Breaking News
Home / ರಾಜ್ಯ / ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು.

ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು.

Spread the love

ಬೆಂಗಳೂರು:  ಸಚಿವ, ಎರಡನೇ ವರ್ಷದ ಜಾತ್ರಾ ಸಮಿತಿ ಅಧ್ಯಕ್ಷ ಬಿ.ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ   ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ಕೃಪ ಅತಿಥಿಗೃಹದಲ್ಲಿ ನಡೆಯಿತು.

ಸಚಿವರು, ಸಂಸದರು ಹಾಗೂ ಶಾಸಕರು ಮತ್ತು ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಮಹಿಳೆಯರು, ಹಾಗೂ ಯುವಕರ ಅಭಿಲಾಷೆಯಂತೆ  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸವಾ೯ನುಮತದಿಂದ  ಮೂರನೇ ವಷ೯ದ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಜತೆಗೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಿದರು.

ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಸಭೆಯ ಸಾನಿಧ್ಯ ವಹಿಸಿದ್ದರು. ಸಭೆಯ ಬಳಿಕ ಶ್ರಿಗಳು ಮಾತನಾಡಿ, ಜಾತಿಗಾಗಿ-ಜಾಗೃತಿ, ಜಾಗೃತಿಗಾಗಿ-ಜಾತ್ರೆ,  ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಅಸಂಘಟಿತ  ಸಮುದಾಯವನ್ನ ಒಂದೇ ವೇದಿಕೆಗೆ ತಂದು ಪಕ್ಷಾತೀತವಾಗಿ ಸಂಘಟಿತರಾಗಬೇಕು. ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನ ಸರ್ಕಾರಕ್ಕೆ ಮನನ ಮಾಡಿಕೊಡುವ ಒಂದು ಪ್ರಯತ್ನವಾಗಬೇಕು ಎಂದರು.

ಸಂಸದ ರಾಜಾ ಅಮರೇಶನಾಯಕ, ಶಾಸಕ ಸೋಮಲಿಂಗಪ್ಪನವರು, ನಾಗೇಂದ್ರರವರು, ಟಿ. ರಘುಮೂತಿ೯ರವರು, ರಾಜಾ ವೆಂಕಟಪ್ಪ ನಾಯಕ, ಬಸವನಗೌಡ ದದ್ದಲ್ , ಜೆ.ಎನ್ ಗಣೇಶ್ , ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ , ಗಂಗಾಧರ್ ನಾಯಕ ಇದ್ದರು.


Spread the love

About Laxminews 24x7

Check Also

ಚಿಕ್ಕೋಡಿ: ಹಾವು ಕಚ್ಚಿ ಬಾಲಕಿ ಸಾವು

Spread the love ಚಿಕ್ಕೋಡಿ: ತಾಲ್ಲೂಕಿನ ಕೇರೂರವಾಡಿಯಲ್ಲಿ ಶುಕ್ರವಾರ ರಾತ್ರಿ ಹಾವು ಕಚ್ಚಿ 4 ವರ್ಷದ ಬಾಲಕಿ ಶಿವಾನಿ ತುಳಸಿಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ