Breaking News
Home / ರಾಜಕೀಯ / ಅಂತೂ ಸರಕಾರದಿಂದ ಹೊರ ಬಿದ್ದ ಬಡ್ಡಿ ಮನ್ನಾ ಆದೇಶ

ಅಂತೂ ಸರಕಾರದಿಂದ ಹೊರ ಬಿದ್ದ ಬಡ್ಡಿ ಮನ್ನಾ ಆದೇಶ

Spread the love

ಲಬುರಗಿ: ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲನ್ನು ಸಂಪೂರ್ಣವಾಗಿ 2024ರ ಫೆಬ್ರವರಿ 29 ರೊಳಗೆ ತುಂಬಿದರೆ ಬಡ್ಡಿ ಮನ್ನಾ ಕುರಿತಾಗಿ ಶನಿವಾರ (ಜ.20) ಸಹಕಾರಿ ಇಲಾಖೆ ಅಧಿಸೂಚನೆ.

ಬೆಳಗಾವಿಯಲ್ಲಿ ನಡೆದ ಚಳಗಾಲ ಅಧಿವೇಶನದಲ್ಲಿ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾದ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಮುಂಗಾರು ಹಾಗೂ ಹಿಂಗಾರು ಎರಡೂ ಮಳೆಯನ್ನೇ ಕೈ ಕೊಟ್ಟ ಪರಿಣಾಮ ರೈತ ಸಂಕಷ್ಟದಲ್ಲಿದ್ದಾನೆ.

ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿನ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಅದರ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.

ಆದರೆ ಬಡ್ಡಿ ಮನ್ನಾದ ಘೋಷಣೆ ಮಾಡಿ ತಿಂಗಳಾದರೂ ಆದೇಶ ಮಾತ್ರ ಹೊರ ಬೀಳದೇ ಹಾಗೆ ಮುನ್ನೆಡೆಸಿಕೊಂಡು ಬರಲಾಗಿತ್ತು.‌ ಆದರೆ ಬಡ್ಡಿ ಮನ್ನಾ ಕುರಿತಾಗಿ ಸರ್ಕಾರದಿಂದ ಇನ್ನೂ ಹೊರ ಬೀಳದ ಆದೇಶ ಎಂಬುದಾಗಿ ಕಳೆದ ಜ. 13 ರಂದು ಉದಯವಾಣಿ ಯಲ್ಲಿ ವಿಶೇಷ ವರದಿ ಮಾಡಲಾಗಿತ್ತು.

ವರದಿ ನಂತರ ಎಚ್ಚೆತ್ತುಕೊಂಡ‌ ಸರ್ಕಾರ ಶನಿವಾರ ಜ.‌20 ರಂದು ಆದೇಶ ಹೊರಡಿಸಿದೆ.‌ ಸಹಕಾರಿ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಎ.ಸಿ. ದಿವಾಕರ ಅಧಿಸೂಚನೆ ಹೊರಡಿಸಿದ್ದಾರೆ.‌

ಬರಗಾಲ ಹಿನ್ನೆಲೆಯಲ್ಲಿ ಜತೆಗೆ ತಮ್ಮ ಒತ್ತಾಯದ ಮೇರೆಗೆ ಸರ್ಕಾರ ಬಡ್ಡಿ ಮಾಡಿದ್ದು, ರೈತರು ಸಕಾಲಕ್ಕೆ ಸಾಲದ ಅಸಲನ್ನು ಸಂಪೂರ್ಣವಾಗಿ ತುಂಬಿ ಬಡ್ಡಿ ಮನ್ನಾದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ನ ಅಧ್ಯಕ್ಷ ಸೋಮಶೇಖರ ಗೋನಾಯಕ ಕೋರಿದ್ದಾರೆ.‌


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ