Breaking News
Home / Uncategorized / ರಾಜ್ಯದಲ್ಲೇ ಮೊದಲ ಪ್ರಯೋಗ – ವಿದ್ಯಾರ್ಥಿಗಳಿಗೆ ಅನುಕೂಲ

ರಾಜ್ಯದಲ್ಲೇ ಮೊದಲ ಪ್ರಯೋಗ – ವಿದ್ಯಾರ್ಥಿಗಳಿಗೆ ಅನುಕೂಲ

Spread the love

ರಾಮನಗರ: ಇಲ್ಲೊಂದು ಇಂಟರ್ ನೆಟ್ ಗ್ರಾಮವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಹೆಚ್ಚಿಸುವುದನ್ನು ಉತ್ತೇಜಿಸಲು, ಮಾತೃಭೂಮಿ ಸೇವಾ ಫೌಂಡೇಶನ್ ಸಂಸ್ಥೆಯಿಂದ ಈ ಸೇವೆ ಕಲ್ಪಿಸಲಾಗಿದೆ. ಯೂತ್ ಬ್ರಾಂಡ್ ಬ್ಯಾಂಡ್ ಸಹಯೋಗದಲ್ಲಿ ಈ ಗ್ರಾಮಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಉಚಿತ ವೈಫೈ ನೀಡಲಾಗಿದೆ. ಇದರಿಂದ ಆನ್‍ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿದೆ.

ಹೌದು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಆನ್‍ಲೈನ್ ಕ್ಲಾಸ್ ಗೆ ಸಹಾಯವಾಗಲೆಂದು ಇಡೀ ಊರಿಗೆ ಉಚಿತ ಇಂಟರ್ನೆಟ್ ಮೂಲಕ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಮಾತೃಭೂಮಿ ಸೇವಾ ಫೌಂಡೇಷನ್ ವತಿಯಿಂದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಉಚಿತ ಇಂಟರ್ ನೆಟ್ ವೈಫೈ ಕಲ್ಪಿಸಿದ್ದಾರೆ. ಮಾತೃಭೂಮಿ ತಂಡದವರು ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲವನ್ನು ಹೆಚ್ಚಿಸುವುದನ್ನು ಉತ್ತೇಜಿಸಲು ಈ ಮಹತ್ ಕಾರ್ಯ ಕೈಗೊಂಡಿದ್ದಾರೆ. ಇಡೀ ಗ್ರಾಮವನ್ನೇ ಇಂದು ತಾಂತ್ರಿಕ್ ವಿಲೇಜ್ ಗ್ರಾಮವಾಗಿ ಮಾರ್ಪಾಡು ಮಾಡಲಾಗಿದೆ. ಯೂತ್ ಬ್ರಾಂಡ್ ಬ್ಯಾಂಡ್ ಸಹಯೋಗದಲ್ಲಿ ಈ ಗ್ರಾಮಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿ ಉಚಿತ ವೈಫೈಯನ್ನು ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಗಳಿಗೆ ಸಹಾಯವಾಗುವ ಜೊತೆಗೆ ಸ್ಮಾರ್ಟ್ ಫೋನ್ ಇಲ್ಲದ ಕುಟುಂಬದ ಮಕ್ಕಳಿಗೆ ಸಹಾಯವಾಗಲೆಂದು 3 ರಿಂದ 4 ಕಂಪ್ಯೂಟರ್ ಗಳನ್ನು ಗ್ರಾಮದ ವಿವಿಧ ಕಡೆ ಇಟ್ಟು ಇಂಟರ್ನೆಟ್ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಇದರ ಜೊತೆಗೆ ಗ್ರಾಮದ ಅಭಿವೃದ್ಧಿಗಾಗಿ ವೈಫೈ ಬಳಕೆಯನ್ನು ಉತ್ತೇಜಿಸಲು ಗ್ರಾಮದ ಸಂಪನ್ಮೂಲ ಹೆಚ್ಚಿಸುವ ಉದ್ದೇಶದಿಂದ ಗ್ರಾಮಕ್ಕೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಟ್ರಸ್ಟ್ ಸಂಚಾಲಕರು ಹೇಳುತ್ತಾರೆ.

ಈಗಾಗಲೇ ಗ್ರಾಮವನ್ನ ಡಿಜಿಟಲ್ ಗ್ರಾಮವಾಗಿ ಮಾಡಲಾಗಿದೆ. ಗ್ರಾಮದ 25 ಪಾಯಿಂಟ್ ಗಳಲ್ಲಿ ಇಂಟರ್ ನೆಟ್ ಲಿಂಕ್ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯು ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣ, ಆರೋಗ್ಯ ಅಥವಾ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಇಡೀ ಗ್ರಾಮ ಸಮುದಾಯವನ್ನು ಸಬಲೀಕರಣಗೊಳಿಸುವತ್ತ ಗಮನಹರಿಸಲಾಗುತ್ತಿದೆ. ಡಿಜಿಟಲ್ ಕಲ್ಪನೆಯ ಹಳ್ಳಿಯಲ್ಲಿ, ನಿವಾಸಿಗಳು ಡಿಜಿಟಲ್ ಸಾಕ್ಷರರಾಗಲು ಪ್ರೋತ್ಸಾಹಿಸಲಾಗುತ್ತಿದೆ.

ಒಟ್ಟಾರೆ ಇಂದಿನ ಡಿಜಿಟಲ್ ಯುಗದಲ್ಲಿ ಇದೇ ಪ್ರಥಮ ಬಾರಿಗೆ ಹಳ್ಳಿಗಾಡಿನ ಜನತೆಗೆ ಉಚಿತ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಮಾತೃಭೂಮಿ ಸೇವಾ ಸಂಸ್ಥೆ ತನ್ನ ಸಾಮಾಜಿಕ ಚಟುವಟಿಕೆಯನ್ನ ಮುಂದುವರಿಸಿಕೊಂಡು ಹೋಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.


Spread the love

About Laxminews 24x7

Check Also

ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Spread the loveವಿಜಯಪುರ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದರೂ ಆದೇಶ ಪಡೆಯದೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ