Breaking News

ಎಟಿಎಂಗಳಲ್ಲಿ ಹಣ ಖಾಲಿ, ಯಾಮಾರಿದರೆ ಉಚಿತವಾಗಿ ಅಂಟುತ್ತೆ ಕೊರೋನಾ..!

Spread the love

ಹುಬ್ಬಳ್ಳಿಮಾ,31- ಕೊರೊನಾ ವೈರಸ್‌ ತಡೆಗಟ್ಟಲು ಸಾರ್ವಜನಿಕ ಸೇವಾ ವಲಯಗಳಲ್ಲಿ ಕಡ್ಡಾಯವಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟ ಸಂದೇಶ ರವಾನಿಸಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಎಟಿಎಂ ಸೆಂಟರ್ ಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಾ, ಸರಿಯಾಗಿ ನಿರ್ವಹಣೆ ಮಾಡುತಿಲ್ಲ.ಶೇಕಡಾ 75 ರಷ್ಟು ಎಟಿಎಂಗಳಲ್ಲಿ ಹಣವೇ ಖಾಲಿ.ಕೆಲ ರಾಷ್ಟ್ರೀಕೃತ, ಪ್ರಾದೇಶಿಕ ಬ್ಯಾಂಕ್‌ಗಳ ಎಟಿಎಂಗಳಲ್ಲಿಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಬ್ಯಾಂಕ್‌ ಗ್ರಾಹಕರಲ್ಲಿಆತಂಕ ಇನ್ನಷ್ಟು ಸೃಷ್ಟಿಸಿದೆ.

ಜಿಲ್ಲೆಯಲ್ಲಿರುವ 450 ಎಟಿಎಂಗಳಿಗೆ ಸಾವಿರಾರು ಜನ ಹಣ ಡ್ರಾ ಮಾಡಲು ಬರುತ್ತಾರೆ. ಅದರಲ್ಲೂನಗರದ ಪ್ರಮುಖ ಸ್ಥಳದಲ್ಲಿರುವ ಪ್ರತಿ ಎಟಿಎಂಗೆ ನೂರಾರು ಜನ ಬರುತ್ತಾರೆ. ಆದರೆ, ಬಹುತೇಕ ಎಟಿಎಂಗಳಲ್ಲಿಸ್ಯಾನಿಟೈಜರ್‌ ಬಳಕೆಯೇ ಮಾಡುತ್ತಿಲ್ಲ. ಅಲ್ಲದೇ, ಕೆಲ ಎಟಿಎಂಗಳಲ್ಲಿಸ್ವಚ್ಛತೆಯ ಕೊರತೆಯೂ ಎದ್ದು ಕಾಣುತ್ತಿದೆ. ಹೀಗಾಗಿ ಕೊರೊನಾ ವೈರಸ್‌ ಹರಡುವ ಸಾಧ್ಯತೆಯನ್ನು ತಳ್ಳಿಹಾಕದಂತಹ ಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂಎಟಿಎಂಗಳಲ್ಲಿವಾತಾನುಕೂಲ(ಎಸಿ) ಬಳಕೆ ಮಾಡಲಾಗುತ್ತದೆ. ತಂಪು ವಾತಾವರಣದಲ್ಲಿಕೊರೊನಾ ವೈರಸ್‌ ಜೀವಿತಾವಧಿ ಮತ್ತು ಬಹುಬೇಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಎಟಿಎಂಗಳಲ್ಲಿಸೋಂಕಿತ ವ್ಯಕ್ತಿ ಬಂದು ಹೋಗಿದ್ದರೆ, ಏನು ಬೇಕಾದರೂ ಆಗುವ ಸಾಧ್ಯತೆ ಇದೆ.ಆದರೀಗ ಬೆರಳೆಣಿಕೆಯಷ್ಟು ಎಟಿಎಂಗಳಲ್ಲಿಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ.

ಇಂತಹ ಎಟಿಎಂಗಳಲ್ಲಿಅಲ್ಲಿರುವ ಸೆಕ್ಯುರಿಟಿಗಳು ಪ್ರತಿ ಅರ್ಧ ಗಂಟೆಗೊಮ್ಮೆ ಎಟಿಎಂ ಮಷಿನ್‌ಗಳನ್ನು ಡೆಟಾಲ್‌ ಹಾಕಿದ ಬಟ್ಟೆಯಿಂದ ಒರೆಸುತ್ತಿದ್ದಾರೆ. ಅಲ್ಲದೇ, ಎಟಿಎಂ ಕೊಠಡಿ ಶುಚಿಗೊಳಿಸಿ ಔಷಧಿ ಸಿಂಪರಣೆ ಮಾಡಲಾಗುತ್ತಿದೆ. ಅದರೊಟ್ಟಿಗೆ ಸ್ಯಾನಿಟೈಜರ್‌ ಸಹ ಬಳಕೆ ಮಾಡಲಾಗುತ್ತಿದೆ. ಈ ಕ್ರಮ ಎಲ್ಲಎಟಿಎಂಗಳಲ್ಲಿಯೂ ಆಗಬೇಕೆಂಬುದು ಎಲ್ಲರ ಒತ್ತಾಯವಾಗಿದೆ.

# ಸ್ಯಾನಿಟೈಜರ್‌ ಕಡ್ಡಾಯ : 
ಈಗಾಗಲೇ ಕೊರೊನಾ ಭೀತಿ ಹಿನ್ನೆಲೆಯಲ್ಲಿಬಹುತೇಕ ಎಲ್ಲಜಿಲ್ಲೆಯಲ್ಲಿರುವ 345 ವಿವಿಧ ಬ್ಯಾಂಕ್‌ಗಳ ಶಾಖೆಗಳಲ್ಲಿಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಬ್ಯಾಂಕ್‌ ಪ್ರವೇಶಕ್ಕೂ ಪೂರ್ವದಲ್ಲಿಕಡ್ಡಾಯವಾಗಿ ಸ್ಯಾನಿಟೈಜರ್‌ ಹಚ್ಚಿಕೊಂಡೇ ಶಾಖೆಯಲ್ಲಿಪ್ರವೇಶಿಸಬೇಕೆಂಬ ನಿಯಮವನ್ನು ಸಹ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಎಷ್ಟೋ ಎಟಿಎಂಗಳಲ್ಲಿ ಸರಿಯಾದ ನಿರ್ವಹಣೆ ಮಾಡುತಿಲ್ಲ. ಇದರಿಂದಾಗಿ ಮೊದಲೇ ಕಷ್ಟದಲ್ಲಿರುವ ಜನರು ಎಟಿಎಂಗಳಿಗೆ ಹೋಗಿ ಬಹುತೇಕ ಕಡೆಗಳಲ್ಲಿ ಎಟಿಎಂ ಇಲ್ಲಿದೇ ವಾಪಸ್ಸು ಆಗುತಿದ್ದಾರೆ.‌ಇನ್ನು ಕೇಲವಡೇ ಎಟಿಎಂಗಳು ಕಸದ ತೊಟ್ಟಿಯಾಗಿವೆ.


Spread the love

About Laxminews 24x7

Check Also

ಕೊಪ್ಪರಿಗೆ ಏರುವುದರೊಂದಿಗೆ ಕುಕ್ಕೆ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಆರಂಭ: ನ.26ರಂದು ಮಹಾರಥೋತ್ಸವ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವವು ಕಾರ್ತಿಕ ಬಹುಳ ದ್ವಾದಶಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ