Home / ರಾಜಕೀಯ / ಬಡ್ಡಿದರಗಳು ಹೆಚ್ಚಾಗುತ್ತವೆಯೋ ಅಥವಾ ಕಡಿಮೆಯಾಗುತ್ತವೆಯೋ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದೆ.

ಬಡ್ಡಿದರಗಳು ಹೆಚ್ಚಾಗುತ್ತವೆಯೋ ಅಥವಾ ಕಡಿಮೆಯಾಗುತ್ತವೆಯೋ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದೆ.

Spread the love

ನವದೆಹಲಿ: ಬಡ್ಡಿದರಗಳು ಹೆಚ್ಚಾಗುತ್ತವೆಯೋ ಅಥವಾ ಕಡಿಮೆಯಾಗುತ್ತವೆಯೋ ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಲಭಿಸಿದೆ.

ಮೂರು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್​ನಿಂದ(ಆರ್‌ಬಿಐ) ನಡೆಯುತ್ತಿರುವ ಸುದೀರ್ಘ ಹಣಕಾಸು ನೀತಿ ಸಮಿತಿ ಸಭೆ ಇಂದು (ಶುಕ್ರವಾರ) ಕೊನೆಗೊಂಡಿದೆ. ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಣಕಾಸು ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ. ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದಕೊಳ್ಳಲಾಗಿದೆ. ರೆಪೊ ದರ ಶೇ 6.5 ಇದೆ. ಜಿಡಿಪಿ ಬೆಳವಣಿಗೆ ಶೇ 7ರಷ್ಟು ಆಗಲಿದೆ ಅಂದಾಜಿಸಿದ್ದಾರೆ. ಹಣದುಬ್ಬರ ಶೇ 5.4ರಷ್ಟಿದೆ ಎಂದು ಆರ್​​ಬಿಐ ಹೇಳಿದೆ.

ಕಳೆದ ನಾಲ್ಕು ನೀತಿಗಳಿಂದ ಆರ್‌ಬಿಐ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಅಂಕಿ – ಅಂಶಗಳು ನಿರೀಕ್ಷೆಗಿಂತ ಉತ್ತಮವಾಗಿವೆ. ಈ ಹಿಂದೆ ಹಣದುಬ್ಬರ ದರದಲ್ಲಿ ಮೃದುತ್ವ ಕಾಯ್ದು ಕೊಳ್ಳಲಾಗಿದೆ. ಸದ್ಯ ಹಣದುಬ್ಬರವನ್ನು ಶೇ 5.4ಕ್ಕೆ ಹೆಚ್ಚಿಸಲಾಗಿದೆ. ಈ ಬಾರಿಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರೆಪೊ ದರವನ್ನು ಕೊನೆಯದಾಗಿ ಇದೇ ವರ್ಷದ ಫೆಬ್ರವರಿಯಲ್ಲಿ ಹೆಚ್ಚಳ ಮಾಡಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಕೊನೆಯದಾಗಿ ರೆಪೋ ದರವನ್ನು ಶೇಕಡಾ 6.5ಕ್ಕೆ ಏರಿಕೆ ಮಾಡಿತ್ತು. ಆಹಾರ ಪದಾರ್ಥಗಳ ಕಡಿಮೆ ಬೆಲೆಯಿಂದಾಗಿ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.87 ಕ್ಕೆ ಇಳಿಕೆ ಕಂಡಿತ್ತು. ಅದರ ಅಕ್ಟೋಬರ್ ವಿತ್ತೀಯ ನೀತಿ ಪರಾಮರ್ಶೆಯಲ್ಲಿ, ಎಂಪಿಸಿ 2023-24ರಲ್ಲಿ ಚಿಲ್ಲರೆ ಹಣದುಬ್ಬರ ಶೇ 5.4ಕ್ಕೆ ಏರಿಕೆ ಕಂಡಿದೆ ಎಂದು ಹೇಳಿದೆ. ಚಿಲ್ಲರೆ ಹಣದುಬ್ಬರವನ್ನು ಶೇಕಡಾ ಎರಡರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4ರಲ್ಲಿ ಇರಿಸಲು ಸರಕಾರವು ಆರ್​ಬಿಐಗೆ ಜವಾಬ್ದಾರಿ ನೀಡಿದೆ.


Spread the love

About Laxminews 24x7

Check Also

ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Spread the love ಬೆಂಗಳೂರು: ಬ್ಯಾಂಕ್‌ ಉದ್ಯೋಗಕ್ಕಾಗಿ(Bank Job) ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಭಾರತದ ಪ್ರಮುಖ ಖಾಸಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ