Breaking News
Home / Uncategorized / ಮಹಿಳಾ ವಿವಿಗೆ 5 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್

ಮಹಿಳಾ ವಿವಿಗೆ 5 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್

Spread the love

ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವೂ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು, ಈ ಬಾರಿ 5 ಲಕ್ಷಕ್ಕೂ ಅಧಿಕ ಬಿಲ್ ಬಂದಿದ್ದು, ಬಿಲ್ ಕಂಡು ಸ್ವತಃ ಕುಲಪತಿಗಳೇ ಶಾಕ್‌ಗೆ ಒಳಗಾಗಿದ್ದಾರೆ.

ದೊಡ್ಡ ಕ್ಯಾಂಪಸ್ ಹೊಂದಿರುವ ಮಹಿಳಾ ವಿಶ್ವವಿದ್ಯಾಲಯದ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ 3,39,313 ರೂ. ಬಂದಿತ್ತು. ಮೇ ತಿಂಗಳ ಬಿಲ್ 5,06,302 ಲಕ್ಷ ರೂ. ಬಿಲ್ ಬಂದಿದೆ. ವಿವಿಯಲ್ಲಿ ಸೋಲಾರ್ ಸೌಲಭ್ಯವಿದ್ದರೂ ವಿದ್ಯುತ್ ಬಿಲ್ ಮಿತಿಮೀರಿ ಬಂದಿರುವುದು ವಿವಿ ಆಡಳಿತ ಮಂಡಳಿ ಅಚ್ಚರಿಗೆ ಕಾರಣವಾಗಿದೆ.

ಜೂನ್ ತಿಂಗಳ ಬಿಲ್ ವೀಕ್ಷಿಸಿದರೆ ಹಲವು ಏರಿಕೆಗಳು ಕಂಡುಬಂದಿದೆ. ಮೊದಲು ಒಂದು ಕೆವಿ ವ್ಯಾಟ್‌ಗೆ ನಿಗದಿತ ಶುಲ್ಕ 260 ರೂ. ಇದ್ದದ್ದು ಈಗ ಅದನ್ನು 300 ರೂ.ಗೆ ಏರಿಸಲಾಗಿದೆ. ನಿಗದಿತ ಸ್ಲಾೃಬ್ ಮೌಲ್ಯವೂ ಯೂನಿಟ್‌ಗೆ 7.50 ರೂ. ಗೆ ಏರಿದೆ. ಜೊತೆಗೆ ಎಫ್‌ಎಸಿ ದರವನ್ನೂ ಯೂನಿಟ್‌ಗೆ 2.55 ರೂ. ಗೆ ಏರಿಸಲಾಗಿದೆ. ಇದೆಲ್ಲದರ ಪರಿಣಾಮ 5,06,302 ಲಕ್ಷ ರೂ. ಬಂದಿದೆ.


Spread the love

About Laxminews 24x7

Check Also

ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ ; ಸಿಎಂ

Spread the love ಬೆಂಗಳೂರು : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ