Breaking News

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ

Spread the love

ಬೆಂಗಳೂರು: 7ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದಿಲ್ಲ. ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ಮಾಡುವ ಮೂಲಕ ಮಗುವಿನ ಮೌಲ್ಯಮಾಪನ ಮಾಡಲಾಗುವುದು. ಈ ಮೌಲ್ಯಮಾಪನ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಪಾಸ್ ಅಥವಾ ಫೇಲ್ ಎಂದು ಮಾಡಲಾಗುವುದಿಲ್ಲ. ಪರೀಕ್ಷೆ ಫಲಿತಾಂಶ ವಿದ್ಯಾರ್ಥಿವಾರು ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನ ಮಾಡಿ ಮಗು ಯಾವ ವಿಷಯದಲ್ಲಿ ಕಡಿಮೆ ಅಂಕ ಪಡೆದಿದೆ ಆ ವಿಷಯದಲ್ಲಿ 8ನೇ ತರಗತಿಯಿಂದ ಮಗುವಿಗೆ ಅಗತ್ಯ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಕ್ಕಳ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಲು ತಯಾರು ಮಾಡೋದು ಈ ಮೌಲ್ಯಮಾಪನ ಪರೀಕ್ಷೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಈ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಗೆ ರಾಜ್ಯಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ತಯಾರು ಮಾಡಲಾಗುತ್ತದೆ. ಪರೀಕ್ಷೆಯನ್ನು ಅದೇ ಶಾಲಾ ಶಿಕ್ಷಕರೇ ನಡೆಸುತ್ತಾರೆ. ಮೌಲ್ಯಮಾಪನವನ್ನ ಜಿಲ್ಲಾವಾರು ಶಿಕ್ಷಕರು ಮಾಡುತ್ತಾರೆ್ ಎಂದರು.


Spread the love

About Laxminews 24x7

Check Also

ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ

Spread the love ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ ಇಳಕಲ್ ಹೊರವಲಯದ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ