Breaking News
Home / ಜಿಲ್ಲೆ / ಬೆಳಗಾವಿ / 10 ತಿಂಗಳಲ್ಲಿ ಒಂದು ದಶಕದಲ್ಲಿ ಆದಷ್ಟು ಡ್ರಗ್ ವಶ ಆಗಿದೆ:

10 ತಿಂಗಳಲ್ಲಿ ಒಂದು ದಶಕದಲ್ಲಿ ಆದಷ್ಟು ಡ್ರಗ್ ವಶ ಆಗಿದೆ:

Spread the love

ಬಸವರಾಜ್ ಬೊಮ್ಮಾಯಿ ಹೇಳಿದ್ದು,ಕರ್ನಾಟಕ ಬಂದ್ ವಿಚಾರ.
ನಿರೀಕ್ಷೆಯಂತೆ ಬಂದ್ ಕರೆಗೆ ಜನ ಸಹಕಾರ ಕೊಟ್ಟಿಲ್ಲ. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಯಲ್ಲಿ ಯಥಾಸ್ಥಿತಿ ಇದೆ.
ಜನಜೀವನ, ಬಸ್ ಸಂಚಾರ ಎಂದಿನಂತೆ‌ ಇದೆ. ಒತ್ತಾಯ ಪೂರ್ವಕ ಬಂದ್ ಪ್ರಕರಣಗಳಲ್ಲಿ ಅನೇಕ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದ ಜನರಿಗೆ ಧನ್ಯವಾನ ಅರ್ಪಣೆ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಪೊಲೀಸ, ಕೆಎಸ್ಆರ್ ಟಿ ಸಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವೆ, ಹೈಕೋರ್ಟ್ ಸಹ ಬಂದ್ ಮಾಡದಂತೆ ಸೂಚನೆ ನೀಡಿದೆ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಲು ರಾಜ್ಯದ ಜನತೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಸ್ ಮೇಲೆ ಕಲ್ಲು ತೂರಾಟ. ಬೈಕ್ ಮೇಲೆ ಬಂದು ಕೃತ್ಯ, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ನೈಟ್ ಕರ್ಪ್ಯೂ ಬಗ್ಗೆ ಆರೋಗ್ಯ ಸಚಿವರು, ಸಿಎಂ ಜತೆಗೆ ಚರ್ಚೆ ಮಾಡುವೆ. ಹೊಸ ವರ್ಷದ ಆಚರಣೆ ನಿಯಂತ್ರಿತ ಆಗಬೇಕು ಎನ್ನುವ ಕ್ರಮ. ನೈಟ್ ಕರ್ಪ್ಯೂ ಬಗ್ಗೆ ಇನ್ನೂ ತೀರ್ಮಾನ ಆಗಲಿಲ್ಲ. ಸಾರ್ವಜನಿಕ ಆಚರಣೆ ನಿಯಂತ್ರಿತ ಆಗಬೇಕು. ಕೊರೊನಾ ಎರಡನೇ ಹಂತದ ಭಿತಿ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದರು.

ಗೋ ಹತ್ಯೆ ನಿಷೇಧ ವಿಚಾರ‌.
2012ರಲ್ಲಿ ರಾಜ್ಯಪಾಲರು ಇದನ್ನು ವಿರೋಧ ಮಾಡಿದ್ರು. ಗೋ ಹತ್ಯೆ ಜಾರಿ ಅತ್ಯಂತ ಅವಶ್ಯ.
ಇನ್ನಷ್ಟು ಬೀಗಿ ಕಾನೂನು ತರಲು ಚಿಂತನೆ ನಡೆಸಿದ್ದೇವೆ
ಇದೇ ಅಧಿವೇಶನದಲ್ಲಿ ಜಾರಿ ಮಾಡಲು ತೀರ್ಮಾನ ಮಾಡುತ್ತೇವೆ ಲವ್ ಜಿಹಾದ್ ನಿಂದ ಅನೇಕ ಶೋಷಣೆ ಪ್ರಕರಣ ಗಳು ಬೆಳಕಿಗೆ ಬಂದಿವೆ. ಯುಪಿಯಲ್ಲಿ ಲವ್ ಜಿಹಾದ್ ತಡೆ ಮಾಡಿದೆ. ಅಲ್ಲಿಂದ ಮಾಹಿತಿ ತರಿಸಿ ಅಭ್ಯಾಸ ಮಾಡುತ್ತೇವೆ ಆದಷ್ಟು ಬೇಗ ರಾಜ್ಯದ ಲವ್ ಜಿಹಾದ್ ವಿಚಾರದಲ್ಲಿ ಬೀಗಿ ಕಾನೂನು ಜಾರಿಗೆ ತರುತ್ತೇವೆ. ರಾಜ್ಯದಲ್ಲಿ ಡ್ರಗ್ ಪ್ರಕರಣ.
ಎಲ್ಲಾ ಪ್ರಕರಣ ಚಾರ್ಚ್ ಶೀಟ್ ಹಂತದಲ್ಲಿ ಇವೆ.
10 ತಿಂಗಳಲ್ಲಿ ಒಂದು ದಶಕದಲ್ಲಿ ಆದಷ್ಟು ಡ್ರಗ್ ವಶ ಆಗಿದೆ. ಡ್ರಗ್ ವಿಚಾರದಲ್ಲಿ ನಮ್ಮ ಸಮರ ಮುಂದುವರೆಯಲಿದೆ. ಕಾಲೇಜು ಮಟ್ಟದಲ್ಲಿ ಡ್ರಗ್ ವಿರುದ್ಧ ಅಭಿಯಾನ ನಡೆಸುತ್ತೇವೆ.ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ