ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

Spread the love

ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ಜಮಾತ್‍ಗೆ ಹೋಗಿ ಬಂದ 17 ಮಂದಿ ಪತ್ತೆಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮಾರ್ಚ್ 05ರಿಂದ ಮಾರ್ಚ್ 10ರ ಒಳಗಾಗಿ ಆಗ್ರಾ, ಅಜ್ಮೀರ್ ಹಾಗೂ ದೆಹಲಿ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದ ದಂಪತಿಯನ್ನ ಪತ್ತೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಂಪತಿಯನ್ನ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೇ ಫೆಬ್ರವರಿ 08ರಿಂದ ಫೆಬ್ರವರಿ 15ರ ಮಧ್ಯೆ ಜಮಾತ್‍ಗೆ ಹೋಗಿಬಂದಿದ್ದ 15 ಮಂದಿಯನ್ನ ಪತ್ತೆ ಮಾಡಲಾಗಿದೆ.ಈಗಾಗಲೇ ಅವರು ವಾಪಸ್ಸಾಗಿ 45 ದಿನಗಳು ಕಳೆದಿದ್ದು, ಇದುವರೆಗೂ ಯಾರಲ್ಲಿಯೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಅನುಮಾನದ ಮೇರೆಗೆ 15 ಮಂದಿಯನ್ನ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ 17 ಮಂದಿಯ ಬ್ಲಡ್ ಸ್ಯಾಂಪಲ್ ಹಾಗೂ ಗಂಟಲು ದ್ರವ ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಎಸ್‍ಪಿ ಅವರು ತಿಳಿಸಿದರು.


Spread the love

About Laxminews 24x7

Check Also

ಬೆಲೆ ಏರಿಕೆ ನಡುವೆ BSNL ಗ್ರಾಹಕರಿಗೆ ಗುಡ್ ನ್ಯೂಸ್

Spread the love ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸೇವಾ ಪೂರೈಕೆದಾರರು ಇತ್ತೀಚೆಗೆ ತಮ್ಮ ರೀಚಾರ್ಜ್ ಬೆಲೆಗಳನ್ನು ನವೀಕರಿಸಿದ್ದಾರೆ. ರಿಲಯನ್ಸ್ ಜಿಯೋ, ಏರ್‌ಟೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ