Breaking News
Home / ರಾಷ್ಟ್ರೀಯ / ದುಬಾಯಿಯಲ್ಲಿ ಗಿನ್ನೆಸ್ ದಾಖಲೆಯ ಮಿರಾಕಲ್ ಗಾರ್ಡನ್

ದುಬಾಯಿಯಲ್ಲಿ ಗಿನ್ನೆಸ್ ದಾಖಲೆಯ ಮಿರಾಕಲ್ ಗಾರ್ಡನ್

Spread the love

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಸುಂದರ ವರ್ಣರಂಜಿತ ನಗರಗಳಲ್ಲಿ ದುಬಾಯಿ ವಿಶ್ವ ವಿಖ್ಯಾತ ಜ್ಞಾನ ವಿಜ್ಞಾನದ ನಗರ. ಗಿನ್ನೆಸ್ ದಾಖಲೆಯಲ್ಲಿ ಹಲವಾರು ಅದ್ಭುತಗಳು ಸೇರ್ಪಡೆಯಾಗಿದೆ. ಈ ರೀತಿಯ ಮಾಡಿಕೊಂಡಿರುವ ದಾಖಲೆಗಳ ಸಾಲಿನಲ್ಲಿ ದುಬಾಯಿ ಮಿರಾಕಲ್ ಗಾರ್ಡನ್ ಪುಷ್ಪ ಪ್ರಿಯರ ಸ್ವರ್ಗ. ವಿಶ್ವದ ಉದ್ಯಾನವನಗಳಲ್ಲಿ ಅತ್ಯಂತ ಹೆಚ್ಚು ವಿಸ್ತಾರವಾಗಿಯೂ ಹಾಗೂ ಅತ್ಯಂತ ಎತ್ತರದ ವಾಸ್ತು ಶಿಲ್ಪದ ಆಕೃತಿಯ ಪುಷ್ಪ ಉಧ್ಯಾನವನದ ವಿನ್ಯಾಸಕ್ಕಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.
2013 ಫೆಬ್ರವರಿ 14ನೇ ತಾರೀಕು ಪ್ರೇಮಿಗಳ ದಿನದಂದು ದುಬಾಯಿ ಮಿರಾಕಲ್ ಗಾರ್ಡನ್ ಉದ್ಘಾಟನೆಯಾಗಿ ಲೋಕಾರ್ಪಣೆಯಾಯಿತು. ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಮೇ ತಿಂಗಳಿನವರೆಗೆ ಸಾರ್ವಜನಿಕವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ತೆರೆದಿದ್ದು ಹಗಲಿನಲ್ಲಿ ಸೂರ್ಯನ ಬೆಳಕಿನಲ್ಲಿ ಹಾಗೂ ರಾತ್ರಿ ಪ್ರಖರ ವಿದ್ಯುತ್ ದೀಪದ ಬೆಳಕಿನಲ್ಲಿ ಪುಷ್ಪ ಲೋಕ ನೋಡುಗರ ಮನತಣಿಸುತ್ತದೆ.
ದುಬಾಯಿ ಮಿರಾಕಲ್ ಗಾರ್ಡನ್ ದುಬಾಯಿ ದೊರೆಯ ಹೆಸರಿನಲ್ಲಿರುವ ಮಹ್ಮದ್ ಬಿನ್ ಜಾಹಿದ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ದುಬಾಯಿ ಲ್ಯಾಂಡ್ ನಲ್ಲಿ ನಿರ್ಮಾಣವಾಗಿದೆ. ಎಪ್ಪತೆರಡು ಸಾವಿರ ಚದರ ಮೀಟರ್ ನಲ್ಲಿ ವ್ಯಾಪಿಸಿರುವ ಉಧ್ಯಾನವನದಲ್ಲಿ ನೂರಾ ಐವತ್ತು ಮಿಲಿಯನ್ ಪುಷ್ಪಗಳು ಅರಳಿ ನಿಂತಿದೆ. ನೂರ ಇಪ್ಪತ್ತು ವಿವಿಧ ರೀತಿಯ ತಳಿಯ ಗಿಡಗಳು ಹೂವುಗಳನ್ನು ಅರಳಿಸುತ್ತದೆ.
ಪ್ರತಿದಿನ ಎರಡು ಲಕ್ಷ ಯು.ಎಸ್. ಗ್ಯಾಲನ್ ನೀರನ್ನು ಉದ್ಯಾನವನಕ್ಕೆ ಹಾಯಿಸಲಾಗುತ್ತದೆ. ಈ ನೀರು ದುಬಾಯಿಯ ಒಳಚರಂಡಿಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ಉದ್ಯಾನವನದಲ್ಲಿ ಉಪಯೋಗಿಸುತ್ತಿದ್ದಾರೆ.ಮೂರು ಬಾರಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿರುವ ದುಬಾಯಿ ಮಿರಾಕಲ್ ಗಾರ್ಡನ್ ವಿಶ್ವದಲ್ಲಿ ಸಮತಟ್ಟಿನಲ್ಲಿ ಅತ್ಯಂತ ವಿಸ್ತಾರವಾಗಿಯೂ ಮತ್ತು ಅತ್ಯಂತ ಎತ್ತರದ ವಿವಿಧ ವಾಸ್ತುಶಿಲ್ಪದ ಅಕೃತಿಯ ಮೇಲ್ಪದರದಲ್ಲಿ ಹೂವಿನ ಗಿಡಗಳನ್ನು ಬೆಳಿಸಿರುವ ಕೌಶಲ್ಯಕ್ಕೆ ಪ್ರಥಮ ಬಾರಿಗೆ 2013 ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.

ದುಬಾಯಿಯ ಎಮಿರೇಟ್ಸ್ ಏರ್ ಲೈನ್ಸ್ ನ ಎ380 ಏರ್ ಬಸ್ ನೈಜ್ಯತೆಯ ಮಾದರಿಯಯನ್ನು ನಿರ್ಮಾಣ ಮಾಡಿದ ಕೃತಿಯ ಮೇಲ್ಪದರದಲ್ಲಿ ಪುಷ್ಪಗಳನ್ನು ಬೆಳೆಸಿರುವ ಚಾಕಚ್ಕ್ಯತೆಗೆ 2016ರಲ್ಲಿ ಎರಡನೆಯ ಬಾರಿಗೆ ಗಿನ್ನೆಸ್ ದಾಖಲೆಗೆ ದುಬಾಯಿ ಮಿರಾಕಲ್ ಗಾರ್ಡನ್ ಸೇರ್ಪಡೆಯಾಯಿತು.ವಾಲ್ಟ್ ಡಿಸ್ನೆ ಕಂಪೆನಿಯ ಪರವಾನಿಗೆ ಮತ್ತು ಕರಾರು ಒಪ್ಪಂದದೊಂದಿಗೆ 18 ಮೀಟರ್ ಎತ್ತರದ “ಮಿಕ್ಕಿ ಮೌಸ್” ಆಕೃತಿಯನ್ನು ರಚಿಸಿ ಅದರ ಮೇಲ್ಪದರ ಮೇಲೆ ಒಂದು ಲಕ್ಷ ಹೂವು ಅರಳಿಸಿರುವ ಚಮತ್ಕಾರಕ್ಕೆ ದುಬಾಯಿ ಮಿರಾಕಲ್ ಗಾರ್ಡನ್ ಮೂರನೆ ಬಾರಿಗೆ 2018 ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.

ಮಿರಾಕಲ್ ಗಾರ್ಡನಲ್ಲಿ ಪ್ರತಿವರ್ಷ ಒಂದೊಂದು ನೂತನ ವಾಸ್ತುಶಿಲ್ಪದ ವೈವಿಧ್ಯಮಯ ವಿನ್ಯಾಸಗಳನ್ನು ಸೇರ್ಪಡೆಮಾಡುತ್ತಾರೆ. ಪುಷ್ಪ ಉದ್ಯಾನವು ಅತ್ಯಂತ ಆಕರ್ಷಣೀಯವಾಗಿ ಅಂದ ಹೆಚ್ಚಿಸಿ ಕೊಂಡು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.ದುಬಾಯಿ ಮಿರಾಕಲ್ ಗಾರ್ಡನ್ ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗುತ್ತದೆ. ಮೇ ತಿಂಗಳಿನವರೆಗೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತದೆ. 2013 ರಲ್ಲಿ ದುಬಾಯಿ ಮಿರಾಕಲ್ ಗಾರ್ಡನ್ ನಿರ್ಮಾಣ ಮಾಡಲು ತಗಲಿರುವ ವೆಚ್ಚ 40 ಮಿಲಿಯನ್ ದಿರಾಂಸ್ 11 ಮಿಲಿಯನ್ ಯು.ಎಸ್. ಡಾಲರ್ಸ್. ಅರಬ್ ಸಂಯುಕ್ತ ಸಂಸ್ಥಾನದ ಅರಬ್ಬರ ವೃಕ್ಷ ಪ್ರೇಮ, ಹಸಿರು ಕ್ರಾಂತಿಗೆ ಸಾಕ್ಷಿಯಾಗಿರುವ ದುಬಾಯಿ ಮಿರಾಕಲ್ ಗಾರ್ಡನ್ ಸಾಕ್ಷಿಯಾಗಿದೆ.
SCRIPT CREDITS TO ; ಬಿ. ಕೆ. ಗಣೇಶ್ ರೈ – ಯು.ಎ.ಇ.


Spread the love

About Laxminews 24x7

Check Also

ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ ಇಬ್ಬರು ಶಿಕ್ಷಕರ ಅಮಾನತು

Spread the love ನವದೆಹಲಿ: ಪರೀಕ್ಷಾರ್ಥಿಗಳಿಗೆ ಅವರ ಉತ್ತರಗಳ ಗುಣಮಟ್ಟದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಆದಾಗ್ಯೂ, ಉತ್ತರ ಪ್ರದೇಶದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ