Breaking News
Home / ರಾಜಕೀಯ / ಸ್ವಾತಂತ್ರ್ಯೋತ್ಸವ ಆಚರಣೆಗೆ ವಾಯು ಧಾಳಿ ಸಾಧ್ಯತೆ ; ರಾಜ್ಯಗಳಿಗೆ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

ಸ್ವಾತಂತ್ರ್ಯೋತ್ಸವ ಆಚರಣೆಗೆ ವಾಯು ಧಾಳಿ ಸಾಧ್ಯತೆ ; ರಾಜ್ಯಗಳಿಗೆ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

Spread the love

ದೆಹಲಿ – ಮುಂದಿನ ಆಗಸ್ಟ್‌ 15 ರಂದು ದೇಶವು ಸಂಭ್ರಮ ಸಡಗರದಿಂದ ಸ್ವಾತಂತ್ರ್ಯದಿನಾಚರಣೆ ಆಚರಣೆಗೆ ಉಗ್ರರ ಕರಿನೆರಳು ಬಿದ್ದಿದೆ. ಆಚರಣೆಯ ಸಂದರ್ಭದಲ್ಲಿ ವಾಯುಮಾರ್ಗದ ಸಂಭಾವ್ಯ ಧಾಳಿಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು ಭದ್ರತೆಯ ದೃಷ್ಟಿಯಿಂದ ಅಗತ್ಯವಾದ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ.

ಕೇಂದ್ರವು ನೀಡಿರುವ ಸೂಚನೆಯ ಪ್ರಕಾರ ಡ್ರೋನ್‌ ಗಳಿಂದ ಧಾಳಿ ನಡೆಯುವ ಸಾದ್ಯತೆ ಇದೆ ಎನ್ನಲಾಗಿದೆ. ಕಳೆದ ಜೂನ್‌ 27ರಂದು ಜಮ್ಮು-ಕಾಶ್ಮೀರದ ವಾಯು ನೆಲೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಡ್ರೋಣ್ ದಾಳಿ ನಡೆದಿತ್ತು. ಅನಂತರ ಸರದಿಯಂತೆ ಹಲವಾರು ದಾಳಿಗಳು ಈ ಭಾಗದಲ್ಲಿ ನಡೆದಿದ್ದವು. ನೆರೆ ರಾಷ್ಟ್ರದ ಗಡಿ ಭಾಗದಿಂದ ಎದುರಾಗುತ್ತಿರುವ ಡ್ರೋಣ್ ದಾಳಿಯನ್ನು ಭಾರತೀಯ ಪಡೆಗಳು ಸಮರ್ಥವಾಗಿ ಹತ್ತಿಕ್ಕಿವೆ. ಡ್ರೋಣ್‍ಗಳನ್ನು ಬಳಸಿ ದೇಶದ ಒಳಭಾಗದಲ್ಲೂ ದಾಳಿ ನಡೆಯುವ ಆತಂಕವಿದೆ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡ್ರೋಣ್‍ಗಳ ಹಾರಾಟ ಸಾಮಾನ್ಯ. ಈ ನಿಟ್ಟಿನಲ್ಲಿ ಎಚ್ಚರಿಕೆ ರವಾನಿಸಿರುವ ಕೇಂದ್ರ ಗೃಹ ಸಚಿವಾಲಯ ವಾಯು ಮಾರ್ಗದಲ್ಲಿನ ಡ್ರೋಣ್, ಪ್ಯಾರಾಗ್ಲೈಡರ್ಸ್, ಹಗುರ ವಿಮಾನಗಳು, ಹಾಟ್‍ಬಲೂನ್‍ಗಳ ಹಾರಾಟದ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ.

ಕೇಂದ್ರ ಸರ್ಕಾರದ ಮಾಹಿತಿ ರವಾನೆಯಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ 20 ದಿನಗಳ ಮೊದಲೇ ಡ್ರೋಣ್ ಸೇರಿದಂತೆ ಎಲ್ಲ ಹಗುರ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಪುಣೆ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲೂ ಕಟ್ಟೆಚ್ಚರವಹಿಸಲು ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ.ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ಮಹತ್ವದ್ದಾಗಿದ್ದು, ಅಮೃತ ಮಹೋತ್ಸವವೂ ಆಗಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಬಿಗಿಬಂದೋಬಸ್ತ್ ನಿಯೋಜಿಸಬೇಕು. ಎತ್ತರವಾದ ಸ್ಥಳ ಗುರುತಿಸಿ ಅಲ್ಲಿನ ಕಟ್ಟಡದ ಮೇಲೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಶಂಕಾಸ್ಪದವಾದ ಯಾವುದೇ ಹಾರಾಟಗಳು ಕಂಡು ಬಂದರೆ ತಕ್ಷಣವೇ ನಿಗ್ರಹಿಸಬೇಕು. ಭದ್ರತಾ ಸಿಬ್ಬಂದಿಗಳು ನಿಯೋಜನೆಗೊಂಡ ಸ್ಥಳದಿಂದ ಸುರಕ್ಷತೆ ಒದಗಿಸಬೇಕಾದ ಪ್ರದೇಶ ಗೋಚರಿಸುವಂತಿರಬೇಕೆಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ

Spread the love ಬೆಂಗಳೂರು: ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ