Breaking News
Home / ಜಿಲ್ಲೆ / ಬೆಂಗಳೂರು / ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

Spread the love

ಬೆಂಗಳೂರು: ಈತನ ಲವ್ವು ತನ್ನ ಲೈಫನ್ನೆ ಬದಲಿಸಿತ್ತು. ಪ್ರೀತಿಸೋದಳನ್ನ ರಾಯಲಾಗಿ ನೋಡಿಕೊಳ್ಳಬೇಕೆಂಬ ಆಸೆ ಮತ್ತು ನೆಪವೇ ಈತ ಅಫೆನ್ಸ್​ಗಳ ಮೇಲೆ ಅಫೆನ್ಸ್ ಮಾಡೋದಕ್ಕೆ ಕಾರಣವಾಯ್ತು. ಒಂದು ಬಾರಿ ಕಳ್ಳ ಎನಿಸಿಕೊಂಡವನು ಅದೇ ಚಟವಾಗಿದ್ದರಿಂದ ತನ್ನೀಡಿ ಜೀವನವನ್ನೇ ಕಳ್ಳತನಕ್ಕೆ ಮುಡಿಪಿಟ್ಟಿದ್ದ ಅಂತಹ ಕಳ್ಳನನ್ನ ಸಿಸಿಬಿ ಹೆಡೆಮುರಿ ಕಟ್ಟಿದೆ.

ಬರೋಬ್ಬರಿ 80 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನವನ್ನ ಈ ಕುಖ್ಯಾತ ಅಂತರ್ ರಾಜ್ಯ ಕಳ್ಳನಿಂದ ಸಿಸಿಬಿ ಅಧಿಕಾರಿಗಳು ರಿಕವರಿ ಮಾಡಿಕೊಂಡಿದ್ದಾರೆ. 2014 ರಿಂದಲೂ ಈ ಬಸವರಾಜ@ಪ್ರಕಾಶ@ಜಂಗ್ಲಿ ಎಂಬ ಈ ನಟೋರಿಯಸ್ ಕಳ್ಳ, ನಗರದಲ್ಲಿ ವಿಪರೀತವಾಗಿ ಹಾವಳಿ ಇಟ್ಟಿದ್ದ. ಕಾರೆತ್ತಿಕೊಂಡು ರಸ್ತೆಗಿಳಿದರೆ ಅಂದು ಯಾರೋದ್ದೋ ಮನೆಗೆ ಗಂಡಾಂತರ ಕಾದಿದೆ ಎಂದೇ ಅರ್ಥ. ಐದಾರು ವರ್ಷದಿಂದ ಖಾಕಿ ಕೈಗೆ ಸಿಗದ ಜಂಗ್ಲಿಯನ್ನ ಸಿಸಿಬಿಯ ಹಜರೇಶ್ ಆಂಡ್ ಟೀಂ ಬಂಧಿಸಿ ಜೈಲಿಗೆ ದಬ್ಬಿದೆ.

ವಿಪರೀತ ಶೋಕಿಲಾಲನಾದ ಈತ 2013ರ ರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದ್ವೆಯಾಗಿದ್ದ. ಈ ಮದ್ವೆಗೆ ಮನೆಯವರ ವಿರೋಧವಿದ್ದಿದ್ದರಿಂದ ಅವರಿಬ್ಬರ ಕುಟುಂಬ ಇವರನ್ನ ದೂರ ಮಾಡಿತ್ತು. ಹೆಂಡ್ತಿಯನ್ನ ಸಾಕಬೇಕು ಎಂಬ ಕಾರಣಕ್ಕೆ ಬೇಕರಿ, ಮೊಬೈಲ್ ಶಾಪ್​ಗಳಲ್ಲಿ ಕೆಲಸ ಮಾಡುತ್ತಿದ್ದ. ಯಾವಾಗ ಸಾಲ ಹೆಚ್ಚಾಯ್ತೋ ಕಳ್ಳತನಕ್ಕೆ ಇಳಿದಿದ್ದ. ಕದ್ದರೂ ಕೂಡ ಪೊಲೀಸರಿಂದ ತಪ್ಪುಸಿಕೊಂಡಿದ್ದವನ ಬಗ್ಗೆ ಯಾರೀಗೂ ಅನುಮಾನ ಬಾರದ ಹಿನ್ನಲೆ ಲೈಫ್ ಲೀಡ್ ಮಾಡೋದಕ್ಕೆ ಕಳ್ಳತನವೇ ಬೆಸ್ಟ್ ಎಂದು ಮೈಂಡಲ್ಲಿ ಫಿಕ್ಸ್ ಆಗಿ ಹೋದ. ಮೊದ ಮೊದಲು ಕುಟುಂಬ ನಿರ್ವಹಣೆಗೆ ಕದಿಯುತ್ತಿದ್ದವನು ಅದನ್ನೇ ವೃತ್ತಿಯನ್ನಾಗಿಸಿಕೊಂಡ ಜಂಗ್ಲಿ, ಅಂತರ್ ರಾಜ್ಯ ಕಳ್ಳನಾಗಿ ಕುಖ್ಯಾತಿ ಪಡೆದ.

ಬಿಡದಿ, ವಿಜಯನಗರ, ಕೊಡಿಗೇಹಳ್ಳಿ ಸೇರಿದಂತೆ ನಗರದ ಒಟ್ಟು 11 ಕಡೆ ಕಳ್ಳತನ ಮಾಡಿದ್ದ ಈತನ ಕದಿಯುವ ಸಂಧರ್ಭದಲ್ಲಿ ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಪೊಲೀಸರು ನೆಟ್ವರ್ಕ್ ಬೇಸ್ ಮೇಲೆ ಫಾಲೋ ಮಾಡಬಹುದೇನೋ ಎಂಬ ಆತಂಕದಲ್ಲಿ ಒಂದು ಕಡೆ ಕಳ್ಳತನ ಮಾಡಿದ್ರೆ ತಪ್ಪಿಸಿಕೊಳ್ಳೊದಕ್ಕೆ ಊರೆಲ್ಲಾ ತಿರುಗಿ ಪೊಲೀಸರಿಗೆದಾರಿ ತಪ್ಪಿಸುತ್ತಿದ್ದ. ಇನ್ನು ಈತನ ಮತ್ತೊಂದು ಮೋಟೀವ್ ಅಂದ್ರೆ ಯಾವಾಗ ಹೊಸ ಕಾರಿನಲ್ಲಿಯೇ ಬಂದು ಕಳ್ಳತನ ಮಾಡ್ತಿದ್ದಲ್ಲದೆ, ಆ ಹೊಸ ಕಾರುಗಳನ್ನ ಬೇರೆಯವರ ಹೆಸರಿನಲ್ಲಿ ಖರಿದೀಸಿ ಸಾಕ್ಷಿಯೇ ಸಿಗದ ರೀತಿಯಲ್ಲಿ ಮಾಡುತ್ತಿದ್ದ. ಹೊಸ ಕಾರಿನಲ್ಲಿ ಬಂದರೆ ಡೌಟು ಬರೋದಿಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಅಫೆನ್ಸ್ ಮಾಡಿ ನೇರವಾಗಿ ಈತ ಹೋಗುತ್ತಿದ್ದಿದ್ದು ತೆಲಂಗಾಣ ಅಥವಾ ಹೈದರಾಬಾದ್​ಗೆ. ಇನ್ನು ನೆನ್ನೆ ಸಿಸಿಬಿ ಅಧಿಕಾರಿಗಳಿಗೆ ಜಂಗ್ಲಿ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಅಲರ್ಟ್ ಆದ ಪೊಲೀಸರು ಹೆಬ್ಬಾಳದ ಬಳಿ ಆರೋಪಿಯನ್ನ ಚೇಝ್ ಮಾಡಿ ಬಂಧಿಸಿದ್ದಾರೆ.

ಸದ್ಯ ಆರೋಪಿಯಿಂದ ಒಂದು ಹೊಸ ಬ್ರೀಜಾ ಮತ್ತು ಮಾರುತಿ ಸ್ವಿಫ್ಟ್ ಕಾರನ್ನ ವಶಕ್ಕೆ ಪಡೆದಿದ್ದಾರೆ. ಆಂಧ್ರದಲ್ಲಿಯೂ ಕೂಡ ಅಫೆನ್ಸ್ವಗೆ ಬಳಸಿರುವ ಕಾರುಗಳಿದ್ದು ಅದನ್ನೂ ರಿಕವರು ಮಾಡಲು ಸಿಸಿಬಿ ಟೀಂ ತಯ್ಯಾರಿ ನಡೆಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ