Breaking News

ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಭಗವಂತ ಖೂಬಾಗೆ ನೋಟಿಸ್

Spread the love

ಬೀದರ್: ಸಚಿವ ಈಶ್ವರ್ ಖಂಡ್ರೆಗೆ ಅವಾಚ್ಯವಾಗಿ ನಿಂದಿಸಿದ ಕೇಂದ್ರ ಸಚಿವ ಭಗವಂತ ಖೂಬಾಗೆ ಎರಡು ನೋಟಿಸ್ ನೀಡಲಾಗಿದೆ.

ಭಾಲ್ಕಿ ಠಾಣಾ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಇದೇ ಫೆ.25ಕ್ಕೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಕಾರ್ಯಾಲಯಕ್ಕೆ ನೋಟಿಸ್ ಅಂಟಿಸಿದ್ದರು. ಇದೀಗ ಮತ್ತೆ ಹೊಸ ನೋಟಿಸ್ ಅಂಟಿಸಿದ್ದು, ಫೆ.21ಕ್ಕೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ನೋಟಿಸ್ ನೀಡಿದ್ದಾರೆ. ಒಂದು ವೇಳೆ ವಿಚಾರಣೆ ಹಾಜರಾಗದಿದ್ದರೆ ಬಂಧನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ಒಂದೇ ದಿನದಲ್ಲಿ ಭಾಲ್ಕಿ ಪೊಲೀಸರು ಎರಡೆರಡು ನೋಟಿಸ್ ನೀಡಿದ್ದು, ಭಾರತೀಯ ನಾಗರಕ ಸಂಹಿತೆ 2023 ಕಾಲಂ ಅಡಿಯಲ್ಲಿ ಖೂಬಾಗೆ ನೋಟಿಸ್ ನೀಡಿದ್ದಾರೆ.
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕ್ರಮ ಮಾಡ್ಕೊಳ್ತಿದ್ದಿ, ನೀನು ಹಿಜಡಾ ಇದ್ದೀಯಾ ಎಂದೆಲ್ಲಾ ಏಕವಚನದಲ್ಲೇ ಈಶ್ವರ್ ಖಂಡ್ರೆರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದರ್ ಎಂಬುವವರು ಭಾಲ್ಕಿ ನಗರ ಠಾಣೆಯಲ್ಲಿ ಎಫ್‌ಆರ್ ದಾಖಲಾಗಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ