Breaking News
Home / ಹುಬ್ಬಳ್ಳಿ / ಅಳಿಯ ಅನಾಥ.. ಲಕ್ಷ್ಮೀ ಹೆಬ್ಬಾಳ್ಕರ್‌ ವರಸೆ.. ಟಿಕೆಟ್‌ಗೆ ಶಕ್ತಿ ಪ್ರದೇಶ

ಅಳಿಯ ಅನಾಥ.. ಲಕ್ಷ್ಮೀ ಹೆಬ್ಬಾಳ್ಕರ್‌ ವರಸೆ.. ಟಿಕೆಟ್‌ಗೆ ಶಕ್ತಿ ಪ್ರದೇಶ

Spread the love

ಹುಬ್ಬಳ್ಳಿ(Hubli) ಬಳಿಯ ಗಿರಣಿ ಚಾಳ್ ಮೈದಾನದಲ್ಲಿ ರಜತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಜತ ಸಂಭ್ರಮದ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅಳಿಯ ರಜತ್(Rajath) ಉಳ್ಳಾಗಡ್ಡಿ ಮಠ ಶಕ್ತಿ ಪ್ರದರ್ಶನ ಮಾಡಿದ್ರು. ಹತ್ತಾರು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ರು.

ಮಹಿಳಾ(Women) ಮತ್ತು ಮಕ್ಕಳ(Child) ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ರಜತ್ ಉಳ್ಳಾಗಡ್ಡಿ ಮಠ ನನ್ನ ಅಳಿಯ ಅನ್ನೋ ಕಾರಣಕ್ಕೆ ರಾಜಕಾರಣದಲ್ಲಿ ಬಂದಿಲ್ಲ. ನನ್ನ ಮಗಳನ್ನು ಮದುವೆ ಆಗುವುದಕ್ಕೆ ಮುಂಚೆಯೇ ಅವರ ತಂದೆ ರಾಜಕೀಯದಲ್ಲಿದ್ರು ಎಂದಿದ್ದಾರೆ.

ರಜತ್‌ ಅವರು ತಂದೆ ಸಾವಿನ ನಂತರ ಸಮಾಜ ಸೇವೆ ಮಾಡಲು ಮುಂದಾಗಿದ್ದಾನೆ. ರಜತ್‌ಗೆ ಎಲ್ಲಾ ಸಮಾಜದ ಗೆಳೆತನ ಇದೆ, ಇದನ್ನೆಲ್ಲಾ ನೋಡಿದ್ರೆ ನನ್ನ ದಿನಗಳು ನೆನಪಾಗುತ್ತವೆ. ಎಲ್ಲರ ಆಶೀರ್ವಾದ ಇದ್ರೆ ಮಾತ್ರ ಆತ ಬೆಳೆಯೋಕೆ ಸಾಧ್ಯ ಎಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌. ಇನ್ನು ಕಳೆದ ಪಾಲಿಕೆ ಚುನಾವಣೆಯಲ್ಲಿ ವಿದ್ಯಾನಗರದ ಎಲ್ಲಾ ಜನರನ್ನು ಒಟ್ಟುಗೂಡಿಸಿ ಚುನಾವಣೆ ಮಾಡಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌(Jagadesh Shetter) ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿದ್ರಿಂದ ರಜತ್‌ ಟಿಕೆಟ್ ತ್ಯಾಗ ಮಾಡಿದ್ದನು. ಈಗ ಲೋಕಸಭಾ ಚುನಾವಣೆ ಗೆಲ್ಲುವ ದೊಡ್ಡ ಕನಸು ಕಟ್ಟಿಕೊಂಡಿದ್ದಾನೆ ಎಂದಿದ್ದಾರೆ.

ರಜತ್ ತಂದೆಯನ್ನು ಕಳೆದುಕೊಂಡ ಅನಾಥ ಮಗ. ರಜತ್ ಸಣ್ಣ ವಯಸ್ಸಲ್ಲಿ ಜನರ ಅಪಾರ ಪ್ರೀತಿ ಗಳಿಸಿದ್ದಾನೆ. ಸ್ವಾಮೀಜಿಗಳು, ಜನರ ಪ್ರೀತಿ ನೋಡಿ ನಾನು ಭಾವುಕಳಾಗಿದ್ದೇನೆ ಎಂದಿರುವ ಲಕ್ಷ್ಮೀ ಹೆಬ್ಬಾಳ್ಕರ್, ಅಳಿಯ ರಜತ್ ಬಗ್ಗೆ ಹೇಳುತ್ತಾ ಭಾವುಕರಾಗಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿ ಇರುತ್ತೇವೆ ಅಂತಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಹುಬ್ಬಳ್ಳಿ ರಜತ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್, ನವೀನ್ ಶಂಕರ್ ಕೂಡ ಭಾಗಿಯಾಗಿದ್ದರು. ಹುಬ್ಬಳ್ಳಿಗೆ ಯಾವಾಗಲೂ ಬಂದಾಗ ಖುಷಿ ಆಗತ್ತೆ ಎಂದಿದ್ದಾರೆ ಡಾಲಿ ಧನಂಜಯ್‌. ಕೂಡಲಸಂಗಮನ ವಚನ ಹೇಳಿ ಒಳ್ಳೆದಾಗಲಿ ಎಂದು ನಟ ಡಾಲಿ ಶುಭಹಾರೈಸಿದ್ದಾರೆ.. ಇದೇ ವೇಳೆ ಗಂಗಾವತಿ ಪ್ರಾಣೇಶ್ ಮತ್ತಿತರರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜನರ ಆಕರ್ಷಣೆ ಕೇಂದ್ರವಾಗಿತ್ತು. ಅಳಿಯನನ್ನು ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಸಲು ಲಕ್ಷ್ಮೀ ಹೆಬ್ಬಾಳ್ಕರ್‌ ವೇದಿಕೆ ರೆಡಿ ಮಾಡಿದ್ದಾರೆ.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ