Breaking News
Home / ಜಿಲ್ಲೆ / ರಾಯಚೂರು: ಐದು ದಿನಗಳಿಂದ ಊಟಕ್ಕಾಗಿ ಪರದಾಡಿದ ಬೀದಿಬದಿಯ ಅಲೆಮಾರಿ

ರಾಯಚೂರು: ಐದು ದಿನಗಳಿಂದ ಊಟಕ್ಕಾಗಿ ಪರದಾಡಿದ ಬೀದಿಬದಿಯ ಅಲೆಮಾರಿ

Spread the love

ರಾಯಚೂರು: ಐದು ದಿನಗಳಿಂದ ಊಟವಿಲ್ಲದೆ ಪರದಾಡಿದ ಬೀದಿಬದಿಯ ಅಲೆಮಾರಿ ವ್ಯಾಪಾರಿಗಳು ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಹೊಟ್ಟೆಪಾಡಿಗೆ ದುಡಿಯಲು ಬಂದ ಅಲೆಮಾರಿಗಳಿಗೆ ಕೆಲಸವಿಲ್ಲದೆ ಊಟವೂ ಇಲ್ಲದಂತಾಗಿದೆ.

ಊಟ ನೀಡುವಂತೆ ಕೇಳಿಕೊಂಡು ತಹಶೀಲ್ದಾರ್ ಕಚೇರಿಗೆ ಮಹಿಳೆಯರು ನುಗ್ಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಐದಾರು ದಿನಗಳಿಂದ ವ್ಯಾಪಾರವೇ ಇಲ್ಲದಾಗಿ ಊಟವೂ ಸಿಕ್ಕಿಲ್ಲ. ದೆಹಲಿಯಿಂದ ವ್ಯಾಪಾರಕ್ಕಾಗಿ ಸಿಂಧನೂರಿಗೆ ಆಗಮಿಸಿದ 10 ಕುಟುಂಬಗಳು ಕಳೆದ 5 ದಿನಗಳಿಂದ ಊಟ ಇಲ್ಲದೇ ಪರದಾಡಿವೆ.

ಹಸಿವು ತಾಳಲಾರದೆ ಸಿಂಧನೂರು ತಹಶೀಲ್ದಾರ್ ಕಛೇರಿಗೆ ನುಗ್ಗಿ ದಿನಸಿ ಅಥವಾ ಊಟದ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ. ಊಟದ ವ್ಯವಸ್ಥೆ ಮಾಡುವವರೆಗೆ ಕಚೇರಿ ಬಿಟ್ಟು ಕದಲುವುದಿಲ್ಲ ಅಂತ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಕೊನೆಗೆ ಸಿಂಧನೂರು ತಹಶೀಲ್ದಾರ್ ಮಂಜುನಾಥ್ 50 ಕೆ.ಜಿ ಅಕ್ಕಿ ನೀಡಿದ್ದು ಊಟದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.


Spread the love

About Laxminews 24x7

Check Also

ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ,

Spread the love ತಮ್ಮದೇ ಮರಣ ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದು ಅಲೆಯುತ್ತಿರೋ ಬಡ ಕುಟುಂಬ.. ಗದಗ ಬೆಟಗೇರಿ ನಗರಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ