Breaking News

ನನ್ನ ಮಗಳ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು.:ರಾಗಿಣಿ ತಾಯಿ ರೋಹಿಣಿ

ಬೆಂಗಳೂರು: ನನ್ನ ಮಗಳ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಅವಳನ್ನು ಸಿಕ್ಕಿಹಾಕಿಸಲು ನೋಡುತ್ತಿದ್ದಾರೆ ಎಂದು ನಟಿ, ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿರುವ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಹೇಳಿದ್ದಾರೆ. ಈ ಕುರಿತುಮಾತನಾಡಿದ ಅವರು, ನನ್ನ ಮಗಳ ಮೇಲಿನ ಎಲ್ಲ ಆರೋಪಗಳು ಸುಳ್ಳು. ಅವಳನ್ನು ಸಿಕ್ಕಿ ಹಾಕಿಸಲಾಗುತ್ತಿದೆ. ಇದೆಲ್ಲವೂ ಸುಳ್ಳು, ನನ್ನ ಮಗಳು ಪ್ರಕಣದಿಂದ ಮುಕ್ತಳಾಗಿ ಬರುತ್ತಾಳೆ. ನಾನು ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸುತ್ತೇನೆ. ಶೀಘ್ರವೇ ನನ್ನ ಮಗಳು ಆರೋಪದಿಂದ ಮುಕ್ತಳಾಗುತ್ತಾಳೆ ಎಂದು …

Read More »

ಸಂಕಷ್ಟದಲ್ಲಿ ಪಾರ್ಶ್ವವಾಯು ಪೀಡಿತ ಉಪನ್ಯಾಸಕರ ಕುಟುಂಬ

ಧಾರವಾಡ: ಪಾರ್ಶ್ವವಾಯು ಪೀಡಿತ ಉಪನ್ಯಾಸಕರೊಬ್ಬರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಧಾರವಾಡದ ನಿಸರ್ಗ ಲೇಔಟ್ ನಲ್ಲಿರುವ ಮಹಾದೇವ್ ಮಾಳಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಶಿಕ್ಷಣ ಇಲಾಖೆಯಲ್ಲಿ 15 ವರ್ಷ ಸರ್ವಿಸ್ ಮಾಡಿದ್ದಾರೆ. ಬಿಇಓ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮಹಾದೇವ್ ಮಾಳಗಿ ಅವರು ಹಿರಿಯ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಾರ್ಶ್ವವಾಯುಗೆ …

Read More »

ವಿವಾಹಿತ ಮಹಿಳೆಯನ್ನ ಕರ್ಕೊಂಡು ಬಂದಿದ್ದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಕಾರವಾರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಕರೆದುಕೊಂಡು ಬಂದಿದ್ದ ಯುವಕನಿಗೆ ಮಹಿಳೆಯ ಪತಿ ಹಾಗೂ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ ಧಾರವಾಡ ಮೂಲದ ಮುತ್ತು ಥಳಿತಕ್ಕೊಳಗಾದ ಯುವಕ. ಮುತ್ತು ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಅಲ್ಲದೇ ಈತ ಧಾರವಾಡದಿಂದ ಮಹಿಳೆಯನ್ನು ಕರೆದುಕೊಂಡು ಕಾರವಾರಕ್ಕೆ ಬಂದಿದ್ದನು. ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯೊಂದಿಗೆ ಮುತ್ತು ನಿಂತಿದ್ದನು. ಇತ್ತ ಕಾರವಾರಕ್ಕೆ ಬಂದ ವಿಷಯ …

Read More »

ಮಾಜಿ ಸಚಿವ, ದಿ.ಜೀವರಾಜ್‌ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್‌ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್‌ …

Read More »

ಚಿತ್ರರಂಗವಿರಲೀ, ಅಥವಾ ಬೇರಾವ ರಂಗದವರೇ  ಇರಲೀ ಜಾಲದಲ್ಲಿರುವ ಶಿಕ್ಷೆಯಾಗಲಿದೆ: ಬಿ.ಸಿ.ಪಾಟೀಲ್ 

ಕೋಲಾರ:  ಮಾದಕ ಸೇವನೆ ಯಾರೇ ಮಾಡಿದರೂ ತಪ್ಪೇ. ಚಿತ್ರರಂಗವಿರಲೀ, ಅಥವಾ ಬೇರಾವ ರಂಗದವರೇ  ಇರಲೀ ಜಾಲದಲ್ಲಿರುವ ಶಿಕ್ಷೆಯಾಗಲಿದೆ  ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಚಿತ್ರನಟಿ ರಾಗಿಣಿಯಾಗಲೀ ಯಾರೇ ಆಗಲೀ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರೂ ಕೂಡ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಬಾರದು. ನಮ್ಮ ಕಾಲಕ್ಕೂ ನಮ್ಮ ಮಕ್ಕಳ ಕಾಲಕ್ಕೂ ಜನರೇಷನ್ ಬದಲಾಗುತ್ತಿದೆ. ಚಿತ್ರರಂಗವೂ ಬದಲಾಗಿದೆ ಅಂದಮಾತ್ರಕ್ಕೆ ದುಶ್ಚಟಕ್ಕೆ ಬಲಿಯಾಗುವುದಾಗಲೀ ವ್ಯಸನಿಗಳಾಗುವುದಾಗಲೀ ಮಾಡಬಾರದು. ತಪ್ಪು …

Read More »

ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಶಾಸಕ ಸತೀಶ ಜಾರಕಿಹೊಳಿ

ಹಾವೇರಿ:  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಅವರು ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.  ಹಾವೇರಿ ಜಿಲ್ಲೆಯ ಕಾಂಗ್ರೆಸ್  ಪಕ್ಷದ ಸಂಘಟನೆಯನ್ನು ಕುರಿತು ಪಾದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಿ.ಬಿ. ರೋಡ್ ಕಾಂಗ್ರೆಸ್ ಕಚೇರಿ ಬಳಿ ಇರುವ ಸಜ್ಜನ ಫಂಕ್ಷನ್ ಹಾಲ್ ನಲ್ಲಿ  ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.  ಮಾಜಿ  ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು.ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು,ಮಹಿಳಾ ಘಟಕದ ಅಧ್ಯಕ್ಷರು,ಯುವ ಕಾಂಗ್ರೇಸ್ …

Read More »

ಎನ್‍ಡಿಪಿಎಸ್ ಆಕ್ಟ್ ಸೆಕ್ಷನ್ 21, 21ಸಿ, 27ಬಿ, 27ಎ, 29, ಐಪಿಸಿ 120ಬಿ ಅಡಿ ಎಫ್‍ಐಆರ್ ದಾಖಲಾಗಿದೆ

ಬೆಂಗಳೂರು: ಎರಡು ಬಾರಿ ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಡ್ರಗ್ ತೆಗೆದುಕೊಂಡಿರೋದಾಗಿ ನಟಿ ರಾಗಿಣಿ ದ್ವಿವೇದಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಗೆಳೆಯ ರವಿಶಂಕರ್ ತಂದುಕೊಟ್ಟಿದ್ದ ಎಂಡಿಎಂಎ ಡ್ರಗ್ ಮನೆಯಲ್ಲಿಯೇ ಬಳಕೆ ಮಾಡಿದ್ದೇನೆ ಎಂದು ರಾಗಿಣಿ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡು ಬಾರಿಯೂ ರವಿಶಂಕರ್ ಡ್ರಗ್ಸ್ ತಂದಿದ್ದನು. ಇತ್ತ ರಾಗಿಣಿ, ರವಿಶಂಕರ್ ಮತ್ತು ರಾಹುಲ್ ಬಳಸುತ್ತಿದ್ದ ಮೊಬೈಲ್ ಮಾಹಿತಿಯನ್ನ ಪುನಃ ಕಲೆ ಹಾಕಲಾಗಿದೆ. …

Read More »

ಮತ್ತೊಂದು ಡ್ರಗ್ಸ್ ಜಾಲದ ಮೇಲೆ ಸಿಸಿಬಿ ದಾಳಿ – 20 ಲಕ್ಷ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಕಾರ್ಯಾಚರಣೆ ನಡೆಸಿದ್ದು, ಮೊತ್ತೊಂದು ಡ್ರಗ್ಸ್ ದಂಧೆ ಜಾಲವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಮಿಷನರ್ ಕಮಲ್ ಪಂತ್, ಸಿಸಿಬಿ ಪೊಲೀಸರು ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ 2 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 20 ಲಕ್ಷಕ್ಕೂ ಅಧಿಕ ಬೆಲೆ ಇರಬಹುದು ಎಂದರು. ನಮಗೆ ಇರುವ …

Read More »

ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕ

ಕಾರವಾರ: ಇದು ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕರ ಕಥೆ. ಪಾಠದ ಜೊತೆಗೆ ಬೆಳಗ್ಗೆ ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಬೆಳಗಿನ ಉಪಹಾರದ ವ್ಯವಸ್ಥೆಯನ್ನ ಮಾಡಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ್ ಬಡ ಮಕ್ಕಳಿಗಾಗಿ ಉಪಹಾರ ಆರಂಭಿಸಿದ್ದಾರೆ. ಈ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದವರು. ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಬರುತ್ತಿರೋದು ರಾಮಚಂದ್ರ …

Read More »

ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಮೊಬೈಲ್ ಫೋನ್ ನ್ನ ಮೃತ ಶಿಕ್ಷಕನ ಪತ್ನಿಗೆ ಮರಳಿಸಿ ಪಿಎಸ್‍ಐ ಮಾನವೀಯತೆ ಮೆರೆದಿದ್ದಾರೆ.

ಹಾವೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶಿಕ್ಷಕನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಮೊಬೈಲ್ ಫೋನ್ ನ್ನ ಮೃತ ಶಿಕ್ಷಕನ ಪತ್ನಿಗೆ ಮರಳಿಸಿ ಪಿಎಸ್‍ಐ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಸ್ಸೀಮ ಆಲದಕಟ್ಟಿ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಶಿಕ್ಷಕ 45 ವರ್ಷದ ಪರಶುರಾಮ ಕೋಲೂರ …

Read More »