Breaking News
Home / ರಾಜಕೀಯ / ಕೋವಿಡ್ ಜಂಬೋ ಸೆಂಟರ್​ ಹಗರಣ: IAS ಅಧಿಕಾರಿ ಹೆಸರಲ್ಲಿ 100 ಕೋಟಿ ಆಸ್ತಿ ಪತ್ತೆ : E.D.

ಕೋವಿಡ್ ಜಂಬೋ ಸೆಂಟರ್​ ಹಗರಣ: IAS ಅಧಿಕಾರಿ ಹೆಸರಲ್ಲಿ 100 ಕೋಟಿ ಆಸ್ತಿ ಪತ್ತೆ : E.D.

Spread the love

ಮುಂಬೈ: ಕೋವಿಡ್ ಜಂಬೋ ಸೆಂಟರ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಿಂದ ವಿಚಾರಣೆ ಆರಂಭಿಸಿರುವ ಜಾರಿ ನಿರ್ದೇಶನಾಲಯವು ಎರಡನೇ ದಿನವಾದ ಗುರುವಾರ ಸಹ ತನಿಖೆ ಮುಂದುವರೆಸಿದೆ. ನಿನ್ನೆ ಬೈಕುಲ್ಲಾದಲ್ಲಿರುವ ಮಹಾನಗರ ಪಾಲಿಕೆಯ ಕೇಂದ್ರ ಸಂಗ್ರಹಣೆ ವಿಭಾಗದಲ್ಲಿ ಇಡಿ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸಿದರು. ದಾಳಿ ವೇಳೆ ಸುಮಾರು 150 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಈ ಪೈಕಿ 100 ಕೋಟಿ ಆಸ್ತಿ ಸಂಜೀವ್ ಜೈಸ್ವಾಲ್ ಹೆಸರಿನಲ್ಲಿದೆ ಎಂದು ಇಡಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಜಾರಿ ನಿರ್ದೇಶನಾಲಯವು ಮುಂಬೈನ 15 ಸ್ಥಳಗಳಲ್ಲಿ ಜೂನ್ 21 ರಂದು ದಾಳಿ ನಡೆಸಿತ್ತು. ದಾಳಿ ಬಳಿಕ ಐಎಎಸ್ ಅಧಿಕಾರಿ ಸಂಜಯಾ ಜೈಸ್ವಾಲ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ಮಧ್ಯೆ ಬುಧವಾರ ನಡೆಸಿದ ದಾಳಿಯಲ್ಲಿ 150 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಇಡಿ ಪತ್ತೆ ಮಾಡಿದ್ದು, ಐಎಎಸ್ ಅಧಿಕಾರಿ ಸಂಜೀವ್ ಜೈಸ್ವಾಲ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ಸೆಂಟರ್ ಹಗರಣ ನಡೆದಾಗ ಜೈಸ್ವಾಲ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮುನ್ಸಿಪಲ್ ಕಮಿಷನರ್ ಆಗಿದ್ದರು. ಸದ್ಯಕ್ಕೆ 100 ಕೋಟಿ ಆಸ್ತಿ ಹೊಂದಿರುವುದಾಗಿ ಹೇಳಿಕೊಂಡಿರುವ ಸಂಜೀವ್ ಜೈಸ್ವಾಲ್ ಅವರು, ಈ ಹಿಂದೆ ತಮ್ಮ ಹೆಸರಿನಲ್ಲಿ ಕೇವಲ 34 ಕೋಟಿ ಆಸ್ತಿ ಹೊಂದಿದ್ದಾಗಿ ಮಾಹಿತಿ ನೀಡಿದ್ದರು. ಜೊತೆಗೆ, ಈ ಆಸ್ತಿಯನ್ನು ತನ್ನ ಮಾವ ಅಂದರೆ ತನ್ನ ಹೆಂಡತಿಯ ತಂದೆ ನೀಡಿದ್ದಾರೆ. 15 ಕೋಟಿ ರೂಪಾಯಿ ಎಫ್‌ಡಿಯನ್ನೂ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕೋವಿಡ್ ಸೆಂಟರ್ ಆಸ್ಪತ್ರೆ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಬುಧವಾರ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಬಾಂದ್ರಾ ಪೂರ್ವದಲ್ಲಿರುವ ಸಂಜೀವ್ ಜೈಸ್ವಾಲ್ ಅವರ ಮನೆಯ ಮೇಲೆ ಸಹ ದಾಳಿ ನಡೆದಿದ್ದು, ಸಂಜೀವ್ ಜೈಸ್ವಾಲ್ ಪ್ರಸ್ತುತ MHADA ಉಪಾಧ್ಯಕ್ಷರಾಗಿದ್ದಾರೆ. ಕೋವಿಡ್ ಸೆಂಟರ್ ಹಗರಣ ನಡೆದಾಗ ಜೈಸ್ವಾಲ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಆಗಿದ್ದರು. ಹಾಗಾಗಿ, ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಇದೀಗ, ಇಡಿ ನಡೆಸಿದ ದಾಳಿಯಲ್ಲಿ ಪೊಲೀಸರ ಕೈಗೆ 24 ದಾಖಲೆಗಳು ಸಿಕ್ಕಿವೆ. ಅಲ್ಲದೇ, 15 ಕೋಟಿಗೂ ಅಧಿಕ ಮೊತ್ತದ ಎಫ್ ಡಿ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಯ ಪ್ರಕಾರ, ಸಂಜೀವ್ ಜೈಸ್ವಾಲ್ ಅವರು 100 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಆಸ್ತಿಗಳು ಜೈಸ್ವಾಲ್ ಕುಟುಂಬಕ್ಕೆ ಸೇರಿವೆ ಎಂದು ಇಡಿ ಮೂಲಗಳಿಂದ ತಿಳಿದು ಬಂದಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ