Breaking News
Home / Uncategorized / ಐತಿಹಾಸಿಕ ಯೆಲ್ಲೂರ್ ಕೋಟೆ ಅಥವಾ ಯಳ್ಳೂರುಗಡ ವಿಹಂಗಮ ನೋಟ

ಐತಿಹಾಸಿಕ ಯೆಲ್ಲೂರ್ ಕೋಟೆ ಅಥವಾ ಯಳ್ಳೂರುಗಡ ವಿಹಂಗಮ ನೋಟ

Spread the love

ನೀವು ಪ್ಯಾರಿಸ್‌ನಲ್ಲಿರುವಾಗ, ಬೃಹತ್ ಐಫೆಲ್ ಟವರ್ ನಗರದ ಯಾವುದೇ ಭಾಗದಿಂದ ಗೋಚರಿಸುತ್ತದೆ, ಮುಖ್ಯವಾಗಿ ಅದರ ಗಾತ್ರ ಮತ್ತು ಭವ್ಯವಾದ ನೋಟದಿಂದಾಗಿ. ಬೆಲಗವಿಯಲ್ಲಿರುವ ಯೆಲ್ಲೂರ್ ಗ್ಯಾಡ್ (ಸ್ಥಳೀಯ ಭಾಷೆಯಲ್ಲಿ ಸಣ್ಣ ಕೋಟೆಗಳನ್ನು ಕರೆಯಲಾಗುತ್ತದೆ), ಎತ್ತರದಲ್ಲದಿದ್ದರೂ, ನಗರದ ಎಲ್ಲಾ ಭಾಗಗಳಿಂದಲೂ ಇದೇ ರೀತಿ ಗೋಚರಿಸುತ್ತದೆ, ನೀವು ಅದನ್ನು ಪಶ್ಚಿಮ ತುದಿಯಿಂದ ಗೋವಾದ ಕಡೆಗೆ ಹೋಗುವಾಗ ಅಥವಾ ಪೂರ್ವ ತುದಿಯಲ್ಲಿ ನೋಡುತ್ತೀರಾ? ಹುಬ್ಬಳ್ಳಿ ಕಡೆಗೆ ನಿಮ್ಮ ದಾರಿಯಲ್ಲಿ. ಮತ್ತು ಅದು ಸಂಭವಿಸಿದಂತೆ, ನಗರದಲ್ಲಿ ಇನ್ನೂ ಅನೇಕ ಜನರು ಈ ಅನನ್ಯ ಕೋಟೆಗೆ ಹೋಗುತ್ತಿರಲಿಲ್ಲ.

ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯ, ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳ, ಕೃಷಿ ಯೋಗ್ಯ ಪಲವತ್ತಾದ ಭೂಮಿ, ಗುಡ್ಡದ ಮೇಲೆಂದು ಕೋಟೆ, ಕೋಟೆಯ ಮದ್ಯಭಾಗದಲ್ಲಿ ಶಿವನ ದೇವಾಲಯ, ಗುಡ್ಡವನ್ನೇರಿದರೆ ಸಾಕು ಮೈಗೆ ಮುದ ನೀಡುವ ಚಳಿಭರಿತ ಗಾಳಿ. ಆಹಾ… ಅದೆಷ್ಟು ಸುಂದರ. ಊಟಿಯ ವಾತವರನಕ್ಕೆ ತೊಡೆ ತಟ್ಟುವ ಸ್ಥಳವಿದು. ಈ ಸ್ಥಳ ಎಲ್ಲಿದೆ, ಇಲ್ಲಿಯ ವಿಶೇಷತೆ ಏನು, ಇದು ಅದೆಷ್ಟು ರಾಜವಂಶಸ್ಥರ ಕಥೆ ಹೇಳುತ್ತಿದೆ .

Rajhans Gad Yellur Fort at Belagavi - YouTube

ನಾವು ಹೇಳಲುಹೊರಟಿರುವ ಈ ಪ್ರವಾಸಿ ಸ್ಥಾನ ಇರುವುದು ಬೆಳಗಾವಿ ಜಿಲ್ಲೆಯ ಯಳ್ಳೂರು ಎಂಬ ಗ್ರಾಮದಲ್ಲಿ ಇದನ್ನ ಯಳ್ಳೂರುಘಡ, ರಾಜಹಂಸಘಡ ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಇದು ಬೆಳಗಾವಿ ನಗರದಿಂದ 15 ಕಿ.ಮಿ ದೂರದ ಎತ್ತರವಾದ ಪ್ರದೇಶವಾಗಿರುವುದರಿಂದ ನಾಲ್ಕು ದಿಕ್ಕಿನಿಂದಲೂ ಬಹೂದೂರದವರೆಗಿನ ಭೂಪ್ರದೇಶದ ಸೌಂದರ್ಯವನ್ನು ನಿಮ್ಮ ಕಣ್ಣಿನಲ್ಲಿ ಸೆರೆಹಿಡಿಯಬಹುದಾಗಿದೆ.  ನಾಲ್ಕು ಕಡೆಯಿಂದಲೂ ಬೆಳಗಾವಿ ನಗರದ ವಿಹಂಗಮ ನೋಟವನ್ನು ಉಣಬಡಿಸುವ ಈ ರಾಜಹಂಸಘಡ ಸಮುದ್ರ ಮಟ್ಟದಿಂದ ಸುಮಾರು 2,500 ಅಡಿಗಳಷ್ಟು ಎತ್ತರದಲ್ಲಿದೆ
ಈ ಕೋಟೆಯನ್ನು ರಟ್ಟಾ ರಾಜವಂಶವು ನಿರ್ಮಿಸಿದ್ದು ನಂತರ ಬಿಜಾಪುರದ ಪರ್ಷಿಯನ್ ಕುಲೀನರಾದ ಅಸಾದ್ ಖಾನ್ ಲಾರಿ ಅವರು ಪುನರ್ನಿರ್ಮಾಣ ಮಾಡಿದರು ಎಂದು ಹೆಳಲಾಗುತ್ತದೆ

ಈ ಯಳ್ಳೂರಘಡ ಕೋಟೆಯು ರಾಜರ ಆಡಳಿತದ ಸಂದರ್ಭದಲ್ಲಿ ವಾಚ್ ಟಾವರ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಎತ್ತರದ ಸ್ಥಳದಲ್ಲಿದ್ದ ಕಾರಣ ಬಹುದೂರದ ಪ್ರದೇಶದ ವಿಕ್ಷಣೆ ಮಾಡಲು ಸಾದ್ಯವಾಗುತ್ತಿತ್ತು ಇದರಿಂದ ಗೋವಾ ಮತ್ತು ಕಾರವಾರ್ ಪ್ರದೇಶಗಳಿಂದ ನುಸಳುವ  ಶತ್ರುಗಳನ್ನ ಗುರುತಿಸಲು ಮತ್ತು ದಾಳಿಯನ್ನು ತಡೆಯಲು ಸಹಾಯಕವಾಗಿತ್ತು. ಈ ಸುಂದರ ಕೋಟೆಯ ಮತ್ತೊಂದು ವೈಶಿಷ್ಟ್ಯತೆ ಎಂದರೆ ಮೂರು ಮೂರು ಯುದ್ದಗಳಿಗೆ ಎದೆಕೊಟ್ಟು ನಿಂತಿದೆ. ಮೊದಲನೆ ಯುದ್ದದಲ್ಲಿ ಸವನೂರ್ ನ ನವಾಬರು ಮತ್ತು ಪೇಶ್ವಗಳ ನಡುವೆ, ಎರಡನೆಯದಾಗಿ ಟಿಪ್ಪು ಸುಲ್ತಾನ್ ಮತ್ತು ಪೇಶ್ವೆ ಪಡೆಗಳ ನಡುವೆ ಮತ್ತು ಮೂರನೆಯದಾಗಿ ಭೀಮಗಡ್ ಕೋಟೆ ಮತ್ತು ರಾಜಹಂಸಘಡ ಅಧಿಕಾರಿಗಳ ನಡುವಿನ ಯುದ್ಧಗಳು ಇಲ್ಲಿಯೇ ನಡೆದಿದ್ದವು ಎಂದು ಇತಿಹಾಸಕಾರರು ಹೇಳುತ್ತಾರ

ಕೋಟೆಯನ್ನ ನಿರ್ಮಿಸಿರುವ ಬೆಟ್ಟವು ಸುಮಾರು ಐದು ಹಂತಗಳನ್ನು ಹೊಂದಿದೆ. ಆದ್ದರಿಂದ, ಬೆಟ್ಟದ ತುದಿಗೆ ಚಲಿಸುವಾಗ ಕೋಟೆಯ ನೋಟ ಬದಲಾಗುತ್ತದೆ. ಇಲ್ಲಿಗೆ ಕಾಲ್ನಡಿಗೆಯಲ್ಲಿ ಮತ್ತು ವಾಹನಗಳ ಮೂಲಕವೂ ಏರಬಹುದು ಬೆಟ್ಟದ ಸುತ್ತಲೂ ಕೃಷಿಯೋಗ್ಯ ಪಲವತ್ತಾದ ಮಣ್ಣಿದ್ದರೆ ಬೆಟ್ಟದ ಮೇಲಿನ ಮಣ್ಣು ಅಲ್ಯೂಮಿನಿಯಂನ ಪ್ರಮುಖ ಅದಿರು ಬಾಕ್ಸೈಟ್ನ ಕುರುಹುಗಳನ್ನು ಸೂಚಿಸುವ ಬಿಳಿ ಬಣ್ಣಿನಿಂದ ಕೂಡಿದೆ ಕೋಟೆಯ ಮುಖ್ಯ ಪ್ರವೇಶ ದ್ವಾರವು ಸುಂದರವಾಗಿದ್ದು ಒಳ ಪ್ರವೇಶಿಸಿದರೆ ನೀವು ಕೊಟೆ ಒಳ ಹೋಗಲು ಹಲವು ತಿರುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Beautiful View From Yellur Fort - Marvelous belgaum | Facebook

ಈ ಕೋಟೆಯ ಪ್ರಮುಖ ರಚನೆಗಳಲ್ಲಿ ಬಾವಿಯು ಒಂದು. ಇದನ್ನು ಕಬ್ಬಿಣದ ಗ್ರಿಲ್‌ನಿಂದ ಮುಚ್ಚಲಾಗಿದೆ. ಬಾವಿಯೊಳಗೆ ಸಾಗುವ ಮೆಟ್ಟಿಲುಗಳು ಗಟ್ಟಿಮುಟ್ಟಾಗಿರುತ್ತವೆ ಮತ್ತು ಅದರ ಒಳಗಿನ ಗೋಡೆಗಳು ನೀರನ್ನು ಸೆಳೆಯಲು ಸರಿಯಾದ ತಿರುಳಿನ ಸೌಲಭ್ಯವನ್ನು ಹೊಂದಿರುವ ಕಮಾನುಗಳನ್ನು ಹೊಂದಿವೆ. ಇಲ್ಲಿ ಕಂಡುಬರುವ ಮತ್ತೊಂದು ರಚನೆಯೆಂದರೆ ಸುರಂಗ ಮಾರ್ಗ. ಹೌದು ಪ್ರಾಚೀನ ಕಾಲದಲ್ಲಿ ಇಲ್ಲಿ ಒಂದು ಸುರಂಗ ಮಾರ್ಗವಿತ್ತು ಎಂದು ಹೆಳಲಾಗುತ್ತದೆ ಆ ಸುರಂಗ ಮಾರ್ಗವು ಬೆಳಗಾವಿ ಕೋಟೆಯಿಂದ ರಾಜಹಂಸಘಡದವರೆಗೂ ಇತ್ತು ಇದನ್ನು ರಹಸ್ಯ ಸಂಚಾರಕ್ಕೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈಗ ಪ್ರೇಕ್ಷಕರಿಗೆ ಅಲ್ಲಿ ಪ್ರವೇಶವಿಲ್ಲ ಬಾಗಿಲನ್ನು ಭದ್ರವಾಗಿ ಮು ಮಚ್ಚಲಾಗಿದೆ ಇನ್ನು ಇಲ್ಲಿ ಶಿವ ದೇವಾಲಯವಿದ್ದು. ಈ ದೇವಾಲಯವನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಇದನ್ನು ಸಿದ್ದೇಶ್ವರ ದೇವಾಲಯವೆಂದಲೂ ಕರೆಯುತ್ತಾರೆ. ಪ್ರತಿ ಸೋಮವಾರ ಭಕ್ತರು ಇಲ್ಲಿಗೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ.

ಕೋಟೆಯು ಎಲ್ಲಾ ಕಡೆಗಳಲ್ಲಿ ಬಲವಾದ ಗೋಡೆಗಳಿಂದ ಆವೃತವಾಗಿದ್ದು ಅಲ್ಲಲ್ಲಿ ನೀವು ಬೈನಾಕ್ಯುಲರ್ ವಿಂಡೋವನ್ನು ನೋಡಬಹುದು, ಅದರ ಮೂಲಕ ಒಬ್ಬ ಸಿಬ್ಬಂದಿ ಒಂದೇ ಸಮಯದಲ್ಲಿ ವಿರುದ್ಧ ತುದಿಗಳನ್ನು ವೀಕ್ಷಿಸಬಹುದು. ಕುತೂಹಲಕಾರಿಯಾಗಿ, ಗೋಡೆಗಳು ಸಣ್ಣ ನಿರ್ಗಮನ ಮಾರ್ಗಗಳನ್ನು ಹೊಂದಿವೆ ನೋಡಲು ಸಣ್ಣ ಕೋಟೆಯಂತಿದ್ದರೂ ತನ್ನ ಸೌಂದರ್ಯದಿಂದ ನೋಡುಗರನ್ನು ತನ್ನತ್ತ ಸೆಳಗಯುವ ಈ ಕೋಟೆ ಎತ್ತರದ ಪ್ರದೇಶದಲ್ಲಿರುವುದರಿಂದ ತಣ್ಣನೆಯ ಗಾಳಿ ಮೈಕೊರೆಯುತ್ತದೆ

 

ಈ ಯೆಳ್ಳೂರು ಕೋಟೆಯಂತಹ ಸಣ್ಣ ಕೋಟೆಗಳು ಯುದ್ಧಗಳಲ್ಲಿ ಮತ್ತು ಶೌರ್ಯ ಪ್ರದರ್ಶನಗಳಲ್ಲಿ ಉದಾಹರಣೆಯಾಗಿ ಹೇಳಲು ಭವ್ಯವಾದ ಕಥೆಗಳನ್ನು ಹೊಂದಿಲ್ಲವಾದರೂ ದೊಡ್ಡ ಸಾಮ್ರಾಜ್ಯಗಳನ್ನು ಕಾಯಲು ವಾಚ್ ಟಾವರ್ ಅಂತೆ ಕಾರ್ಯನಿರ್ವಹಿಸಿ ತಮ್ಮದೇ ಆದ ಇತಿಹಾಸವನ್ನು ಹೇಳುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ

ದಿನ ಕಥೆಗಳನ್ನು ಹೇಳುತ್ತದೆ.


Spread the love

About Laxminews 24x7

Check Also

ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿ

Spread the love: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಾಮಿ, ಸುದ್ದಿಗೋಷ್ಠಿ ನಡೆಸಿ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಲವು ಆರೋಪಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ