Breaking News

ಬಿಟ್ ಕಾಯಿನ್ ಕೇಸ್ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ತು ಸ್ಪೋಟಕ ಮಾಹಿತಿ

Spread the love

ಬೆಂಗಳೂರು : ಬಿಟ್ ಕಾಯಿನ್ ಕೇಸ್ ನ ಆರೋಪಿ ಶ್ರೀಕಿ ಜೊತೆ ಕಿರಿಕ್ ಮಾಡಿಕೊಂಡು ಬಂಧನಕ್ಕೊಳಗಾಗಿದ್ದ ಭೀಮಾ ಜ್ಯುವೆಲ್ಲರ್ಸ್ ನ ಮಾಲೀಕರ ಮಗ ವಿಷ್ಣುಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ಇದೀಗ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದೆ.

 

ಎನ್ ಡಿ ಪಿ ಎಸ್ ಕಾಯಿದೆ ಅಡಿ ಬಂಧನಕ್ಕೊಳಗಾದ ವಿಷ್ಣುಭಟ್ ವಿದೇಶಿ ಪ್ರಜೆ ಜೊತೆ ಪೆಡ್ಲಿಂಗ್ ನಡೆಸುತ್ತಿದ್ದನು ಎನ್ನಲಾಗಿದೆ. ಆದ್ದರಿಂದ ಆತನ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ಹಾಗೂ ಪೌಡರ್ ಮಾದರಿಯ ಡ್ರಗ್ಸ್ ಪತ್ತೆಯಾಗಿದೆ.

ಆರೋಪಿಯ ಮೊಬೈಲ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಾಗಿದ್ದು, ಈತ ನೈಜೀರಿಯನ್ ಪ್ರಜೆ ಜೊತೆ ಸೇರಿ ಪೆಡ್ಲಿಂಗ್ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. ಆರೋಪಿ ಜೊತೆ ಹಲವರು ಪಾರ್ಟಿಯಲ್ಲಿ ಭಾಗವಹಿಸಿದ್ದು, ಅವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ