Breaking News

ಲಕ್ಷ್ಮೀ ದೇವಿಯ ಜಾತ್ರೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,

Spread the love

ಬೆಳಗಾವಿ – ಬೆಳಗಾವಿ ಸಮೀಪದ ಸುಳೇಭಾವಿ ಗ್ರಾಮದ ಲಕ್ಷ್ಮೀ ದೇವಿಯ ಜಾತ್ರೆಯಲ್ಲಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ವೇದಿಕೆ ಹಂಚಿಕೊಂಡ ಪ್ರಸಂಗ ನಡೆಯಿತು.

ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಲಕ್ಷ್ಮೀ ದೇವಿಯ ಜಾತ್ರೆ ನಡೆದಿತ್ತು ಪತ್ರಕರ್ತ ಭೈರು ಕಾಂಬಳೆ ರಚಿಸಿದ ‘ಜಾತ್ರಿ ಬಂತು’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದರು.ಇಬ್ಬರೂ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡಲಿಲ್ಲ

ಒಂದೇ ವೇದಿಕೆಯಲ್ಲಿದ್ದು ಇಬ್ಬರು ಅಂತರ ಕಾಯ್ದುಕೊಂಡ‌ರು.ಇಬ್ಬರೂ ಮಾತಾಡುವಾಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಸೀಳೆ ಹೊಡೆದು ಜೋರಾಗಿ ಚೀರುವ ಮೂಲಕ ಸಂಬ್ರಮಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ ಕೊಲ್ಹಾಪೂರದ ಮಹಾ ಲಕ್ಷ್ಮೀ, ಸುಳೇಭಾವಿ ಗ್ರಾಮದ ಮಹಾಲಕ್ಷ್ಮೀ ಇಬ್ಬರೂ ಒಂದೇ .ಪತ್ರಕರ್ತ ಭೈರೂ ಕಾಂಬಳೆ ಅವರು ದೇವಿಯ ಮಹಿಮೆ ಸಾರುವ ಕಿರು ಚಿತ್ರ ನಿರ್ಮಿಸಿದ್ದು.ಸಂತಸ ತಂದಿದೆ ಕಿರು ಚಿತ್ರದ ಮೂಲಕ ಲಕ್ಷ್ಮೀ ದೇವಿಯ ಮಹಿಮೆ ಎಲ್ಲೆಡೆ ಪಸರಿಸಲಿ ದೇವಿಯ ಆಶಿರ್ವಾದಕ್ಕೆ ಎಲ್ಲರೂ ಪಾತ್ರರಾಗಲಿ.ಎಂದರು

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಐದು ವರ್ಷಕ್ಕೊಮ್ಮೆ ನಡೆಯುವ ಲಕ್ಷ್ಮೀ ದೇವಿಯ ಲಕ್ಷ್ಮೀ ಜಾತ್ರೆಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಿದ್ದೇನೆ.ಈ ಭಾಗದಲ್ಲಿ ಬಸ್ ನಿಲ್ಧಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಪತ್ರಕರ್ತ ಭೈರು ಕಾಂಬಳೆ ಮಾತನಾಡಿ ಸುಳೇಭಾವಿ ಗ್ರಾಮದ ಮಹಾಲಕ್ಷ್ಮಿ ದೇವಿಯ ಮಹಿಮೆ ಎಲ್ಲ ಭಕ್ತರಿಗೆ ಗೊತ್ತಾಗಲಿ ಎಂದು ದೇವಿಯ ಮಹಿಮೆ ಸಾರುವ ಜಾತ್ರೆ ಬಂತು ಕಿರು ಚಿತ್ರ ನಿರ್ಮಾಣ ಮಾಡಿದ್ದೇನೆ.ಜಾತ್ರೆಯ ದಿನವೇ ಇದು ಬಿಡುಗಡೆಗೆ ಗ್ರಾಮದ ಹಿರಿಯರು ಸಹಕಾರ ನೀಡಿದರು ಅದಕ್ಕೆ ನಾನು ಯಾವತ್ತು ಆಭಾರಿಯಾಗಿದ್ದೇನೆ.ಎಂದು ಭೈರು ಹೇಳಿದರು


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ