Home / ಜಿಲ್ಲೆ / ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

ತಬ್ಲಿಘಿ ಜಮಾತ್‍ಗೆ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ಭಾಗಿ – ಸಿಎಂ ಮಾಹಿತಿ

Spread the love

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದರು ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ದೆಹಲಿ ಜಮಾತ್ ಕಾರ್ಯಕ್ರಮಕ್ಕೆ ಹೋದವರ ಕುರಿತು ಟ್ಟಿಟ್ಟರಿನಲ್ಲಿ ಮಾಹಿತಿ ನೀಡಿದ್ದಾರೆ. “ದೆಹಲಿಯ ನಿಜಾಮುದ್ದೀನ್‍ನ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಲಾಗಿದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಎಷ್ಟು ಮಂದಿ ಜಮಾತ್‍ನಲ್ಲಿ ಭಾಗಿಯಾಗಿದ್ದರು, ಯಾವ ಜಿಲ್ಲೆಯಿಂದ ಎಷ್ಟು ಮಂದಿ ಹೋಗಿದ್ದರು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ದೆಹಲಿಯ ನಿಜಾಮುದ್ದೀನ್‍ನಲ್ಲಿ ತಬ್ಲಿಘಿ ಜಮಾತ್‍ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ 1,300ಕ್ಕೂ ಹೆಚ್ಚು ಜನರು ತೆರಳಿದ್ದು, ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವರಲ್ಲಿ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ, ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತು ಸಹ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯರನ್ನು ಹೊರತುಪಡಿಸಿ ಬೇರೆ ಬೇರೆ ರಾಷ್ಟ್ರೀಯತೆಯ 57 ತಬ್ಲಿಘಿ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರಿನಲ್ಲಿ 8 ಜನರು, ಬೆಳಗಾವಿಯಲ್ಲಿ 10 ಮಂದಿ, ತುಮಕೂರಿನಲ್ಲಿ 8 ಜನರು ಹಾಗೂ ಬೆಂಗಳೂರಿನಲ್ಲಿ 31 ಮಂದಿಯನ್ನ ಗುರುತಿಸಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದರು

ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲಿಘಿ ಜಮಾತ್‍ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ