ಒಂದು ವಾರ ಕರ್ನಾಟಕ ಸ್ಥಬ್ದ,ತೆರೆಯಲ್ಲ ಮಾಲ್,ಥೆಯೇಟರ್,ಕ್ಲಬ್,ಪಾರ್ಕ್
: CM statement at a weekly action / news conference to prevent Karnataka bund / coronavirus infection
ಬೆಂಗಳೂರು : ಕೊರೊನಾ ವೈರಸ್ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಬೆಂಗಳೂರಿನಲ್ಲಿ ಸುದ್ದಿಗೊಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಒಂದು ವಾರದ ವರೆಗೆ ಮಾಲ್ ಮತ್ತು ಥಿಯೆಟರ್ ಸೇರಿದಂತೆ ಕ್ಲಬ್,ಪಬ್ ಗಳು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
♦
ಇನ್ನು ರಾಜ್ಯದಲ್ಲಿ ಮದುವೆ, ಜಾತ್ರೆ, ಎಲ್ಲ ರೀತಿಯ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.ಜೊತೆಗೆ ಕ್ರೀಡಾಕೂಟಗಳು, ಜನರು ಸೇರುವ ವಿಶೇಷ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.ಹೀಗಾಗಿ ಒಂದು ವಾರದ ಕಾಲ ಕರ್ನಾಟಕ ಸ್ಥಬ್ದ ಇರಲಿದೆ. ಇನ್ನು ಶಾಲಾ ಕಾಲೇಜುಗಳ ಪರೀಕ್ಷೆಗಳು ನಡೆಯಲಿವೆ.
ಹಾಗೆ ಎಲ್ಲ ಐಟಿ-ಬಿಟಿ ಕಂಪನಿಗಳಿಗೆ ಒಂದು ವಾರ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿ ಎಂದು ಸರ್ಕಾರ ಸೂಚನೆ ನೀಡಿದೆ.