Breaking News
Home / ಜಿಲ್ಲೆ / ಮೈಸೂರ್ / ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ.

ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ.

Spread the love

ಮೈಸೂರು, ನ.1- ಕೊರೊನಾ ಹಿನ್ನೆಲೆಯಲ್ಲಿ ನಡೆದ ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ. ಸರ್ಕಾರ ದಸರಾ ಆಚರಣೆಗಾಗಿ 10 ಕೋಟಿ ರೂ.ವನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತಾದರೂ ಸಂಪ್ರದಾಯವನ್ನು ಕೈ ಬಿಡದಂತೆ ವಿಶ್ವ ವಿಖ್ಯಾತ ದಸರಾವನ್ನು ಸರಳವಾಗಿ ಆಚರಿಸಿ ವೆಚ್ಚ ಮಾಡಿದ್ದು ಕೇವಲ 2 ಕೋಟಿ ರೂ. ಮಾತ್ರ.

25 ವರ್ಷಗಳ ಇತಿಹಾಸದಲ್ಲಿ ಒಂದು ವಾರದೊಳಗೆ ದಸರಾ ವೆಚ್ಚವನ್ನು ನೀಡಿರುವುದು ಇದೇ ಮೊದಲ ಬಾರಿ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೈಸೂರು ಅರಮನೆ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಸರಾ ಆಚರಣೆಯ ವೆಚ್ಚದ ವಿವರಗಳನ್ನು ನೀಡಿದರು.

ರಾಜ್ಯ ಸರ್ಕಾರ ದಸರಾ ಆಚರಣೆಗಾಗಿ 10 ಕೋಟಿ ಅನುದಾನ ನೀಡಿತ್ತು. ಮೂಡಾ 5 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಆದರೆ ರಾಜ್ಯ ಸರ್ಕಾರ ನೀಡಿದ 10 ಕೋಟಿಯ ಅನುದಾನದಲ್ಲಿ ನಾವು ಸರಳವಾಗಿ ದಸರಾ ಆಚರಣೆ ಮಾಡಿದ್ದು 2.05,8367 ಮಾತ್ರ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಸಾಂಸ್ಕøತಿಕ ಕಾರ್ಯಕ್ರಮಗಳ ನಿರ್ವಹಣೆ ಮತ್ತು ಕಲಾವಿದರ ಸಂಭಾವನೆಗೆ 44.78ಲಕ್ಷ , ದಸರಾ ಆನೆಗಳ ನಿರ್ವಹಣಾ ವೆಚ್ಚಕ್ಕೆ 35 ಲಕ್ಷ, ಜಂಬೂ ಸವಾರಿ ಕಾರ್ಯಕ್ರಮಗಳ ನಿರ್ವಹಣೆಗೆ 16.94 ಲಕ್ಷ, ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲು 41.08 ಲಕ್ಷ , ಗೌರವ ಸಂಭಾವನೆಗೆ 40 ಲಕ್ಷ , ಗಣ್ಯ ಆಹ್ವಾನ ರೇಷ್ಮೆ ಶಾಲು, ಹಾರ-ತುರಾಯಿ 1.80 ಲಕ್ಷ, ಆನೆಗಳ ವಿಮಾ ವೆಚ್ಚ 13,202 ರೂ. ಸೇರಿದಂತೆ 2.83,167 ಖರ್ಚಾಗಿದ್ದು , ಇದಲ್ಲದೆ ಮಂಡ್ಯ ದಸರಾಕ್ಕೆ 50 ಲಕ್ಷ , ಚಾಮರಾಜನಗರ ದಸರಾಕ್ಕೆ 36 ಲಕ್ಷ ನೀಡಲಾಗಿದೆ. 2.91,83,167 ವೆಚ್ಚವಾಗಿದೆ ಎಂದು ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ. ದಸರಾ ಸಂದರ್ಭದಲ್ಲಿ ನವೆಂಬರ್ 1ರಂದು ದಸರಾಕ್ಕೆ ಸಂಬಂಧಿಸಿದ ವೆಚ್ಚದ ವಿವರವನ್ನು ನೀಡುವುದಾಗಿ ಹೇಳಿದಂತೆ ಇಂದು ವಿವರಗಳನ್ನು ಜನರ ಮುಂದೆ ನೀಡುತ್ತಿದ್ದೇನೆ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸೋಮಶೇಖರ್ ಹೇಳಿದರು.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ