Breaking News
Home / ಜಿಲ್ಲೆ / ‘ಕೋವಿಡ್-19’ ಮಹಾಮಾರಿಯಿಂದ ಮತ್ತೋಂದು ವಿಪತ್ತೊಂದು ನಮ್ಮಗಾಗಿ ಕಾಯುತ್ತಿದೆ.!

‘ಕೋವಿಡ್-19’ ಮಹಾಮಾರಿಯಿಂದ ಮತ್ತೋಂದು ವಿಪತ್ತೊಂದು ನಮ್ಮಗಾಗಿ ಕಾಯುತ್ತಿದೆ.!

Spread the love

ಖ್ಯಾತ ವೈರಾಣು ತಜ್ಞ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮಾಜಿ ಪ್ರೊಫೆಸರ್ ಆಗಿರುವ ಡಾ.ಟಿ. ಜಾಕೋಬ್ ಜಾಕೋಬ್ ಅವರು The Lede ಗೆ ನೀಡಿರುವ ಸಂದರ್ಶನದಲ್ಲಿ ಕೊರೋನ ವೈರಸ್ ಪತ್ತೆಗಾಗಿ ಸಾಕಷ್ಟು ಪರೀಕ್ಷೆಗಳನ್ನು ಕೈಗೊಳ್ಳದಿರುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಮಹಾ ವಿಪತ್ತೊಂದು ದೇಶವನ್ನು ಅಪ್ಪಳಿಸಲು ಕಾಯುತ್ತಿದೆ ಮತ್ತು ಪಾಸಿಟಿವ್ ಪ್ರಕರಣಗಳ ಮಹಾಪೂರವೇ ಹರಿದು ಬರಲಿದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೊರೋನ ವೈರಸ್ ಪಿಡುಗು ಉತ್ತುಂಗಕ್ಕೇರಿದೆಯೇ ಎನ್ನುವುದನ್ನು ನಿರ್ಧರಿಸಲು ಯಾವುದೇ ಲೆಕ್ಕಾಚಾರಗಳಿಲ್ಲ. ಇಂತಹ ಲೆಕ್ಕಾಚಾರಗಳಿಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ ಎಂದಿರುವ ಅವರು, ಯಾವುದೇ ರಾಜ್ಯವು ಇನ್ನೂ ಉತ್ತುಂಗವನ್ನು ತಲುಪಿಲ್ಲ. ಯಾವುದೇ ರಾಜ್ಯ ಉತ್ತುಂಗಕ್ಕೇರಿದ್ದರೂ ಅದನ್ನು ತಿಳಿಯುವುದು ಹೇಗೆ? ನಾವಿನ್ನೂ ಉತ್ತುಂಗವನ್ನು ತಲುಪಿಲ್ಲ. ಅದಿನ್ನೂ ಹಲವಾರು ವಾರಗಳಷ್ಟು ದೂರವಿದೆ. ನಾವೆಲ್ಲ ಈ ಸಾಂಕ್ರಾಮಿಕದ ಉತ್ತುಂಗದತ್ತ ಸಾಗುತ್ತಿದ್ದೇವೆ ಮತ್ತು ಪರಿಸ್ಥಿತಿಯು ತೀವ್ರವಾಗಿ ಬಿಗಡಾಯಿಸಲಿದೆ ಎಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಕೊರೋನ ವೈರಸ್ ಸೋಂಕು ಹೆಚ್ಚಲು ತಬ್ಲೀಗಿಗಳು ಕಾರಣ ಎಂಬ ಆರೋಪ ಕುರಿತಂತೆ ಡಾ.ಜಾನ್ ಅವರು, ಯಾವುದೇ ವಿಷಯವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಬಹುದು. ಈ ಎಲ್ಲ ತಬ್ಲೀಗಿಗಳನ್ನು ಗುರುತಿಸಬಹುದಾದ್ದರಿಂದ ಅವರ ಜಾಡು ಹಿಡಿಯುವುದು ಕಷ್ಟವೇನಲ್ಲ. ಮಾ.22ರಂದು ಸಂಸತ್ ಅಧಿವೇಶನ ಚಾಲ್ತಿಯಲ್ಲಿದ್ದಾಗಲೂ ಜನಜೀವನ ಸಹಜವಾಗಿಯೇ ಇದೆ ಎಂದು ಭಾರತವು ಭಾವಿಸಿತ್ತು. ದೇಶದಲ್ಲಿ ಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸಬೇಕು ಎಂದು ತಾನು ಮಾ.12ರಂದೇ ಹೇಳಿದ್ದೆ. ಆದರೆ ಬದಲಿಗೆ 1987ರ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಹೇರಲಾಗಿತ್ತು. ನ್ಯೂಯಾರ್ಕ್ ಅಥವಾ ಕೇರಳದಂತೆ ಅಧಿಕೃತ ಮಾಹಿತಿಗಳನ್ನು ದಿನನಿತ್ಯ ನೀಡಲಾಗುತ್ತಿರಲಿಲ್ಲ. 14 ಗಂಟೆಗಳ ಕಾಲ ಮನೆಯಲ್ಲಿದ್ದರೆ ಸಾಕು ಎಂಬ ಅತ್ಯಂತ ಆಶಾದಾಯಕ ಚಿತ್ರಣವನ್ನು ನಮಗೆ ಮಾ.21ರಂದು ನೀಡಲಾಗಿತ್ತು. ಆದರೆ ಮಾ.24ರಂದು ದಿಢೀರ್ ಆಗಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿತ್ತು. ಜನರು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಆಗಲೇ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿದವರು ಕಡಿಮೆ. ಹೆಚ್ಚಿನವರು ಹೊರಗಡೆ ತಿರುಗುವಾಗ ಮಾಸ್ಕ್‌ಗಳನ್ನು ಧರಿಸುತ್ತಿಲ್ಲ. ತುರ್ತು ಪರಿಸ್ಥಿತಿ ಇತ್ತೇ? ಮಾಸ್ಕ್‌ಗಳನ್ನು ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತೇ? ತಜ್ಞರು ಸರಕಾರಗಳಿಗೆ ಸೂಕ್ತ ಮಾರ್ಗದರ್ಶನ ನೀಡಿರಲಿಲ್ಲ ಎಂದು ತಾನು ಭಾವಿಸಿದ್ದೇನೆ. ಹೀಗಾಗಿ ತಬ್ಲೀಗಿಗಳು ಬಲಿಪಶುಗಳೂ ಹೌದು, ಅಪರಾಧಿಗಳೂ ಹೌದು. ಅವರು ಏಕಕಾಲದಲ್ಲಿ ಎರಡು ಅಹಿತಕರ ಅನುಭವಗಳಿಗೆ ಸಾಕ್ಷಿಯಾದರು. ನಿಜಕ್ಕೂ ಸರಕಾರವು ಮಾರ್ಚ್ ಮಧ್ಯದ ವೇಳೆಗಾಗಲೇ ಮಾಸ್ಕ್‌ಗಳ ಸಾರ್ವತ್ರಿಕ ಬಳಕೆಯನ್ನು ಕಡ್ಡಾಯಗೊಳಿಸಬೇಕಿತ್ತು ಎಂದರು.

ಸಮುದಾಯ ಸೋಂಕಿನ ಕುರಿತು ಮಾತನಾಡಿದ ಡಾ.ಜಾನ್, ಈ ಸಮುದಾಯ ಸೋಂಕಿನ ವ್ಯಾಖ್ಯೆ ಏನು? ಪ್ರವಾಸಿಯೋರ್ವ ಸೋಂಕು ತಂದರೆ ಅದು ‘ಪ್ರಯಾಣದ ಅಪಾಯ’,ಸಂಪರ್ಕವೊಂದು ಸೋಂಕಿಗೆ ಗುರಿಯಾದರೆ ಅದು ‘ಸಂಪರ್ಕ ಅಪಾಯ’, ಸಂಪರ್ಕದ ಸಂಪರ್ಕ ಸೋಂಕಿಗೆ ಗುರಿಯಾದರೆ ಅದು ಸಮುದಾಯ ಹರಡುವಿಕೆಯ ಮೊದಲ ಕೊಂಡಿಯಾಗುತ್ತದೆ. ಸೋಂಕಿಗೆ ಗುರಿಯಾದ ವ್ಯಕ್ತಿ ಯಾವುದೇ ಪ್ರಯಾಣವನ್ನು ಮಾಡಿರಲಿಲ್ಲ, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೂ ಬಂದಿರಲಿಲ್ಲ ಎಂದಾದಾಗ ಆತ ಸೋಂಕನ್ನು ಸಮುದಾಯದಿಂದ ಪಡೆದುಕೊಂಡಿದ್ದಾನೆ ಎನ್ನಬೇಕಾಗುತ್ತದೆ. ಭಾರತದಲ್ಲಿ ಸಮುದಾಯ ಹರಡುವಿಕೆ ಮಾರ್ಚ್ ಪೂರ್ವಾರ್ಧದಲ್ಲಿಯೇ ಆರಂಭಗೊಂಡಿದೆ ಎಂದರು. ಕೊರೋನ ವೈರಸ್ ಸೋಂಕು ಪತ್ತೆ ಹಚ್ಚಲು ಭಾರತದಲ್ಲಿ ಸಾಕಷ್ಟು ಪರೀಕ್ಷೆಗಳು ನಡೆಯುತ್ತಿಲ್ಲ ಎಂದು ಹೇಳಿದ ಅವರು, ಸೋಂಕು ಪ್ರಸರಣದ ಮೂಲವನ್ನು ಪತ್ತೆ ಹಚ್ಚುವುದು,ಕ್ವಾರಂಟೈನ್ ಮತ್ತು ಚಿಕಿತ್ಸೆ ‘ಸಾರ್ವಜನಿಕ ಆರೋಗ್ಯ’ ಪರೀಕ್ಷೆಯ ಉದ್ದೇಶವಾಗಿದೆ. ಆದರೆ ಈ ಯಾವುದೂ ವ್ಯಾಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಭಾರತದಲ್ಲಿ ಪರೀಕ್ಷೆಗಳು ಅಗತ್ಯ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಯಾವುದೇ ದೇಶ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಜಿಪುಣತನ ತೋರಿಸಿದರೆ ಸಾಂಕ್ರಾಮಿಕ ಪಿಡುಗಿನ ಪ್ರಮಾಣ, ಅದರ ವೇಗ ಅಥವಾ ಹರಡುವಿಕೆಯ ಭೌಗೋಳಿಕತೆ ಇವುಗಳನ್ನು ನಿರ್ಧರಿಸಲು ಪರೀಕ್ಷೆಯ ಫಲಿತಾಂಶಗಳನ್ನು ಬಳಸುವಂತಿಲ್ಲ. ಕನಿಷ್ಠ ಪಾಸಿಟಿವ್ ಸಂಖ್ಯೆಯನ್ನು ತಿಳಿದುಕೊಳ್ಳಲು ಮಾತ್ರ ಈ ಪರೀಕ್ಷಾ ಫಲಿತಾಂಶಗಳನ್ನು ಬಳಸಬಹುದು. ಯಾದ್ರಚ್ಛಿಕ ಪರೀಕ್ಷೆಗಳಲ್ಲಿ 6,000 ಜನರಲ್ಲಿ ವೈರಸ್ ಪತ್ತೆಯಾಗಿದ್ದರೆ ನಿಜವಾದ ಸೋಂಕಿತರ ಸಂಖ್ಯೆ ಅದರ 10 ಪಟ್ಟು ಅಥವಾ 20 ಪಟ್ಟು ಹೆಚ್ಚಾಗಿರಬಹುದು ಎಂದರು.

‘ಕೋವಿಡ್-19ರ ರೋಗನಿರ್ಣಯಕ್ಕಾಗಿ ಐಜಿಎಂ ಪರೀಕ್ಷೆಯು ಅಗತ್ಯವಾಗಿದೆ ಮತ್ತು ಯಾರೆಲ್ಲ ನಿರೋಧಕ ಶಕ್ತಿ ಹೊಂದಿದ್ದಾರೆ ಮತ್ತು ಸುರಕ್ಷಿತವಾಗಿ ಸಹಜ ವಾಣಿಜ್ಯ ಚಟುವಟಿಕೆಗಳಿಗೆ ಮರಳಬಹುದು ಎನ್ನುವುದನ್ನು ಪ್ರಮಾಣೀಕರಿಸಲು ಐಜಿಜಿ ಪರೀಕ್ಷೆ ಅಗತ್ಯವಿದೆ. ಇದನ್ನು ನಾವು ಆರಂಭಿಸಿದರೆ ನಾವು ವಿಶ್ವದಲ್ಲಿ ಮೊದಲಿಗರಾಗುತ್ತೇವೆ. ಇದು ಆರ್ಥಿಕತೆಯ ಪುನರ್‌ನಿರ್ಮಾಣಕ್ಕೆ ನನ್ನ ವಿನೂತನ ಪರಿಖಲ್ಪನೆಯಾಗಿದೆ’ ಎಂದು ಡಾ.ಜಾನ್ ಹೇಳಿದ್ದಾರೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ