ರಾತ್ರೋ ರಾತ್ರಿ ಕಿಚ್ಚನ ಮನೆಗೆ ಬಂದು BMW M5 ಕಾರ್ ಉಡುಗೊರೆ ಕೊಟ್ಟ ಸಲ್ಮಾನ್ ಖಾನ್... ಕಾರ್ ಬೆಲೆ ಎಷ್ಟು ಕೋಟಿ ಗೊತ್ತಾ?
ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರ ದಬಾಂಗ್ 3 ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲದೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಅವರಿಗೂ ಬಿ ಟೌನ್ ನಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು..
ಈ ಸಿನಿಮಾದ ಮೂಲಕ ಕಿಚ್ಚ ಹಾಗೂ ಸಲ್ಮಾನ್ ಖಾನ್ ಬಹಳ ಅತ್ಮೀಯರಾದರು.. ಈ ಮುನ್ನ ಬೆಂಗಳೂರಿಗೆ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸಲ್ಮಾನ್ ಖಾನ್ ಬಂದಾಗ ಕಿಚ್ಚನ ಮನೆಗೆ ಭೇಟಿ ನೀಡಿದ್ದರು..
ಇದೀಗ ಇದ್ದಕ್ಕಿದ್ದ ಹಾಗೆ ರಾತ್ರೋ ರಾತ್ರಿ ಸುದೀಪ್ ಅವರಿಗೆ ಉಡುಗೊರೆಯೊಂದನ್ನು ಕೊಡುವ ಸಲುವಾಗಿ ಸ್ವತಃ ತಾವೇ ಕಿಚ್ಚನ ಮನೆಗೆ ಆಗಮಿಸಿದ್ದಾರೆ.. ಹೌದು BMW M5 ಕಾರನ್ನು ಕಿಚ್ಚನಿಗೆ ಖುದ್ದು ಸಲ್ಮಾನ್ ಖಾನ್ ಅವರೇ ಆಗಮಿಸಿ ಉಡುಗೊರೆಯಾಗಿ ನೀಡಿದ್ದಾರೆ..
ಈ ಕಾರಿನ ಬೆಲೆ ಬರೋಬ್ಬರಿ 1.5 ಕೋಟಿ ರೂಪಾಯಿ.. ದುಬಾರಿ ಬೆಲೆಯ ಉಡುಗೊರೆ ನೀಡಿರುವ ಸಲ್ಮಾನ್ ಖಾನ್ ಅವರಿಗೆ ಕಿಚ್ಚ ಸುದೀಪ್ ಅವರು ಧನ್ಯವಾದ ತಿಳಿಸಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.. “ಒಬ್ಬರಿಗೆ ಒಳ್ಳೆಯದನ್ನ ಬಯಸಿದರೆ ನಮಗೂ ಒಳ್ಳೆಯದೇ ಆಗುತ್ತದೆ ಅನ್ನೋದು ಸತ್ಯ.. ಇಷ್ಟೊಂದು ಪ್ರೀತಿಯನ್ನು ನನ್ನ ಹಾಗೂ ನನ್ನ ಕುಟುಂಬದ ಮೇಲೆ ತೋರುತ್ತಿರುವುದಕ್ಕೆ ಧನ್ಯವಾದಗಳು ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ..