Home / ರಾಜಕೀಯ / 20ರ ಪ್ರಾಯದಲ್ಲಿ ಎಮ್ಮೆ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ.. 78ನೇ ವಯಸ್ಸಿನಲ್ಲಿ ಬಂಧನ!

20ರ ಪ್ರಾಯದಲ್ಲಿ ಎಮ್ಮೆ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ.. 78ನೇ ವಯಸ್ಸಿನಲ್ಲಿ ಬಂಧನ!

Spread the love

ಬೀದರ್: ಎಮ್ಮೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 58 ವರ್ಷಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 1965ರಲ್ಲಿ ಮೇಹಕರ್‍ನಲ್ಲಿ ನಡೆದ ಎರಡು ಎಮ್ಮೆ, ಒಂದು ಕರು ಕಳುವಾದ ಕುರಿತು ಮುರಳೀಧರರಾವ್ ಕುಲಕರ್ಣಿ ಎನ್ನುವವರು ಮೇಹಕರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಘಟನೆ ನಂತರ ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಾಗ್ಮೋರೆ (20) ಅವರನ್ನು ಬಂಧಿಸಲಾಗಿತ್ತು.

ಆದರೆ, ಜಾಮೀನು ಪಡೆದ ಬಳಿಕ ಈ ಆರೋಪಿಗಳು ನ್ಯಾಯಾಲಯಕ್ಕೆ ಬರದೇ ತಲೆ ಮರೆಸಿಕೊಂಡಿದ್ದರು. ಸಮನ್ಸ್, ವಾರಂಟ್​​ ಜಾರಿ ಮಾಡಿದ್ದರೂ ಹಾಜರಾಗಿರಲಿಲ್ಲ. ಮೊದಲ ಆರೋಪಿ ಕಿಶನ್ ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಗಿತ್ತು. ಇನ್ನೊಬ್ಬ ಗಣಪತಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ವಿಶೇಷ ತಂಡವು ಗಣಪತಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕಳ್ಳತನ ನಡೆದಾಗ ಗಣಪತಿ ವಯಸ್ಸು ಕೇವಲ 20 ವರ್ಷವಾಗಿತ್ತು. ಆತನಿಗೆ ಈಗ 78 ವರ್ಷ ವಯಸ್ಸಾಗಿದೆ.

ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹೇಳಿದ್ದಿಷ್ಟು:​ ಹಳೆ ಪ್ರಕರಣಗಳ ತನಿಖೆಗೆ ವಿಶೇಷ ತಂಡ ರಚನೆ ಮಾಡಿದ್ದೆವು. ಈ ಸಂದರ್ಭದಲ್ಲಿ 58 ವರ್ಷಗಳ ಹಿಂದಿನ ಈ ಪ್ರಕರಣ ಪತ್ತೆ ಯಾಗಿದೆ. ಹಾಗಾಗಿ ವ್ಯಕ್ತಿಯನ್ನು ಪತ್ತೆ ಹಚ್ಚಿ ನಮ್ಮ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಎಸ್​​​​ಪಿ ಚನ್ನಬಸವಣ್ಣ ಹೇಳಿದ್ದಾರೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ