Breaking News
Home / ಜಿಲ್ಲೆ / ಬೆಳಗಾವಿ / ಕಾವೇರಿ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕಾವೇರಿ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Spread the love

ಕಾವೇರಿ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದಾರೆ

ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಡ್ತೀದಿವಿ.ಮುಂದೆಯೂ ಕೊಡ್ತೀವಿ.ವಿಚಾರ ಕೋರ್ಟ್ ನಲ್ಲಿರೋ ಕಾರಣ ನಾನು ಬಹಳ ಮಾತಾಡಲ್ಲ. ‌ಮೊನ್ನೆ ಡಿಕೆ ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತಾಡಿದ್ದೇನೆ ಎಂದರು.CWMA ನಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ಮಾಡೋಕೆ ಬರಲ್ಲ ಇದು ಸೌಹಾರ್ದಯುತವಾಗಿ ಬಗೆಹರಿಸಬೇಕು. ಡಿಎಂಕೆ ನಾಯಕರಿಗೆ ನೀವು ಮೊದಲು ಶಾಲು ಪೇಟಾ ಹಾಕಿ ಸ್ವಾಗತ ಮಾಡಿದ್ದೀರಿ.ತಮಿಳುನಾಡಿಲ್ಲಿ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ.ಅವರ ಮೈತ್ತಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು

ಡಿಎಂಕೆ ಅವರು ದಿನಾ ಬೆಳಗ್ಗೆ ಎದ್ರೆ ಮೋದಿ ಅವರನ್ನ ಬಯ್ಯೋ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ತರಹ ಮೋದಿ ಅವರನ್ನ ಬೈಯೋದೆ ಅವರ ಕೆಲಸ‌. ನಾವು ಕರೆದರೆ ಯಾಕೆ ಅವರ ಬರ್ತಾರೆ. ಜನರನ್ಮು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ತಪ್ಪು ಮುಚ್ಚಿ ಹಾಕಲು ಜನರನ್ನು ತಪ್ಪು ದಾರಿಗೆ ಸಿದ್ದರಾಮಯ್ಯ ಎಳೆಯುತ್ತಿದ್ದಾರೆ. ಈವರೆಗೆ ಖರ್ಗೆ ಅವರು ಯಾಕೆ ಇಬ್ಬರನ್ನು ಕರೆದು ಮಾತಾಡಿಲ್ಲ. ಮೈತ್ರಿ ನಾಯಕರು ಖರ್ಗೆ ಅವರೇ, ಯಾಕೆ ಇಬ್ಬರನ್ನು ಕರೆದು ಮಾತಾಡಿಲ್ಲ. ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ ಎಂದು ದೂರಿದರು

ಬಿಜೆಪಿ ,ಜೆಡಿಎಸ್‌ ಮೈತ್ರಿ ಅಂತಿಮವಾಗಿದೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ . ಜೆಡಿಎಸ್ , ಎನ್ ಡಿ.ಎ ಒಕ್ಕೂಟ ಸೇರಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಇದೀಗ ಕುಮಾರಸ್ವಾಮಿ ನಮ್ಮ ಜೊತೆ ಸೇರಿರೋದು ಸಂತೋಷದ ಸಂಗತಿ. ಎನ್.ಡಿ.ಎ ಹೆಸರು ನಮಗೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ‌. ಯಾಕಂದ್ರೆ ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ.1998 ರಲ್ಲಿ 1999 ರಲ್ಲಿ ಎನ್.ಡಿ.ಎ ಸರ್ಕಾರ ಮಾಡಿದ್ವಿ 2014 ಹಾಗೂ 2019 ಕ್ಕೆ ಎನ್.ಡಿ.ಎ ಅಧಿಕಾರ ಬಂದಿದೆ‌. ಯಾವುದೇ ಸಮಯದಲ್ಲಿ ಎನ್.ಡಿ.ಎ ಹೆಸರು ಬದಲಾವಣೆ ಮಾಡೋ ಅವಶ್ಯಕತೆ ಬರಲಿಲ್ಲ.

ಯಾಕಂದ್ರೆ ಎನ್.ಡಿ.ಎ ಮೇಲೆ ಒಂದೇ ಆರೋಪ ಇಲ್ಲ. ಯುಪಿಎ ಮೇಲೆ 12 ಲಕ್ಷ ಕೋಟಿ ಭ್ರಷ್ಟಾಚಾರ ಆರೋಪ ಇದೆ. ಈ ಕಾರಣಕ್ಕೆ ಯುಪಿಎ ಹೆಸರು ಬದಲಾವಣೆ ಆಗಿದೆ. ಆದ್ರೆ ಎನ್.ಡಿ.ಎ ಯಾವತ್ತೂ ತನ್ನ ಹೆಸರು ಬದಲಾವಣೆ ಮಾಡಿಲ್ಲ. ಇದೀಗ ಜೆಡಿಎಸ್ ನಮ್ಮ ಜೊತೆ ಸೇರಿರೋದು ಸಂತೋಷ‌. ಆದ್ರೆ ಇದುವರೆಗೂ ಯಾವುದೇ ಕ್ಷೇತ್ರ ಅಥವಾ ಇಷ್ಟೇ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ರಾಜ್ಯದ ನಾಯಕರು ತೀರ್ಮಾನ ಮಾಡ್ತಾರೆ ಎಂದರು.


Spread the love

About Laxminews 24x7

Check Also

ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

Spread the love ವಿಜಯಪುರ: ದೇಶದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಲೋಕಸಭೆಗೆ ಯಾರಿಗೆ ಮತ ಹಾಕಬೇಕು, ವಿಧಾನಸಭೆಗೆ ಏನು ನಿರ್ಣಯ ಕೈಗೊಳ್ಳಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ