Breaking News

ಜಿಲ್ಲಾ ದಿನಪತ್ರಿಕಾ ವಿತರಕರ ಸಂಘದಿಂದ ಪತ್ರಿಕಾ ವಿತರಕರ ಆರನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ

Spread the love

ಬೆಳಗಾವಿ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕಾ ವಿತರಕರ ಸಂಘದಿಂದ ಪತ್ರಿಕಾ  ವಿತರಕರ ಆರನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬುಧವಾರ ಜರುಗಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ವಿತರಕರ ಸ್ವಾಗತಕ್ಕೆ ಮಾಡಿಕೊಂಡಿರುವ ಸಿದ್ಧತೆ, ಮಾಡಿಕೊಂಡಿರುವ ಸೌಕರ್ಯಗಳು, ಸಿಗಲಿರುವ ಸೌಲಭ್ಯಗಳು ಹಾಗೂ ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಪತ್ರಿಕಾ ವಿತರಕರು ವಹಿಸಲಿರುವ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಶಂಭುಲಿಂಗ ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನ ಅಧ್ಯಕ್ಷ ಬಿಜಿಕೆರೆ ಮಲ್ಲಿಕಾರ್ಜುನ, ಬೆಳಗಾವಿ ಜಿಲ್ಲಾ ಅಧ್ಯಕ್ಷ ದೀಪಕ ರಾಜಗೋಳಕರ, ಗೌರವಾಧ್ಯಕ್ಷ ಪ್ರತಾಪ ಬೋಸ್ಲೆ, ರಾಜು ಬೋಸ್ಲೆ, ಸಂಜಯ ಘೋರ್ಪಡೆ, ಸತೀಶ ನಾಯಕ, ರಾಜಶೇಖರ ಜಮಖಂಡಿ, ರಾಜು ಜಾಧವ, ರಾಜು ಮುಚ್ಚಂಡಿ, ಸಂಜಯ ಕದಂ, ಸಾಗರ ಅಜೋಳ್ಕರ, ಶ್ರೀಕಾಂತ ನಿಯೋಗಿ, ಪ್ರಶಾಂತ ಶಾಪುಲ್ಕರ, ಬಾವು ಪವಾರ, ಬೈಲಹೊಂಗದ ಯಾಸಿನ ಕಿತ್ತೂರ, ಧಾರವಾಡ ಜಿಲ್ಲಾಧ್ಯಕ್ಷ ಶಿವು ಹಲಗಿ, ನಾಗರಾಜ ಕುಲಕರ್ಣಿ, ಶಿವರಾಮ ಶರಗುಪ್ಪಿ ಇತರರಿದ್ದರು.
ವಿವಿಧ ಸಂಸ್ಥೆಯ ಪ್ರತಿನಿಧಿಗಳಾದ ರಘುವೀರ ಕುಲಕರ್ಣಿ, ಸಂದೀಪ ವರುಣೆ, ರೋಹಿತ, ದಿಲೀಪ, ಚಂದನ ಶೇಖರ, ವಿಶಾಲ ದೇಶಪಾಂಡೆ ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಸಂಸತ್ತು,ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ

Spread the loveಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ