Breaking News
Home / ರಾಜಕೀಯ / ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the love

ಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ.

ಇಲ್ಲಿನ ಕೆಎಂಎಫ್ ಕಚೇರಿಯ ಪಕ್ಕದಲ್ಲಿ ಕಳೆದ 10 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಅವರು ನಗರಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ಈ ಮಹಿಳಾ ಶೌಚಾಲಯ ನಿರ್ಮಿಸಲಾಗಿತ್ತು.ಇದರ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪೌರ ಕಾರ್ಮಿಕ ಮಹಿಳೆಯೊಬ್ಬರಿಗೆ ವಹಿಸಿಕೊಟ್ಟು, ಪಕ್ಕದಲ್ಲಿಯೇ ವಾಸಿಸಲು ಅವಕಾಶ ಕಲ್ಪಿಸಲಾಗಿದೆ.

 

ಆದರೆ, ಎರಡು ವರ್ಷಗಳಿಂದ ಶೌಚಾಲಯದಲ್ಲಿ ವಿದ್ಯುತ್‌ (ಅರ್ಥಿಂಗ್) ಸಮಸ್ಯೆ ಕಾಡುತ್ತಿದೆ. ಶೌಚಕ್ಕೆ ತೆರಳಿದ್ದ ಮಹಿಳೆಯರಿಗೆ ಮತ್ತು ಇದರ ನಿರ್ವಹಣೆ ಮಾಡುವ ಪೌರ ಕಾರ್ಮಿಕ ಸಿಬ್ಬಂದಿಗೂ ಆಗಾಗ್ಗೆ ವಿದ್ಯುತ್ ಹೊಡೆಯುತ್ತಿರುವದರಿಂದ ಶೌಚಾಲಯ ಬಂದ್ ಮಾಡುವುದು, ಕೆಲ ದಿನಗಳ ನಂತರ ಓಪನ್ ಮಾಡುವುದು ಸರ್ವೆಸಾಮಾನ್ಯವಾಗಿದೆ.

 

ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿ, ರಾಮಕಿಶೋರ ಕಾಲೊನಿ, ವಾರ್ಡ್ ನಂ.20 ಹಾಗೂ ವಾರ್ಡ್ ನಂ.23ರ ಮಹಿಬೂಬಿಯಾ ಕಾಲೊನಿಯ ಮಹಿಳೆಯರಿಗೆ ಶೌಚಕ್ಕೆ ಹೋಗುವುದಕ್ಕೆ ತೀವ್ರ ತೊಂದರೆಯಾಗಿದೆ. ಸತ್ಯಗಾರ್ಡನ್, ಕೊಡದ ಫ್ಯಾಕ್ಟರಿ, ಪಿವಿಆರ್ ಕಾಂಪ್ಲೆಕ್ಸ್ ಬಳಿ ಬೆಳೆದು ನಿಂತಿದ್ದ ಜಾಲಿಗಿಡ, ಮುಳ್ಳುಕಂಟಿಗಳ ಪೊದೆಗಳತ್ತ ಮಹಿಳೆಯರು ಬಹಿರ್ದೆಸೆಗೆ ತೆರಳುತ್ತಿದ್ದರು. ಆದರೆ ಜಾಲಿಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ನಿವೇಶನಗಳಿಗೆ ವಿನ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಬಹಿರ್ದೆಸೆಗೆ ಎತ್ತ ಹೋಗಬೇಕೆಂಬುದೇ ಮಹಿಳೆಯರಿಗೆ ದೊಡ್ಡ ಚಿಂತೆಯಾಗಿದೆ.

ಕೂಡಲೇ ನಗರಸಭೆ ಪೌರಾಯುಕ್ತರು ಎಚ್ಚೆತ್ತುಕೊಂಡು ವಿದ್ಯುತ್‌ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ, ಸಮರ್ಪಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಿ, ಸುಣ್ಣ-ಬಣ್ಣ ಬಳಿದು ಶೌಚಾಲಯ ಆರಂಭ ಮಾಡಬೇಕು. ಜೊತೆಗೆ ಶೌಚಾಲಯದ ಹಿಂದೆ ಸುಣ್ಣದ ಹಳ್ಳವಿದ್ದು, ಅದರಲ್ಲಿ ಮೂಲಮೂತ್ರ, ಕಸದ ರಾಶಿ, ಚರಂಡಿ ನೀರು ಸಂಗ್ರಹವಾಗಿ ದುರ್ನಾತ ಪ್ರದೇಶವಾಗಿ ಮಾರ್ಪಟ್ಟಿದೆ. ಬೃಹತ್ಕಾರದಲ್ಲಿ ಜಾಲಿಗಿಡಗಳು ಬೆಳೆದು ನಿಂತಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಸ್ವಚ್ವಗೊಳಿಸಿ, ಅರ್ಧಕ್ಕೆ ಮಾಡಿರುವ ಚರಂಡಿಯನ್ನು ಪೂರ್ಣಗೊಳಿಸಬೇಕು ಎಂದು ನಿವಾಸಿಗಳಾದ ಚೇತನ್, ದುರುಗಪ್ಪ, ಯಮನೂರ, ಇಸ್ಮಾಯಿಲ್, ಲಕ್ಷ್ಮಿ, ರೇಣುಕಮ್ಮ, ಶಾಹೀನಾ, ಫರ್ವಿನ್ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ