Breaking News
Home / ರಾಜಕೀಯ / ನಿಂತ ಮಿಡಿತ..ಇದು ಅಪರೂಪದ ‘ಹೃದಯ’ ಬಡಿತ: ಬ್ಯಾಟರಿಯೇ ಈ ಮಹಿಳೆಯ ‘ನಾಡಿಮಿಡಿತ’ಕ್ಕೆ ಆಸರೆ..

ನಿಂತ ಮಿಡಿತ..ಇದು ಅಪರೂಪದ ‘ಹೃದಯ’ ಬಡಿತ: ಬ್ಯಾಟರಿಯೇ ಈ ಮಹಿಳೆಯ ‘ನಾಡಿಮಿಡಿತ’ಕ್ಕೆ ಆಸರೆ..

Spread the love

ನ್ಯೂಯಾರ್ಕ್( ವಾಷಿಂಗ್ಟನ್​): ಅಪರೂಪದ ಆನುವಂಶಿಕ ಹೃದಯ ಕಾಯಿಲೆಯಿಂದ ಬಳಲುತ್ತಿರುವ 30 ವರ್ಷದ ಅಮೆರಿಕದ ಮಹಿಳೆ, ನಾಡಿಮಿತವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆದರೆ ಅವರಿಗೆ ಬ್ಯಾಟರಿಯೇ ಉಸಿರಾಟಕ್ಕೆ ಆಸರೆ ಆಗಿದೆ.

ಬೋಸ್ಟನ್‌ನ ಟಿಕ್‌ಟಾಕರ್ ಸೋಫಿಯಾ ಹಾರ್ಟ್​ ಎಂಬುವವರ ಹೃದಯ ಹಿಗ್ಗಿದ ಕಾರ್ಡಿಯೊಮಿಯೊಪತಿ ಸಮಸ್ಯೆಯಿಂದ ಬಳಲುತ್ತಿದೆ. ಅಂದರೆ ಡಿಲೇಟೆಡ್ ಕಾರ್ಡಿಯೊಮಿಯೋಪತಿ, ಅಥವಾ ಡಿಸಿಎಂ, ಹೃದಯದ ಕೋಣೆಗಳು ಹಿಗ್ಗಿದಾಗ ಮತ್ತು ಸಂಕುಚಿತಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದು ಹೆಚ್ಚಾಗಿ ಎಡ ಕುಹರದಲ್ಲಿ ( ಅಂದರೆ ಹೃದಯದ ಕೆಳಗಿನ ಕೋಣೆ) ಪ್ರಾರಂಭವಾಗುತ್ತದೆ. ರೋಗವು ಉಲ್ಬಣಗೊಳ್ಳುತ್ತಿದ್ದಂತೆ, ಅದು ಬಲ ಕುಹರಕ್ಕೆ ಮತ್ತು ಹೃತ್ಕರ್ಣಕ್ಕೆ ( ಹೃದಯದ ಮೇಲ್ಭಾಗದ ಕೋಣೆಗಳಿಗೆ) ಹರಡಬಹುದು. ಇದನ್ನೇ ಕಾರ್ಡಿಯೋಮಿಯೋಪತಿ ಎಂದು ಕರೆಯಲಾಗುತ್ತದೆ.

ಹೀಗಾಗಿ ಈ ಮಹಿಳೆ ಜೀವ ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ. ಅವರ ಜೀವ ಉಳಿಸುವ ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್- ಎಲ್‌ವಿಎಡಿ ಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಈ ಎಲ್​​ವಿಎಡಿ ಹೃದಯ ರಕ್ತವನ್ನು ಪಂಪ್ ಮಾಡುವಂತೆ ಮಾಡುತ್ತದೆ. ಇದೀಗ ಅವರು ಹೃದಯ ಕಸಿಗಾಗಿ ಕಾಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸೋಫಿಯಾ ಹಾರ್ಟ್ ಅವರು ತಮ್ಮ ದೈನಂದಿನ ಕೆಲಸಗಳಾದ ಹಲ್ಲುಜ್ಜುವುದು ಸೇರಿದಂತೆ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲರಂತೆ ಬೆಳಗಿನ ಉಪಾಹಾರ ಸೇವಿಸಲು ಸಮರ್ಥಳಾಗಿದ್ದರೂ, ಅವರು ಬದುಕುಳಿಯಲು ಹೃದಯ ಕಸಿ ಮಾಡಿಸಿಕೊಳ್ಳಬೇಕಾಗಿದೆ.

ಟಿಕ್​ಟಾಕ್​ ಮೂಲಕ ತಮ್ಮ ಬದುಕು ತೋರಿಸಿದ ಹಾರ್ಟ್: “ಅವರಿಗೆ ಅಳವಡಿಕೆ ಮಾಡಿರುವ ಎಲ್​​ವಿಎಡಿ ನೆರವಿನಿಂದ ಜೀವನ ಸಾಗಿಸುತ್ತಿದ್ದು, ಆ ಪರಿಕರ ತುಸು ಉದ್ಧವಾಗಿದ್ದರೂ, ಅದರೊಂದಿಗೆ ಸುತ್ತಾಡಬಹುದಾದ ಸ್ಥಳಗಳಲ್ಲಿ ವಾಸಿಸುವುದನ್ನು ನಾನು ಕರಗತ ಮಾಡಿಕೊಂಡಿದ್ದೇನೆ” ಎಂದು ಹಾರ್ಟ್ ಹೇಳುತ್ತಾರೆ. ಹಾರ್ಟ್​ ಅವರು, ಮನೆಯಿಂದ ಹೊರಡುವಾಗ, ತಮ್ಮ ಎಲ್‌ವಿಎಡಿಯನ್ನು ಬ್ಯಾಟರಿಗಳಿಗೆ ಪ್ಲಗ್ ಮಾಡುತ್ತಾರೆ ಮತ್ತು ತಮ್ಮೊಂದಿಗೆ ಬ್ಯಾಟರಿಗಳ ಬಿಡಿ ಸೆಟ್ ಅನ್ನು ತೆಗೆದುಕೊಂಡೇ ಹೋಗುತ್ತಾರೆ. ಅವರ ಈ ಹೋರಾಟದ ಬದುಕಿನ ಬಗ್ಗೆ ಟಿಕ್​ ಟಾಕ್​​ನಲ್ಲಿ ವಿಡಿಯೋ ಮೂಲಕ ವಿವರಿಸಿದ್ದಾರೆ. ಹೇಗೆ ಸಮಸ್ಯೆಯೊಂದಿಗೆ ಹಾಗೂ ಎಲ್​​​​ವಿಎಡಿ ಸಾಧನದೊಂದಿಗೆ ಬದುಕು ಸಾಗುತ್ತಿದೆ ಎಂಬುದನ್ನು ಟಿಕ್​ಟಾಕ್​ನಲ್ಲಿ ದಾಖಲಿಸುವ ಮೂಲಕ ಎಲ್ಲರಿಗೂ ಈ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರ “ನಾಡಿಮಿಡಿತವಿಲ್ಲ” ಎಂಬ ಶೀರ್ಷಿಕೆಯಲ್ಲಿ ಮಾಡಿದ ಟಿಕ್​ಟಾಕ್​ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

1.5 ಮಿಲಿಯನ್ ವೀಕ್ಷಣೆ: ” ನನ್ನ ಬದುಕು ಈಗ ಬ್ಯಾಟರಿಗಳ ಮೇಲೆ ನಿಂತಿದೆ ಎಂದು ಅವರು ಮಾಡಿರುವ ಟಿಕ್​ ಟಾಕ್​ 1.5 ಮಿಲಿಯನ್ ವೀಕ್ಷಣೆಗಳನ್ನ ಪಡೆದುಕೊಂಡಿದೆ. ಈ ಮಹಿಳೆ ಕುದುರೆ ಫಾರ್ಮ್​​ನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸುಸ್ತಾಗುತ್ತಿತ್ತು. ಬ್ಯಾಕ್ಟಿರಿಯಾದಿಂದ ಹೀಗೆ ಆಗುತ್ತಿರಬಹುದು ಎಂದು ಭಾವಿಸಿದ್ದರು. ಆದರೆ, ಇದು ನಿಜವಾಗಿಯೂ ತೀವ್ರ ಭಾದೆ ಕೊಡಲು ಆರಂಭಿಸಿತು. ಇದರಿಂದಾಗಿ ತುಂಬಾ ದಣಿವಾಗುತ್ತಿತ್ತು ಎಂದು ಅವರು ತಮಗಾದ ಅನುಭವವನ್ನು ಟಿಕ್​ಟಾಕ್​ನಲ್ಲಿ ಹೇಳಿದ್ದಾರೆ. “ನಿಜವಾಗಿಯೂ ವರ್ಣಿಸಲು ಸಾಧ್ಯವಾಗದ ಆಯಾಸವಾಗಿದೆ. ನನ್ನ ಮೆದುಳಿನಲ್ಲಿ ನನಗೆ ದಣಿವಾದ ಅನುಭವ ಏನು ಆಗಿರಲಿಲ್ಲ ಆದರೆ, ದೇಹ ಮಾತ್ರ ಅದನ್ನು ಕೇಳುತ್ತಿರಲಿಲ್ಲ. ದೈಹಿಕವಾಗಿ ದಣಿವು ಆವರಸಿತ್ತು” ಎಂದು ಅವರು ತಮ್ಮ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ.

ಅಚ್ಚರಿ ಹಾಗೂ ದುರ್ದೈವ ಎಂದರೆ, ಏಳು ವರ್ಷಗಳ ಹಿಂದೆ, ಸೋಫಿಯಾ ಹಾರ್ಟ್ ಅವರ ಅವಳಿ ಸಹೋದರಿ ಒಲಿವಿಯಾ ಸಹ ಹೃದಯ ವೈಫಲ್ಯದಿಂದ ಬಳಲುತ್ತಿದ್ದರು. 2016 ರಲ್ಲಿ ಅವರು ಹೃದಯ ಕಸಿಗೆ ಒಳಗಾಗಿದ್ದರು. ಅಲ್ಲಿಯವರೆಗೂ ಅವರು LVAD ಸಾಧನವನ್ನು ಬಳಸುತ್ತಿದ್ದರು. ಇಂತಹದ್ದೇ ಸಮಸ್ಯೆಗೆ ಒಳಗಾಗಿರುವ ಸೋಫಿಯಾ, ಅನಾರೋಗ್ಯಕ್ಕೆ ಒಳಗಾಗುವವರೆಗೂ ಇದೊಂದು ಅನುವಂಶೀಯ ಕಾಯಿಲೆ ತಮಗೂ ಬರುತ್ತದೆ ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲವಂತೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ