Breaking News
Home / Uncategorized / ರಕ್ತದಾನದಿಂದ ಆರೋಗ್ಯ ವೃದ್ಧಿ’

ರಕ್ತದಾನದಿಂದ ಆರೋಗ್ಯ ವೃದ್ಧಿ’

Spread the love

ಪ್ಪಿನಬೆಟಗೇರಿ: ನಿಯಮಿತ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಧಾರವಾಡ ರಕ್ತನಿಧಿ ಕೇಂದ್ರದ ಆರೋಗ್ಯಾಧಿಕಾರಿ ಎಂ.ಎಂ.ಹಿರೇಮಠ ಹೇಳಿದರು.

ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಶುಕ್ರವಾರ ಬಸವ ಜಯಂತಿ ಹಾಗೂ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರ 50ನೇ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು

ಸರ್ಕಾರ ಪ್ರಾಥಮಿಕ ಹಂತದ ಶಿಕ್ಷಣದ ಪಠ್ಯ ಪುಸ್ತಕದಲ್ಲಿ ರಕ್ತದಾನದ ಕುರಿತ ವಿಷಯ ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದರು.

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿದರು. ಖೇಡಗಿಯ ಪ್ರಭುದೇವರು, ರೋಹಿತ ಚವ್ಹಾಣ, ದತ್ತಾತ್ರೇಯ ವೈಕುಂಠೆ, ಮಹಾಂತೇಶ ಬೊಬ್ಬಿ, ಗಂಗಪ್ಪ ತಳವಾರ, ಮಡಿವಾಳಪ್ಪ ತಳವಾರ, ರಮೇಶ ಮಡಿವಾಳರ, ಅವಿನಾಶ ಮಸೂತಿ, ವರ್ಧಮಾನ ಅಷ್ಟಗಿ, ಸುಧಾಕರ ದೊಡಮನಿ, ಮಲ್ಲಿಕಾರ್ಜುನ ಯಮೋಜಿ, ಮಾಂತೇಶ ಚಿಕ್ಕಮಠ, ಮಂಜುನಾಥ ಬೆಳವಡಿ ಇದ್ದರು.


Spread the love

About Laxminews 24x7

Check Also

ಟ್ಯಾಂಕ್ ಮೇಲೆ ಯುವತಿ ಕೂರಿಸಿಕೊಂಡು ಬೈಕ್ ಚಾಲನೆ ಮಾಡಿದ್ದ ಪ್ರೇಮಿ ಅರೆಸ್ಟ್‌!

Spread the love ಬೆಂಗಳೂರು: ಇಂಧನ ಟ್ಯಾಂಕ್ ಮೇಲೆ ಕುಳಿತಿದ್ದ ಮಹಿಳೆಯೊಂದಿಗೆ ಬೈಕ್ ಸವಾರಿ ಮಾಡುತ್ತಿರುವ ಯುವಕನನ್ನು ಹೆಬ್ಬಾಳ ಸಂಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ