Home / ಹುಬ್ಬಳ್ಳಿ / ಬಾಗಿಲ ಚಿಲಕ ಮೀಟಿ ತೆಗೆದು ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿ

ಬಾಗಿಲ ಚಿಲಕ ಮೀಟಿ ತೆಗೆದು ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿ

Spread the love

ಮುಂಡಗೋಡ – ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದೆರಡು ವರ್ಷಗಳಿಂದ ರಾತ್ರಿ ವೇಳೆಯಲ್ಲಿ  ಮನೆಯ ಜನರು ಮಲಗಿರುವಾಗಲೇ ಮನೆಯ ಹಿಂದಿನ ಬಾಗಿಲ ಚಿಲಕ ಮೀಟಿ  ತೆಗೆದು ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಆರೋಪಿಯನ್ನು  ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ತಡಸ್ ಗ್ರಾಮದ ಕಮಲಾನಗರ ತಾಂಡಾದ ಕ್ರಷ್ಣಾ ಲಮಾಣಿ (೩೮) ಬಂಧಿತ ಆರೋಪಿಯಾಗಿದ್ದು ಬಂಧಿತನಿಂದ ಸುಮಾರು ೩.೫ ಲಕ್ಷ ರೂ ಬೆಲೆಯ ೭೦ ಗ್ರಾಂ ತೂಕದ ಬಂಗಾರದ ಆಭರಣ, ಸುಮಾರು ೧೫ ಸಾವಿರ ರೂ ಬೆಲೆಯ ೨೦೦ ಗ್ರಾಂ ಬೆಳ್ಳಿಯ ಆಭರಣ, ಹಾಗು ೩೧ ಸಾವಿರ ನಗದು ಸೇರಿದಂತೆ ಸುಮಾರು ೫ ಲಕ್ಷ ರೂ ಬೆಲೆಯ ಚಿನ್ನಾಭರಣ, ನಗದನ್ನು ವಶಪಡಿಸಿಕೊಂಡಿದ್ದಾರೆ.
 ಈ ಘಟನೆಗೆ ಸಂಬಂಧಿಸಿದಂತೆ ಕಳೆದ ನ.೧೯ ರಂದು  ಮುಂಡಗೋಡ ಠಾಣಾ ವ್ಯಾಪ್ತಿಯ ಮೈನಳ್ಳಿಯಲ್ಲಿ ಒಂದೇ ದಿನ ಎರಡು ಮನೆ ಕಳ್ಳತನವಾಗಿದ್ದು ಆರೋಪಿಯು ಕಳುವು ಮಾಡುವಾಗ ಮನೆಯ ಜನರು ಎಚ್ಚರವಾಗಿ ಅವನನ್ನು ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದರಾದರೂ ಆರೋಪಿಯು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.
ತನಿಖೆ ನಡೆಸಿದ ಪೋಲಿಸರು ನ.೨೭ ರಂದು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ೨೦೧೮ ರಿಂದ ಇಲ್ಲಿಯವರಗೆ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದ.
ಇಂದು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅವನಿಂದ ಕಳವು ಮಾಡಿದ ಬಂಗಾರದ ಆಭರಣ, ನಹದು ವಶಕ್ಕೆ ಪಡೆದುಕೊಂಡಿದ್ದಾರೆ.

Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ