Breaking News

ವೇದವಿದ್ಯಾ ವಿಹಾರ ಗುರುಕುಲಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

Spread the love

ರಾಮನಗರ: ಇಲ್ಲಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವೇದವಿದ್ಯಾ ವಿಹಾರ ಗುರುಕುಲಕ್ಕೆ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಶಂಕುಸ್ಥಾಪನೆ ನೆರವೇರಿಸಿದರು.

ವೇದ ಉಪನ್ಯಾಸದ ಗುರುಕುಲಕ್ಕೆ ಗುದ್ದಲಿಪೂಜೆ ನೆರವೇರಿಸಿ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಸ್ಥಳೀಯರಿಗೆ ಗುರುಕುಲದ ವತಿಯಿಂದ ಸೀರೆ ವಿತರಣೆ ಮಾಡಿದ್ರು. ಈ ವೇಳೆ ಕೇಂದ್ರ ಸಚಿವರಿಗೆ ಸಂಸದ ಡಾ.ಮಂಜುನಾಥ್, ಪತ್ನಿ ಅನುಸೂಯ ಮಂಜುನಾಥ್ ಸೇರಿ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ರು.

ಬಳಿಕ ಬೆಂಗಳೂರು ಹೊರವಲಯದ STRR ರಿಂಗ್ ರಸ್ತೆ ಭೂ ಪರಿಹಾರ ಸಂಭಂಧ ಕೇಂದ್ರ ಸಚಿವೆಗೆ ರೈತರು ಮನವಿ ಸಲ್ಲಿಸಿದರು. ಭೂಸ್ವಾದೀನಕ್ಕೆ ಒಳಪಡುವ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದ್ರು. ರೈತರ ಮನವಿ ಸ್ವೀಕರಿಸಿದ ನಿರ್ಮಲಾ ಸೀತರಾಮನ್. ಸ್ಥಳದಲ್ಲೇ ಯೋಜನೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಶೀಘ್ರ ಪರಿಹಾರ ನೀಡುವ ಭರವಸೆ ನೀಡಿದ್ರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೀತಾರಾಮನ್ ಅವರು, ಸಿಟಿ ಹೊರವಲಯದಲ್ಲಿ ಗುರುಕುಲ ನಿರ್ಮಾಣ ಆಗ್ತಿದೆ. ವೇದ ಶಿಕ್ಷಣ ನೀಡುವ ಗುರುಕುಲಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. ಪ್ರಕೃತಿ ನಡುವೆ ವೇದಗಳ ಬೋಧನೆ ಆಗ್ತಿದೆ. ಸ್ಥಳೀಯ ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಸ್ಥಳೀಯರಿಗೂ ವೇದ ಶಿಕ್ಷಣದ ಸದುಪಯೋಗ ಆಗಲಿ. ಜೊತೆಗೆ ಗೋಶಾಲೆ ನಿರ್ಮಾಣವಾಗ್ತಿರೋದು ಸಂತಸದ ವಿಚಾರ. ನೂತನ ಗುರುಕುಲಕ್ಕೆ ಶುಭವಾಗಲಿ ಎಂದ ನಿರ್ಮಲಾ ಸೀತಾರಾಮನ್ ಶುಭಹಾರೈಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ