Breaking News
Home / Uncategorized / ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು5 ದಿನ ಬೆಂಗಳೂರು ನಗರವನ್ನ ಸಂಪೂರ್ಣವಾಗಿ ಲಾಕ್‍ಡೌನ್: ತಜ್ಞರ ಮಹತ್ವದ ಸಲಹೆ

ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು5 ದಿನ ಬೆಂಗಳೂರು ನಗರವನ್ನ ಸಂಪೂರ್ಣವಾಗಿ ಲಾಕ್‍ಡೌನ್: ತಜ್ಞರ ಮಹತ್ವದ ಸಲಹೆ

Spread the love

ಬೆಂಗಳೂರು: 15 ದಿನ ಬೆಂಗಳೂರು ನಗರವನ್ನ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವಂತೆ ಸರ್ಕಾರಕ್ಕೆ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ. ವೀಕೆಂಡ್ ಲಾಕ್‍ಡೌನ್ ಸೋಮವಾರ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ.

ಎರಡು ವಾರ ಲಾಕ್‍ಡೌನ್ ಮಾಡದಿದ್ರೆ ಕೊರೊನಾ ನಿಯಂತ್ರಣ ಅಸಾಧ್ಯ. ಕೊರೊನಾ ಕ್ಷಣ ಕ್ಷಣಕ್ಕೂ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೇವಲ ವೀಕೆಂಡ್ ಲಾಕ್ ಮಾಡಿ ಇನ್ನುಳಿದ ಫ್ರೀ ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಅವಶ್ಯಕವಿದ್ರೆ ಲಾಕ್‍ಡೌನ್ ಮಾಡಬಹುದು ಎಂದು ಪ್ರಧಾನಿಗಳು ಹೇಳಿದ್ದಾರೆ. ಸದ್ಯ ಬೆಂಗಳೂರಿಗೆ ಲಾಕ್‍ಡೌನ್ ಅತ್ಯವಶ್ಯಕವಾಗಿದೆ. ಸರ್ಕಾರ ತಡಮಾಡದೇ ವಾರಂತ್ಯದ ಲಾಕ್‍ಡೌನ್ ವಾರದ ದಿನಗಳಲ್ಲಿ ಮುಂದುವರಿಸಬೇಕೆಂದು ತಜ್ಞರ ತಂಡ ಒತ್ತಾಯಿಸಿದೆ.

ಲಾಕ್‍ಡೌನ್ ಮಾಡಿದ್ರೆ ಮುಂದಿನ ವಾರ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತೆ. ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋವರ ಸಂಖ್ಯೆ ಏರಿಕೆ ಆಗಲಿದೆ. ಇದರಿಂದ ಒತ್ತಡದಲ್ಲಿರುವ ಆಸ್ಪತ್ರೆಗಳ ಕೊಂಚ ಉಸಿರಾಡಬಹುದು. ದಿನನಿತ್ಯದ ಕಫ್ರ್ಯೂನಲ್ಲಿ ಚೈನ್ ಲಿಂಕ್ ಬ್ರೇಕ್ ಮಾಡೋದು ಸುಲಭ. ದಿನನಿತ್ಯದ ಸೋಂಕಿತ ಸಂಖ್ಯೆ ಕಡಿಮೆಯಾದರೆ ರೋಗಿಗಳು ಪರದಾಡೋದು ನಿಲ್ಲುತ್ತೆ. ಸರ್ಕಾರ ಕೂಡಲೇ ಎರಡು ವಾರ ಲಾಕ್ ನಿರ್ಧಾರ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು:
ಗಂಟೆಗೆ ಅಂದಾಜು 700 ಜನಕ್ಕೆ ಕೊರೊನಾ ಸೋಂಕು ತಗಲುತ್ತಿದೆ. ಮಾರ್ಚ್ ನಲ್ಲಿ 42 ಜನರಿಗೆ ಪ್ರತಿ ಗಂಟೆಗೊಮ್ಮೆ ಪಾಸಿಟಿವ್ ಬರುತ್ತಿತ್ತು. ಈಗ ಈ ಸಂಖ್ಯೆ ವೇಗವಾಗಿ ಸಾಗುರತ್ತಿದೆ. ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಕನಿಷ್ಠ 10 ಜನರು ಜನರು ಇರ್ತಾರೆ. ಈ ವೇಗ ಹೀಗೆ ಮುಂದುವರಿದ್ರೆ ಕೊರೊನಾ ಇಡೀ ಬೆಂಗಳೂರು ನಗರವನ್ನ ವ್ಯಾಪಿಸಿಕೊಳ್ಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಜಗದೀಶ್ ಶೆಟ್ಟರ್‌ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಬಾಲಚಂದ್ರ ಜಾರಕಿಹೊಳಿ

Spread the loveಬೆಳಗಾವಿ, : ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಮೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ