ಧಾರವಾಡ, ಫೆ.24-ಭಾರತೀಯ ಸೇನೆಯ ತರಬೇತಿಯ ಸಮಯದಲ್ಲಿ ತಲೆಗೆ ಬಲವಾದ ಏಟು ಬಿದ್ದು, ಯೋಧನೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗಪುರ ಸೇನಾ ಕ್ಯಾಂಪ್‍ನಲ್ಲಿ ನಡೆದಿದೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಮಹೇಶ್ ಸಿಂಗನಹಳ್ಳಿ (20) ಮೃತಪಟ್ಟ ಯೋಧ.
ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಸೇನೆಗೆ ಸೇರಿದ್ದ ಇವರು ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಇಂದು ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು, ಯೋಧನ ಅಗಲಿಕೆಯಿಂದ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.