ಮೂಡಲಗಿ:ದೇಹದ ಮೇಲೆ ಕೊರೊನಾ ಚಿತ್ರದ ಜತೆಗೆ ಜಾಗೃತಿ ಸಂದೇಶ

Spread the love

ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ಯುವಕನೊಬ್ಬ ದೇಹದ ಮೇಲೆ ಕೊರೊನಾ ಚಿತ್ರದ ಜತೆಗೆ ಜಾಗೃತಿ ಸಂದೇಶ ಸಾರುವ ಸಾಲುಗಳನ್ನು ಬರೆಸಿಕೊಂಡು ಜನರಿಗೆ ಕೊರೊನಾ ಕುರಿತು ತಿಳುವಳಿಕೆ ಮೂಡಿಸುತ್ತಿದ್ದಾನೆ.

ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದ ಜನರು ತತ್ತರಿಸಿದ್ದಾರೆ. ಇದರಿಂದ ಭಾರತ ಸರ್ಕಾರವೂ ಮುಂಜಾಗೃತ ಕ್ರಮವಾಗಿ ಸೋಂಕು ತಡೆಗಟ್ಟಲು ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಗಂಭೀರವಾಗಿ ತೆಗೆದುಕೊಳ್ಳದ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಸರ್ಕಾರದ ನಿಮಯಗಳನ್ನು ಪಾಲನೆ ಮಾಡುತ್ತಿಲ್ಲ. ಆದ ಕಾರಣ ಜಾಗೃತಿ ಮೂಡಿಸುವ ಕೆಲಸವನ್ನು ಯುವಕರು ಮಾಡುತ್ತಿದ್ದಾನೆ.

ವಿನೂತನ ರೀತಿಯಲ್ಲಿ ಯುವಕರು ಪಟ್ಟಣದಲ್ಲಿ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದಾನೆ. ಸುರೇಶ್ ಬೆಳವಿ ಎಂಬ ಯುವಕ ದೇಹದ ಮೇಲೆ ‘ನಾನು ಕೊರೊನಾ ನೀವು ಬಿದಿಗೆ ಬಂದ್ರೆ, ನಾನು ನಿಮ್ಮೊಂದಿಗೆ ಮನೆಗೆ ಬರುವೆ’ ಎಂಬ ಸ್ಲೋಗನ್ ಬರೆಸಿಕೊಂಡಿದ್ದಾನೆ. ಇದಕ್ಕೆ ಚಿತ್ರ ಕಲಾವಿದ ಕಮಾಲ ಮೋಮಿನ ಅವರು ಸಹ ಸಾಥ್ ನೀಡಿದ್ದಾರೆ.


Spread the love

About Laxminews 24x7

Check Also

ರಾಹುಲ್‌ ಗಾಂಧಿ ಕ್ಷಮೆ ಕೇಳಲಿ: ಕುಮಾರ ಹೀರೆಮಠ

Spread the love ಬೆಳಗಾವಿ: ‘ಅಗ್ನಿಪಥ ಯೋಜನೆ ಕುರಿತಾಗಿ ಅವಹೇಳನಾಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು’ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ