ಆಶಾ ಕಾರ್ಯಕರ್ತೆಯರಿಗೆ ನೀಡಬೇಕಿದ್ದ 15 ತಿಂಗಳ ಬಾಕಿ ಪ್ರೊತ್ಸಾಹ ಧನವನ್ನು ಪಾವತಿಸಬೇಕು ಅಲ್ಲಿಯವರೆಗೂ ಅನಿರ್ಧಿಷ್ಟಾವದಿ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಆಶಾ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ವಿವಿಧ ಬೇಡಿಕೆಗಳಲ್ಲಿ ಒಂದಾದ ಎಂ.ಸಿ.ಟಿಎಸ್ ಪ್ರೊತ್ಸಾಹ ಧನವನ್ನು ಪಾವತಿಸುವವರೆಗೂ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವದಿ ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ ಕೂಡಲೇ ನಮ್ಮಬೇಡಿಕೆಗಳನ್ನು ಈಡೇರಿಸಬೇಕು. ನಮ್ಮನ್ನು ಕೆಲಸದಿಂದ ತೆಗೆಯುವ ಬೆದರಿಕೆ ಹಾಕುವುದನ್ನು ಕೈಬಿಡಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತರ ಆಕ್ರೋಶದಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಗುಲಾಬಿಮಯವಾಗಿತ್ತು.
ನಗರದ ಸರದಾರ ಮೈದಾನದಿಂದ ಪ್ರತಿಭಟನೆ ಪ್ರಾರಂಭಿಸಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿದ ಅವರು 15 ತಿಂಗಳುಗಳು ಕಳೆದರೂ ಎಂಸಿಟಿಎಸ್ ಪ್ರೊತ್ಸಾಹ ಧನವನ್ನು ಪಾವತಿ ಮಾಡಿಲ್ಲ ಅದ್ದರಿಂದ ಕೆಲಸಕ್ಕೆ ಹಾಜರಾಗದೇ ಇದ್ದಿದ್ದರಿಂದ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ. ಒಂದು ವೇಳೆ ಹಣ ಪಾವತಿಸದಿದ್ದರೆ ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಆರೋಗ್ಯ ಸೇವೆ, ಸರ್ವೆ, ತರಬೇತಿ ಪರೀಕ್ಷೆ ಮತ್ತು ಸಭೆಗಳನ್ನೂ ಸ್ಥಗಿತಗೊಳಿಸುತ್ತೇವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೋಟಿಗಟ್ಟಲೇ ದುಡ್ಡನ್ನು ದೋಚಿಕೊಂಡು ಹೋದವರ ಮೇಲೆ ಕ್ರಮ ಕೈಗೊಳ್ಳದೇ ಕೈಕಟ್ಟಿ ಕುಳತಿದ್ದಿರಿ ಅದಕ್ಕಾಗಿ ಸರಕಾರದ ಬೊಕ್ಕಸ ಖಾಲಿಯಾಗಿದೆ ಅದನ್ನು ಮುಚ್ಚಿ ಹಾಕಲು ನೋಟ್ ಬ್ಯಾನ್ ಜಾರಿ ಮಾಡಿದಿರಿ ಮೋಸಗಾರರಿಗೆ ಬೆಂಬಲ ನೀಡಿ ನ್ಯಾಯಯುತವಾಗಿ ದುಡಿಯುತ್ತಿರುಶ ಆಶಾ ಕಾರ್ಯಕರ್ತೆಯರಿಗೆ ಮೋಸ ಮಾಡುತ್ತಿದ್ಥಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಗ್ರಾಮೀಣ ಪರಿಸ್ಥಿತಿ ಪಾತಾಳಕ್ಕೆ ಬಿದ್ದಿವೆ ಇದಕ್ಕೆಲ್ಲಾ ಮೋದಿ ತಂದಿರುವ ನೀತಿಗಳೇ ಕಾರಣವಾಗಿವೆ. ಕೇಂದ್ರದಿಂದ ಬಿಡುಗಡೆಗೊಂಡಿರು ಎಂಟಿಎಸ್ ಪ್ರೊತ್ಸಾಹ ಧನವನ್ನು ಬಿಡುಗಡೆಗೊಳಿಸಲು ರಾಜ್ಯ ಸರಕಾರ ಮೀನಾಮೇಷ ಎನಿಸುತ್ತಿದೆ. ಏನಾದರೂ ನೆಪ ಹೇಳಿ ಹಣವನ್ನು ಮುಳುಗಿಸಲು ಮುಂದಾಗಿದ್ದಾರೆ ಎಂದು ಆರೋಫಿಸಿದರು. ನಾವು ಬಿಟ್ಟಿ ಹಣವನ್ನು ಕೇಳುತ್ತಿಲ್ಲ ದುಡಿದ ಶ್ರಮಕ್ಕೆ ಹಣ ನೀಡಿ ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಸುಜಾತಾ ಕಾಡಮಠ ಮಾತನಾಡಿ ನಮ್ಮ ವಿವಿಧ ಬೇಡಿಕೆಗಳಿಗಾಗಿ ಜನೆವರಿ 3ರಂದು ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ಮಾಡಲಾಗಿತ್ತು. ಆದರೆ ಸರಕಾರ ಇತ್ತಕಡೆ ಗಮನ ಹರಿಸಲಿಲ್ಲ ಇದೀಗ ನಮ್ಮ ಶ್ರಮದ ಫಲ ಕೇಳುತ್ತಿದ್ದೇವೆ ಅದಕ್ಕೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ ಇದು ಒಳ್ಳೆಯದಲ್ಲ ಆರೋಗ್ಯ ಇಲಾಖೆಯಲ್ಲಿ ಉಳಿದಿರುವ 65 ಪ್ರತಿಶತ ದುಡ್ಡಲ್ಲಿ ನಮ್ಮ ಹಣ ನಮಗೆ ನೀಡಲಿ ಎಂದು ಆಗ್ರಹಿಸಿ
ಈ ಸಂದರ್ಭದಲ್ಲಿ ಭಾರತಿ ಮಾಶ್ಯಾಳ, ಲತಾ ಜಾಧವ, ಸುಜಾತಾ ಕುಂಬಾರ, ಶೈಲಾ ಚಿಕ್ಕೋಡಿ, ಜಯಶ್ರೀ ನಾವಿ, ರೂಪಾ ಅಂಗಡಿ, ಗಂಗಮ್ಮ ಬೈಲಹೊಂಗಲ್ ಸೇರಿದಂತೆ ಹಲವಾರು ಕಾರ್ಯಕರ್ತೆಯರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು