Breaking News

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಮತ್ತೆ ಸಂಕಷ್ಟ

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿದೆ. ಆರೋಪಿಗಳಾದ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೋಹಂತಿ ಮತ್ತು ಎ.ಎಂ ಪ್ರಸಾದ್ ವಿಚಾರಣೆಗೆ ನೊಟೀಸ್ ನೀಡಿದೆ. ಪ್ರಕರಣದಲ್ಲಿ ಕೆ.ಜೆ.ಜಾರ್ಜ್, ಪ್ರಣಬ್ ಮೋಹಂತಿ, ಎ.ಎಂ.ಪ್ರಸಾದ್ ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನ ಪ್ರಶ್ನಿಸಿ ಮೃತ ಗಣಪತಿ …

Read More »

A.D.G.P.ಅಮರಕುಮಾರ್ ಪಾಂಡೆ ಅವರ ಸಂಧಾನಸಭೆ ಸಕ್ಸಸ್

ಬೆಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ವಿವಾದ ಸಂಬಂಧಿಸಿದಂತೆ ಇಂದು ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ನಡೆಸಿದ, ಸಂಧಾನಸಭೆ ಸಕ್ಸಸ್ ಆಗಿದೆ ಎಡಿಜಿಪಿ ಅಮರಕುಮಾರ ಪಾಂಡೆ ಅವರು ನಡೆಸಿದ ಕನ್ನಡಿಗರ – ಮರಾಠಿಗ ಭಾಷಿಕ ಮುಖಂಡರ ಜೊತೆ ನಡೆದ ಸಭೆ ಸಫಲವಾಗಿದೆ.         ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು …

Read More »

150ರಿಂದ 10 ಮೀಟರ್‌ಗೆ ಕುಗ್ಗಿದ ಮಲಪ್ರಭೆ!

ಬಾಗಲಕೋಟೆ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ದೊಡ್ಡಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ ಜಲಸಂಪನ್ಮೂಲ ಇಲಾಖೆ ಟೋಪೊಶೀಟ್‌ನಲ್ಲಿ 150 ಮೀಟರ್ ಇದೆ. ಆದರೆ ಈಗ ಅದು 10 ಮೀಟರ್‌ಗೆ ಇಳಿಕೆಯಾಗಿದೆ! ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ರಸ್ತೆ ಸೇತುವೆ ಬಳಿ 100 ಮೀಟರ್‌ ಅಗಲವಿದ್ದ ನದಿ ಈಗ 11 ಮೀಟರ್‌ಗೆ ಕುಗ್ಗಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ 200 ಮೀಟರ್‌ನಿಂದ 14 ಮೀಟರ್‌ಗೆ ರೂಪಾಂತರಗೊಂಡಿದೆ. ಅತಿಯಾದ ಮಾನವ ಹಸ್ತಕ್ಷೇಪ …

Read More »

37 ಕೋವಿಡ್ ಪ್ರಕರಣಗಳು ಪತ್ತೆ! 56 ಮಂದಿ ಗುಣಮುಖ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 37 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 56 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 454 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಒಟ್ಟು 2224 ಮಂದಿಗೆ ಸೋಂಕು ತಗುಲಿತ್ತು. ಇವರಲ್ಲಿ 1726 ಮಂದಿ ಗುಣಮುಖರಾಗಿದ್ದಾರೆ. 44 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 172 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟು 136 ಮಂದಿ ಹೋಂ ಐಸೋಲೇಷನ್‌ಗೊಳಗಾಗಿ ಗುಣಮುಖರಾಗಿದ್ದಾರೆ. ಶುಕ್ರವಾರ 491 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ ಆರ್‌ಟಿಪಿಸಿಆರ್ ವಿಧಾನದಲ್ಲಿ 396 …

Read More »

ವಿಶ್ವಮಾನವರು, ಇಂಥವರ ವಿಷಯದಲ್ಲಿ ಪುತ್ಥಳಿ ರಾಜಕಾರಣ ಆಗಬಾರದು : ಲಕ್ಷ್ಮಿ ಹೆಬ್ಬಾಳ್ಕರ್

      ಧಾರವಾಡ: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ ವಿಚಾರವಾಗಿ ಸರ್ಕಾರದ ಮಧ್ಯ ಪ್ರವೇಶಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹ ಪಡಿಸಿದರು. ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಇದು ಬಹಳ ದುರದೃಷ್ಟಕರ ವಿಚಾರ. ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ದೊಡ್ಡದು. ಅಂತಹ ವೀರ ಒಂದು ಕಡೆ, ಈ ದೇಶ ಒಗ್ಗಟ್ಟಾಗಿ ಕಟ್ಟಿದ ಶಿವಾಜಿ …

Read More »

ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಸಂಘಟನೆಗಳ 20 ಮಂದಿ ಕಾರ್ಯಕರ್ತರ ಮೇಲೆ ಕ್ರಿಮಿನಲ್‌ ಕೇಸ್‌

.   ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಸಂಘಟನೆಗಳ 20 ಮಂದಿ ಕಾರ್ಯಕರ್ತರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲಾಗಿದೆ. ದೊಂಬಿ, ಅತಿಕ್ರಮ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ ಕನಿಷ್ಠ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ. ಆದರೆ ಕನ್ನಡ ಕನ್ನಡ ಧ್ವಜಕ್ಕೆ ಚಪ್ಪಲಿ ಎಸೆದವರೊಂದಿಗೆ ಸಂಧಾನ ಮಾಡಲು ಸರ್ಕಾರ ಮುಂದಾಗಿದ್ದು ಟೀಕೆಗೆ …

Read More »

ಈ ರೀತಿಯ ಮಹಾಪುರುಷರಿಗೆ, ಜಾತಿ ಬಣ್ಣ ಬಳೆಯುವವರಿಗೆ ನಾಚಿಕೆಯಾಗಬೇಕು:ಪ್ರಮೋದ್  ಮುತಾಲಿಕ್

.   ಧಾರವಾಡ: ಬೆಳಗಾವಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್  ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಯಾವ ಜಾತಿಯವನು ಎಂಬುದು ಮುಖ್ಯ ಅಲ್ಲ, ಯಾವುದಕ್ಕೆ ಹೋರಾಟ ಮಾಡಿದ ಅನ್ನೋದು ಮುಖ್ಯ. ರಾಯಣ್ಣ ಜಾತಿಗಾಗಿ, ಗಡಿಗಾಗಿ ಹೋರಾಟ ಮಾಡಿದ್ದಲ್ಲ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಾಯಕ, ಅಂತಹವನಿಗೆ ಅಪಮಾನ ಮಾಡುತ್ತಿರುವುದು ದೇಶದ …

Read More »

ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜ ಇಬ್ಬರು ದೇಶದ ಆಸ್ತಿ.:ರಮೇಶ ಜಾರಕಿಹೊಳಿ

ಚಿಕ್ಕೋಡಿ:   ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜ ಇಬ್ಬರು ದೇಶದ ಆಸ್ತಿ.  ಇಂತಹ ಮಹನೀಯರನ್ನು ಒಂದು  ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ.  ಯಾವುದೇ ಅಪಮಾನ ಆಗದ ರೀತಿಯಲ್ಲಿ ಗೊಂದಲ ಪರಿಹರಿಸುತ್ತೇವೆ ಎಂದು ಬೆಳಗಾವಿ  ಉಸ್ತುವಾರಿ  ಸಚಿವ  ರಮೇಶ ಜಾರಕಿಹೊಳಿ  ತಿಳಿಸಿದರು. ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪಿಸಿದ ವಿಚಾರವಾಗಿ ಚಿಕ್ಕೋಡಿ  ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಸದ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಗಲಾಟೆ ವಿಚಾರವಾಗಿ  ಈಗಾಗಲೇ ಅಧಿಕಾರಿಗಳಿಂದ ಮಾಹಿತಿ …

Read More »

ಶುಲ್ಕ ಹೆಚ್ಚಿಸದಂತೆ ಸುತ್ತೋಲೆ: ಹೈಕೋರ್ಟ್ ನೋಟಿಸ್

ಬೆಂಗಳೂರು: 2020-21ರ ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ‘ಹಿಂದಿನ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಕಡಿಮೆ ಶುಲ್ಕ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿದೆ. ಹಿಂದಿನ ವರ್ಷದ ಬಾಕಿ ಶುಲ್ಕ ಮತ್ತು ಪ್ರಸಕ್ತ ವರ್ಷದ ಶುಲ್ಕದಲ್ಲಿ ಶೇ 50ರಷ್ಟನ್ನು ಸಂಗ್ರಹಿಸಲು ಮಧ್ಯಂತರ ಅನುಮತಿ ನೀಡಬೇಕು’ ಅರ್ಜಿದಾರರು ಕೋರಿದ್ದಾರೆ. ‘‌ಶೇ …

Read More »

ಕಣ್ವ ಹಗರಣ: ನಂಜುಂಡಯ್ಯ 7 ದಿನ ಇ.ಡಿ ವಶಕ್ಕೆ

ಬೆಂಗಳೂರು: ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆದಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್ ಆಧರಿಸಿ ಇ.ಡಿ ತನಿಖೆ ಆರಂಭಿಸಿ ನಂಜುಂಡಯ್ಯ ಅವರನ್ನು ವಶಕ್ಕೆ ಪಡೆದಿತ್ತು. ‘₹180 ಕೋಟಿ ವಂಚಿಸಿರುವ ಪ್ರಕರಣದಲ್ಲಿ ನಂಜುಂಡಯ್ಯ ಅವರೇ ಪ್ರಮುಖ ಆರೋಪಿ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಇ.ಡಿ ಹೇಳಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ …

Read More »