Breaking News
Home / ರಾಜ್ಯ / ಪಟಾಕಿ ನಿಷೇಧ ವಿರೋಧಿಸಿ ಪಟಾಕಿ ಸುಡುವ ಮೂಲಕ ಪ್ರತಿಭಟಿಸಿದ ವಾಟಾಳ್

ಪಟಾಕಿ ನಿಷೇಧ ವಿರೋಧಿಸಿ ಪಟಾಕಿ ಸುಡುವ ಮೂಲಕ ಪ್ರತಿಭಟಿಸಿದ ವಾಟಾಳ್

Spread the love

ಬೆಂಗಳೂರು, ನ.8- ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧ ಮಾಡಿರುವ ಕ್ರಮ ಸಂಪ್ರದಾಯಕ್ಕೆ ಮಾಡಿರುವ ಅಪಚಾರ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಇಂದು ಪಟಾಕಿ ಸುಡುವ ಮೂಲಕ ಸರ್ಕಾರದ ಕ್ರಮ ವಿರೋಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟಾಕಿ ಹಚ್ಚುವುದರಿಂದ ಕೊರೊನಾ ಬರುತ್ತದೆ ಎಂಬ ಸರ್ಕಾರದ ಹೇಳಿಕೆ ಅತ್ಯಂತ ಅವೈಜ್ಞಾನಿಕವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಪಟಾಕಿಯಿಂದ ಬರುತ್ತದೆ ಎಂದು ಎಲ್ಲೂ ಸಾಬೀತಾಗಿಲ್ಲ. ಕೊರೊನಾ ಸೋಂಕು ಜನರ ಮುನ್ನೆಚ್ಚರಿಕೆ ಕ್ರಮದಿಂದ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತಿದೆ ಎಂದರು.

ಪಟಾಕಿ ಇಲ್ಲದಿದ್ದರೆ ದೀಪಾವಳಿ ಹಬ್ಬವೇ ಇಲ್ಲ. ದೀಪಾವಳಿ ಹಬ್ಬ ಯಾವುದೇ ಒಂದು ಪ್ರದೇಶ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇದು ದೇಶಾದ್ಯಂತ ಆಚರಿಸುವ ಸಂಪ್ರದಾಯ ಹಬ್ಬವಾಗಿದೆ. ಪಟಾಕಿ ನಿಷೇಸುವುದರಿಂದ ಸಂಪ್ರದಾಯಕ್ಕೆ ಸರ್ಕಾರ ಕಳಂಕ ತಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಲೇ ಈ ನಿಷೇಧ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯಾದ್ಯಂತ ಜನ ಎಚ್ಚರದಿಂದ ಪಟಾಕಿ ಸಿಡಿಸಿ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸುವಂತಾಗಲಿ. ಸರ್ಕಾರ ಪಟಾಕಿ ನಿಷೇಸುವ ಕ್ರಮವನ್ನು ಜಾರಿಗೊಳಿಸಿ ಜನರನ್ನು ಗೊಂದಲದಲ್ಲಿಟ್ಟಿದೆ. ಹಸಿರು, ಕೆಂಪು ಪಟಾಕಿ ಎಂದು ಹೇಳಿ ಪಟಾಕಿ ಮಾರಾಟಗಾರರು, ಉತ್ಪಾದಕರ ಮೇಲೆ ಗದಾಪ್ರಹಾರ ಮಾಡಿದೆ ಎಂದು ಅವರು ಆರೋಪಿಸಿದರು.

ಕಳೆದ 8 ತಿಂಗಳಿನಿಂದ ಕೊರೊನಾ ಸೋಂಕು ವ್ಯಾಪಿಸಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಸುವುದಿದ್ದರೆ ಆರು ತಿಂಗಳ ಮುಂಚೆಯೇ ನಿಷೇಸಬೇಕಿತ್ತು. ಪಟಾಕಿ ಉತ್ಪಾದಕರು ತಮ್ಮ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದರು. ಕೋಟ್ಯಂತರ ರೂ. ವೆಚ್ಚ ಮಾಡಿ ಪಟಾಕಿ ಉತ್ಪಾದಿಸಿ ಮಳಿಗೆ ತೆರೆದವರ ಪರಿಸ್ಥಿತಿ ಏನಾಗಬೇಕು ? ಏಕಾಏಕಿ ನಿರ್ಧಾರ ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದರು.

ಕೊರೊನಾ ಸೋಂಕು ದೀಪ ಹಚ್ಚಿದರೆ ಹೋಗುತ್ತದೆ, ಚಪ್ಪಾಳೆ ತಟ್ಟಿದರೆ ಹೋಗುತ್ತದೆ ಎಂದು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವುದರ ಜತೆಗೆ ಪಟಾಕಿ ನಿಷೇಸುವುದರಿಂದ ಕೊರೊನಾ ನಿಯಂತ್ರಣವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದೂ ಕೂಡ ಹಾಸ್ಯಾಸ್ಪದವಾಗಿದೆ ಎಂದು ವಾಟಾಳ್ ಹೇಳಿದರು.

ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಅಪಾಯ ರಹಿತ ಪಟಾಕಿಗಳನ್ನು ಮಾರಾಟ ಮಾಡಲಿ ಮತ್ತು ಜನ ಹಚ್ಚುವ ಮೂಲಕ ದೀಪಾವಳಿ ಆಚರಿಸಲಿ ಎಂದು ಅವರು ಹೇಳಿದರು.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ