Breaking News
Home / ರಾಜಕೀಯ / ಪತ್ನಿ ನವಾಜ್​ರಿಂದ ಬೇರ್ಪಟ್ಟ ರೇಮಂಡ್ಸ್​ ಅಧ್ಯಕ್ಷ ಗೌತಮ್ ಸಿಂಘಾನಿಯಾ

ಪತ್ನಿ ನವಾಜ್​ರಿಂದ ಬೇರ್ಪಟ್ಟ ರೇಮಂಡ್ಸ್​ ಅಧ್ಯಕ್ಷ ಗೌತಮ್ ಸಿಂಘಾನಿಯಾ

Spread the love

ನವದೆಹಲಿ: ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಸಿಂಘಾನಿಯಾ ಸೋಮವಾರ ಬೇರ್ಪಡುವುದಾಗಿ ಘೋಷಿಸಿದ್ದಾರೆ.

 

“ಈ ದೀಪಾವಳಿ ಹಿಂದಿನಂತೆ ಇರುವುದಿಲ್ಲ. ದಂಪತಿಗಳಾಗಿ ಒಟ್ಟಿಗೆ 32 ವರ್ಷ ಕಳೆದಿದ್ದೇವೆ, ಪೋಷಕರಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ ಮತ್ತು ಯಾವಾಗಲೂ ಪರಸ್ಪರ ಶಕ್ತಿಯ ಮೂಲವಾಗಿದ್ದೆವು… ನಮ್ಮ ಜೀವನದಲ್ಲಿ ಮತ್ತೆರಡು ಸುಂದರ ಜೀವಗಳು ಸೇರ್ಪಡೆಯಾಗಿದ್ದರಿಂದ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಪ್ರಯಾಣಿಸಿದ್ದೇವೆ” ಎಂದು ಗೌತಮ್ ಸಿಂಘಾನಿಯಾ ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ.

 

  •  

 

ತಾವಿಬ್ಬರೂ ಇನ್ನು ಮುಂದೆ ಬೇರ್ಪಡುವುದಾಗಿ ತಿಳಿಸಿದ ಸಿಂಘಾನಿಯಾ, ತಮ್ಮ ಹೆಣ್ಣುಮಕ್ಕಳಾದ ನಿಹಾರಿಕಾ ಮತ್ತು ನಿಸಾ ಅವರ ಉತ್ತಮ ಭವಿಷ್ಯಕ್ಕೆ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. “ದಯವಿಟ್ಟು ನಮ್ಮ ಈ ವೈಯಕ್ತಿಕ ನಿರ್ಧಾರವನ್ನು ಗೌರವಿಸಿ ಮತ್ತು ಈ ಸಂಬಂಧದ ಎಲ್ಲಾ ಅಂಶಗಳನ್ನು ಪರಿಹರಿಸಲು ದಯವಿಟ್ಟು ನಮಗೆ ಅವಕಾಶ ನೀಡಿ. ಈ ಸಮಯದಲ್ಲಿ ಇಡೀ ಕುಟುಂಬಕ್ಕೆ ನಿಮ್ಮ ಶುಭ ಹಾರೈಕೆಗಳನ್ನು ಕೋರುತ್ತೇನೆ” ಎಂದು ಸಿಂಘಾನಿಯಾ ಬರೆದಿದ್ದಾರೆ.

ರೇಮಂಡ್ ಗ್ರೂಪ್​ನ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರ ಕಿರಿಯ ಪುತ್ರರಾದ ಗೌತಮ್ ಸಿಂಘಾನಿಯಾ 1999 ರಲ್ಲಿ ತಮ್ಮ ದೀರ್ಘಕಾಲದ ಪ್ರಿಯತಮೆ ನವಾಜ್ ಮೋದಿ ಅವರನ್ನು ವಿವಾಹವಾದರು.

ನವಾಜ್ ಮುಂಬೈನಲ್ಲಿ ಜನಿಸಿದರು. ಅವರಿಗೆ ಹಿರಿಯ ಮತ್ತು ಕಿರಿಯ ಸಹೋದರ ಇದ್ದಾರೆ. ಅವರ ತಂದೆ ವಕೀಲರಾಗಿದ್ದರು. ನವಾಜ್ 10 ವರ್ಷದವರಿದ್ದಾಗ ಅವರ ಪೋಷಕರು ಬೇರ್ಪಟ್ಟರು. ಸಹೋದರರು ತಂದೆಯಂತೆ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನವಾಜ್ ಕೂಡ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ.

ಗೌತಮ್ ಸಿಂಘಾನಿಯಾ ಕೆಲ ವರ್ಷಗಳ ಹಿಂದೆ ತನ್ನ ತಂದೆ ವಿಜಯಪತ್ ಅವರೊಂದಿಗಿನ ಜಗಳದ ಕಾರಣದಿಂದ ಸುದ್ದಿಯಲ್ಲಿದ್ದರು. ರೇಮಂಡ್​ ಗ್ರೂಪ್ ಅನ್ನು ವಿಜಯಪತ್ ಸಿಂಘಾನಿಯಾ ಸ್ಥಾಪಿಸಿದರು. ಇದು ಬಟ್ಟೆ ಬ್ರಾಂಡ್​ಗಳು ಮತ್ತು ಜವಳಿಗಳನ್ನು ಉತ್ಪಾದಿಸುವ ಮೂಲಕ ಭಾರತದಲ್ಲಿ ಪ್ರಖ್ಯಾತವಾಗಿದೆ. ಇವರ ಮಗ ಗೌತಮ್ ಆದಾಯ ವಿಸ್ತರಿಸುವ ಪ್ರಯತ್ನವಾಗಿ ಕಂಪನಿಯ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ