತಾರೂಢ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು  ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂರು ಪಕ್ಷಗಳಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇದುವರೆಗೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ …

Read More »

ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಚಿಕ್ಕೋಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳ………

ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಚಿಕ್ಕೋಡಿ, ನಿಪ್ಪಾಣಿ ಭಾಗದ ನದಿಗಳ ಒಳಹರಿವಿನ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡಿದ್ದು, ದೂಧ್ ಗಂಗಾ, ವೇದ ಗಂಗಾ, ಕೃಷ್ಣಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ ಈ ವರ್ಷವೂ ಪ್ರವಾಹದ ಭೀತಿ ಎದುರಾಗಿದೆ. ನಿಪ್ಪಾಣಿ ತಾಲೂಕಿನ ದೂಧ್ ಗಂಗಾ ನದಿಯ ಒಳಹರಿವಿನ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, …

Read More »

ವಿಪರೀತ ಮಳೆ ಲಾರಿ ಪಲ್ಟಿ- 190 ಚೀಲ ಸಕ್ಕರೆ ಎಗರಿಸಿದ ಜನ………

ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ಥವ್ಯವಸ್ಥವಾಗಿದ್ದು, ನದಿಗಳ ಒಳಹರಿವು ಹೆಚ್ಚಾಗಿ ರಸ್ತೆಗಳು ಬಂದ್ ಆಗಿವೆ. ಇದರ ಮಧ್ಯೆಯೇ ಸಕ್ಕರೆ ಸಾಗಿಸುತ್ತಿದ್ದ ಲಾರಿ ಮೊಗಚಿ ಬಿದ್ದಿದೆ. ಬೆಳಗಾವಿ ತಾಲೂಕಿನ ಸುತಗತ್ತಿ ಗ್ರಾಮದ ಸಮೀಪ ತಡರಾತ್ರಿ ಘಟನೆ ನಡೆದಿದ್ದು, ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆ ಹೊತ್ತು ಲಾರಿ ರಾಜ್ಯಕ್ಕೆ ಆಗಮಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. …

Read More »

ನಮ್ಮ ತಾಳ್ಮೆಯನ್ನು ಕೆಣಕಬೇಡಿ -ವೈರಿ ಚೀನಾಗೆ ಮೋದಿ ಖಡಕ್ ಸಂದೇಶ…………..

ನವದೆಹಲಿ: ಚೀನಾ ಮತ್ತು ಭಾರತ ಗಡಿಯಲ್ಲಿ ಉಂಟಾಗಿರುವ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿ ವೈರಿ ಚೀನಾಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಯ ಸಭೆಯ ಆರಂಭದಲ್ಲಿ ಚೀನಾ ಸಂಘರ್ಷದ ಕುರಿತು ಮಾತನಾಡಿದರು. ದೇಶವನ್ನು ರಕ್ಷಿಸಿಕೊಳ್ಳಲು ನಮ್ಮನ್ನು ಯಾರು ತಡೆಯುವರು ಇಲ್ಲ ಭಾರತ ಶಾಂತಿಯನ್ನು ಬಯಸುತ್ತೆ. ಆದ್ರೆ ನಮ್ಮನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹುತಾತ್ಮ ಯೋಧರು ಕೊನೆಯವರೆಗೂ ಹೋರಾಡಿದ್ದಾರೆ. ಭಾರತಕ್ಕೆ ಶಾಂತಿ ಬೇಕು, ನಮ್ಮ ತಾಳ್ಮೆಯನ್ನು …

Read More »

ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲಾಗಲ್ಲ: ಎಚ್‍ಡಿಕೆ

ಬೆಂಗಳೂರು: ಭಾರತ ಹಾಗೂ ಚೀನಾ ನಡುವೆ ಯುದ್ಧ ಸಂಘರ್ಷವಾಗಿದ್ದು, ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ದುರದೃಷ್ಟಕರ ವಿಚಾರವಾಗಿದೆ. ಈಗಾಗಲೇ ದೇಶದಲ್ಲಿ ಕೋವಿಡ್ 19 ಸಮಸ್ಯೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಈ ವೇಳೆ ನಮ್ಮ ದೇಶ ಮತ್ತು ಚೀನಾ ದೇಶದ ನಡುವೆ ಸಂಘರ್ಷ …

Read More »

ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ ಎನ್ನುವುದು ಮೀಡಿಯಾಗಳ ಸೃಷ್ಟಿ: ರಮೇಶ ಜಾರಕಿಹೊಳಿ

ಗೋಕಾಕ : ಬೆಳಗಾವಿ ತಾಲೂಕಾ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ   ನಡೆದ ಮಾತಿನ ಚಕಮಕಿ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೋಕಾಕದಲ್ಲಿ ಪ್ರತಿಕ್ರಿಯೆ ನೀಡಿ  ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ ಎನ್ನುವುದು ಮೀಡಿಯಾಗಳ ಸೃಷ್ಟಿ, ಲಕ್ಷ್ಮಿ ಹೆಬ್ಬಾಳ್ಕರ್ ನನಗೆ ಸವಾಲು ಹಾಕಿಲ್ಲ. ಅವರ ಪಕ್ಷದ ಪರವಾಗಿ ಅವರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.  ನಗರದ ತಾ. ಪಂ. ಕಚೇರಿಯಲ್ಲಿ …

Read More »

ಸಹೋದರರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಮ್ಮ ಅಂದರ್………….

ಬೆಂಗಳೂರು, ಜೂ.17- ಒಡಹುಟ್ಟಿದ ಇಬ್ಬರು ಸಹೋದರರನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಮ್ಮನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಬಂಧಿತ ಕೊಲೆ ಪ್ರಕರಣದ ಆರೋಪಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಎಸ್. ಅವರು ಈ ಸಂಜೆಗೆ ತಿಳಿಸಿದ್ದಾರೆ. ಈತ ತನ್ನ ಅಣ್ಣಂದಿರಾದ ಸಹದೇವ ಮತ್ತು ದಂಡಪಾಣಿ ಎಂಬುವರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು. ಈ ಬಗ್ಗೆ ಪ್ರಕರಣ …

Read More »