Breaking News
Home / Uncategorized / ಆರೋಗ್ಯ, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ ಮೂರನೇ ದಿನ ಪೂರೈಸಿದೆ.

ಆರೋಗ್ಯ, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ ಮೂರನೇ ದಿನ ಪೂರೈಸಿದೆ.

Spread the love

ಬೆಂಗಳೂರು : ಹಲವಾರು ವರ್ಷಗಳಿಂದ ನ್ಯಾಯಯುತವಾದ ಬೇಡಿಕೆಗಳು ಈಡೇರಿಸುವಂತೆ ಎಲ್ಲ ಹಂತಗಳಲ್ಲಿ ಹೋರಾಟ ನಡೆಸಿದರೂ ಸಹ ಸ್ಪಂದಿಸದೇ, ಸರ್ಕಾರದ ನೌಕರರ ವಿರೋಧಿ ಧೋರಣೆ ಹಾಗೂ ಒಡೆದು ಆಳುವ ಪ್ರವೃತ್ತಿ ಮತ್ತು ಕ್ರಮಕ್ಕೆ ಗುರಿ ಮಾಡುತ್ತಿರುವುದು ವಿಷಾದನೀಯ. ಕೊರೋನಾ ವೈರಸ್ ಹಾವಳಿ ಸಂದರ್ಭದಲ್ಲಿಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ಅಂತಹ ಬಡ ನೌಕರರ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದುದನ್ನು ಖಂಡಿಸಿದ ಆರೋಗ್ಯ, ವೈದ್ಯಕೀಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ (ಬಿ.ಎಂ.ಎಸ್ ಸಂಯೋಜಿತ) ದಿಂದ ನಡೆಸಲಾಗುತ್ತಿರುವ ಅಸಹಕಾರ ಚಳುವಳಿ (ಕೆಲಸ ಸ್ಥಗಿತ ಹೋರಾಟ) ಮೂರನೇ ದಿನ ಪೂರೈಸಿದೆ. ನಮ್ಮ ಬೇಡಿಕೆ ಈಡೇರಿಸೋವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂಬುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಸ್ಪಷ್ಟ ಪಡಿಸಿದ್ದಾರೆ.ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೊವೆಲ್ ಕೊರೋನಾ ವೈರಸ್ ಹಾವಳಿ ಸಂದರ್ಭದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ ನೌಕರರ ಪೈಕಿ ಒಳ ಹೊರ ಗುತ್ತಿಗೆ ನೌಕರರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಆದರೆ ಪ್ರಾಣ ಪಣಕ್ಕಿಟ್ಟು ನೀಡಿದ ಸೇವೆಯನ್ನೂ ಪರಿಗಣಿಸದೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ, ಈಗ ನೋಟೀಸ್ ಜಾರಿ ಮಾಡಿದ್ದು ಯಾವ ನ್ಯಾಯ.? ನಾವು ಇದಕ್ಕೆ ಜಗ್ಗುವುದಿಲ್ಲ. ನ್ಯಾಯಯುತ ರೀತಿಯಲ್ಲಿ ಹೋರಾಟ ಮುಂದುವರೆಸುತ್ತಿರುವುದಾಗಿ ತಿಳಿಸಿದರು.International Human Rights Law ನಲ್ಲಿ ಮೊದಲ ಬಾರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ನಮ್ಮ ಸಂವಿಧಾನದ article 14 ಮತ್ತು 16 ರಂತೆ Equal rights and Equal opportunity ನೀಡಬೇಕಾಗಿದೆ. ಅದರಂತೆ ಅನೇಕ ಪ್ರಕರಣಗಳಲ್ಲಿ ಅಂದರೆ State of Haryana v/s Jasvir Singh ಪ್ರಕರಣ, Avatar Singh v/s State of Punjab ಪ್ರಕರಣಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದರ ಬಗ್ಗೆ ಆದೇಶ ಹೊರಡಿಸಲಾಗಿದೆ. 2016 ರಲ್ಲಿ ಸರ್ವೋಚ್ಯ ನ್ಯಾಯಾಲಯವು State of Punjab and others v/s Jagjeet Singh and others ಪ್ರಕರಣದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ನಿರ್ದೇಶಿಸಿರುತ್ತದೆ. ಆದರೆ ಸರಕಾರವು ಈ ಆದೇಶವನ್ನೇ ಅನುಸರಿಸದೆ ಎಲ್ಲ ಗುತ್ತಿಗೆ ನೌಕರರನ್ನು ಯಾವುದೇ ಸೌಲಭ್ಯ ನೀಡದೆ ಅನ್ಯಾಯ ಮಾಡಿರುತ್ತಿದೆ. ಅದೇ ಕಾರಣಕ್ಕೆ ಎಲ್ಲ ನಮ್ಮ ನೌಕರರು ಹೋರಾಟಕ್ಕಿಳಿದಿದ್ದು ಇದಕ್ಕೆ ಸರಕಾರದ ಕುರುಡು ನೀತಿಯೇ ನೇರ ಹೊಣೆಯಾಗಿದೆ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ ಸಮಾನ ಕೆಲಸಕ್ಕೆ ಸಮಾನವೇತನ, ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು. ಹೀಗೆ ಮಾಡದ ಹೊರತು, ನಮ್ಮ ಬೇಡಿಕೆ ಈಡೇರದ ಹೊರತು ನಾವು ಹೋರಾಟ ಕೈಬಿಡುವುದಿಲ್ಲ. ಯಾವುದೇ ಹೆದರಿಸುವಂತ ರೀತಿಯ ನೋಟಿಸ್ ನೀಡಿದರು ನಮ್ಮ ನೌಕರರು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಬೇಡಿಕೆ ಈಡೇರಿದ ನಂತ್ರವೇ ಪ್ರತಿಭಟನೆಯನ್ನು ವಾಪಾಸ್ ಪಡೆಯುವುದಾಗಿ ಸ್ಪಷ್ಟ ಪಡಿಸಿದರು.


Spread the love

About Laxminews 24x7

Check Also

ಕಾಯಕಲ್ಪಕ್ಕೆ ಕಾದಿದೆ ಶತಮಾನದ ಕೆರೆ

Spread the love ಚಿಕ್ಕೋಡಿ: ‘ಕೆರೆಯನ್ನು ಕಟ್ಟಿಸು. ಬಾವಿಯನ್ನು ಸವೆಸು….’ ಎಂದು ಕನ್ನಡ ಶಾಸನವೊಂದರಲ್ಲಿ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ