ಅಜ್ಞಾತ ಯುವಕರಿಂದ ನೆಹರು ನಗರ ಹಾಸ್ಟೆಲ್ ಮೇಲೆ ಹಲ್ಲೆಗೆ ಯತ್ನ , ಕಲ್ಲು ತೂರಾಟ !!

Spread the love

ಅಜ್ಞಾತ ಯುವಕರಿಂದ ನೆಹರು ನಗರ ಹಾಸ್ಟೆಲ್ ಮೇಲೆ ಹಲ್ಲೆಗೆ ಯತ್ನ , ಕಲ್ಲು ತೂರಾಟ !!

ಭಾನುವಾರ ಸಂಜೆ ಎಂದಿನಂತೆ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದರೆ ಇತ್ತ 15-20 ಜನರ ಯುವಕರ ಗುಂಪೊಂದು ಸಮಾಜ ಕಲ್ಯಾಣ ಇಲಾಖೆಯ ನೆಹರು ನಗರದ ಹಾಸ್ಟೆಲ್ ಮೇಲೆ ಏಕಾಏಕಿ ದೊಣ್ಣೆ-ಬಡಿಗೆ ಗಳೊಂದಿಗೆ ಹಲ್ಲೆ ನಡೆಸಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಸುಮಾರು 15 ಕ್ಕೂ ಹೆಚ್ಚು ಜನರ ಗುಂಪೊಂದು ಸಂಜೆ 7.45 ರ ಸುಮಾರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಇಲ್ಲಿನ ಹಾಸ್ಟೆಲ್ ನಲ್ಲಿ ನುಗ್ಗಿದ್ದು ಹಾಸ್ಟೆಲನ ಗಾಜು ಕಿಟಕಿಗಳನ್ನು ಪುಡಿ-ಪುಡಿ ಮಾಡಿದ್ದಾರೆ.ಅದೃಷ್ಟವಶಾತ ಈ ಘಟನೆಯಲ್ಲಿ ಯಾವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿಲ್ಲ . ಆದರೆ ಏಕಾಏಕಿ ನಡೆದ ಈ ಬೆಳವಣಿಗೆಯಿಂದ ವಸತಿ ನಿಲಯದ ವಿದ್ಯಾರ್ಥಿಗಳು ಭಯಭೀತಿಗೊಂಡಿದ್ದು ಸ್ಥಳಕ್ಕೆ ದೌಡಾಯಿಸಿದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.ಇನ್ನು ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿದ್ದು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಹುಡುಗಿ ಚುಡಾಯಿಸಿದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದರು ವಯಕ್ತಿಕ ದ್ವೇಷದ ಹಿನ್ನಲೆ ನಡೆದಿದೆಯೋ ಅಥವಾ ಇನ್ಯಾವ ಕಾಣದ ಕೈಗಳು ಇದರ ಹಿಂದೆ ಇವೆಯಾ ಎಂಬ ಸತ್ಯ ತನಿಖೆಯಿಂದಷ್ಟೇ ಹೊರಬೀಳಬೇಕಿದೆ .


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ