Home / new delhi / ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

ರಾನು ಮಂಡಲ್​ ಕಂಠದಲ್ಲಿ ‘ಮನಿಕೆ ಮಗೆ ಹಿತೆ’; ಕಿರಿಕಿರಿ ತಾಳಲಾಗದೇ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು

Spread the love

ಯೂಟ್ಯೂಬ್​, ಇನ್​ಸ್ಟಾಗ್ರಾಮ್​ ಮತ್ತು ಇತರೆ ಸೋಶಿಯಲ್​ ಮೀಡಿಯಾದಲ್ಲಿ ‘ಮನಿಕೆ ಮಗೆ ಹಿತೆ’ (Manike Mage Hithe) ಹಾಡನ್ನು ಕೇಳದವರೇ ಇಲ್ಲ. ಅಷ್ಟರಮಟ್ಟಿಗೆ ಈ ಗೀತೆ ಫೇಮಸ್​ ಆಗಿದೆ. ಶ್ರೀಲಂಕಾದ ಗಾಯಕಿ ಯೊಹಾನಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡು 135 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಇದರದ್ದೇ ಹಾವಳಿ. ಜನ ಸಾಮಾನ್ಯರು ಮಾತ್ರವಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಮನಿಕೆ ಮಗೆ ಹಿತೆ’ ಹಾಡಿಗೆ ಮರುಳಾಗಿದ್ದಾರೆ. ಆದರೆ ಅದೇ ಹಾಡನ್ನು ಗುನುಗಿರುವ ರಾನು ಮಂಡಲ್​ (Ranu Mondal) ಅವರು ಹಿಗ್ಗಾಮುಗ್ಗಾ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಒಂದು ಕಾಲದಲ್ಲಿ ರಾತ್ರೋರಾತ್ರಿ ಇಂಟರ್​ನೆಟ್​ನಲ್ಲಿ ಫೇಮಸ್​ ಆದವರು ರಾನು ಮಂಡಲ್​. ರೈಲ್ವೆ ಸ್ಟೇಷನ್​ನಲ್ಲಿ ಹಾಡುತ್ತಿದ್ದ ಅವರು ನಂತರ ದೊಡ್ಡ ದೊಡ್ಡ ಮನರಂಜನಾ ವಾಹಿನಿಗಳ ರಿಯಾಲಿಟಿ ಶೋ ವೇದಿಕೆಗೂ ಕಾಲಿಟ್ಟಿದ್ದರು. ಸಂಗೀತ ನಿರ್ದೇಶಕ ಹಿಮೇಶ್​ ರೇಷಮಿಯಾ ಅವರು ರಾನು ಮಂಡಲ್​ಗೆ ಸಿನಿಮಾದಲ್ಲೂ ಹಾಡುವ ಅವಕಾಶ ನೀಡಿದ್ದರು. ಅನೇಕರಿಗೆ ಅವರ ಕಂಠ ಇಷ್ಟ ಆಗಿತ್ತು. ಆದರೆ ಈಗ ಅದೇ ರಾನು ಮಂಡಲ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ.

‘ಮನಿಕೆ ಮಗೆ ಹಿತೆ’ ಹಾಡನ್ನು ರಾನು ಮಂಡಲ್​ ಹಾಡಿರುವ ವಿಡಿಯೋ ಎಲ್ಲೆಲ್ಲೂ ವೈರಲ್​ ಆಗಿದೆ. ಅನೇಕ ಯೂಟ್ಯೂಬ್​ ಚಾನೆಲ್​ಗಳಲ್ಲಿ ಇದನ್ನು ಅಪ್​ಲೋಡ್​ ಮಾಡಲಾಗಿದೆ. ಅಚ್ಚರಿ ಎಂದರೆ ಅವರು ಹಾಡಿರುವುದು ಕೂಡ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿದೆ. ಕಮೆಂಟ್​ ಸೆಕ್ಷನ್​ಗೆ ಹೋಗಿ ನೋಡಿದರೆ ಬರೀ ನೆಗೆಟಿವ್​ ಮಾತುಗಳೇ ಕಾಣಿಸುತ್ತಿವೆ.

‘ಎಲ್ಲದಕ್ಕೂ ಒಂದು ಕೊನೆ ಅಂತ ಇರುತ್ತದೆ. ರಾನು ಮಂಡಲ್​ ಈ ಕೂಡಲೇ ಇಂಥದ್ದನ್ನೆಲ್ಲ ನಿಲ್ಲಿಸಬೇಕು. ಇವರ ಗಾಯನ ಕೇಳಿ ನನ್ನ ಇಂದ್ರಿಯಗಳು ಸ್ತಬ್ದವಾಯಿತು. ಮತ್ತೆ ಅವು ಸರಿಯಾಗಬೇಕು ಎಂದರೆ ಒರಿಜಿನಲ್​ ಹಾಡು ಕೇಳಲೇಬೇಕು. ರಾನು ಹಾಡಿದನ್ನು ಒಂದುವೇಳೆ ಮೂಲ ಗಾಯಕಿ ಯೊಹಾನಿ ಕೇಳಿಸಿಕೊಂಡರೆ ಅವರು ಜೀವನದಲ್ಲಿ ಹಾಡುವುದನ್ನೇ ತ್ಯಜಿಸಿಬಿಡುತ್ತಾರೆ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ರಾನು ಮಂಡಲ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

 


Spread the love

About Laxminews 24x7

Check Also

ಹಿಂದೂಗಳನ್ನು ರಕ್ಷಿಸುವ ಪಕ್ಷಗಳನ್ನು ಆಯ್ಕೆ ಮಾಡಿ: ದಿಲೀಪ ಪರಾಂಡೆ

Spread the love ಬೆಳಗಾವಿ: ‘ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ಅಧಿಕಾರದಲ್ಲಿರುವ ಬಿಜೆಪಿ ಹೊರತಾದ ಪಕ್ಷಗಳು, ಮುಸ್ಲಿಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ