Breaking News
Home / ರಾಜಕೀಯ / ಜಿಲ್ಲಾ ಉಸ್ತುವಾರಿಗೆ ಸಚಿವರ ಪೈಪೋಟಿ ಆರಂಭ: ಇಲ್ಲಿದೆ ಸಂಭಾವ್ಯ ಪಟ್ಟಿ!!

ಜಿಲ್ಲಾ ಉಸ್ತುವಾರಿಗೆ ಸಚಿವರ ಪೈಪೋಟಿ ಆರಂಭ: ಇಲ್ಲಿದೆ ಸಂಭಾವ್ಯ ಪಟ್ಟಿ!!

Spread the love

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಯಿತು. ಸಂಪುಟ ರಚನೆ, ಖಾತೆ ಹಂಚಿಕೆಯೂ ಆಯಿತು. ಕಾಂಗ್ರೆಸ್​ನ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಿನ್ನೆಯಷ್ಟೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

ಇದೀಗ ಜಿಲ್ಲಾ ಉಸ್ತುವಾರಿಗೆ ಪೈಪೋಟಿ ಆರಂಭವಾಗಿದೆ. ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳ ಉಸ್ತುವಾರಿಗಾಗಿ ಸಚಿವರುಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಸಚಿವರುಗಳಿಲ್ಲದ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಕೋಲಾರ, ಹಾಸನ, ದಕ್ಷಿಣ ಕನ್ನಡಕ್ಕೆ ಯಾರು ಉಸ್ತುವಾರಿಗಳಾಗಲಿದ್ದಾರೆ ಎಂಬ ಕುತೂಹಲದ ಜೊತೆಗೆ ಇಬ್ಬಿಬ್ಬರು ಸಚಿವರಿರುವ ಜಿಲ್ಲೆಗಳಲ್ಲಿ ತವರು ಜಿಲ್ಲೆಯ ಉಸ್ತುವಾರಿಗಾಗಿ ಪೈಪೋಟಿ ನಡೆಯುತ್ತಿದೆ. ನಾಡಹಬ್ಬ ದಸರಕ್ಕೆ ಹೆಸರಾಗಿರುವ ಮೈಸೂರು ಹಾಗೂ ಬೆಂಗಳೂರು ಪ್ರಮುಖ ಜಿಲ್ಲೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಹೆಚ್ಚಿದೆ.

ಡಾ.ಎಚ್. ಸಿ. ಮಹದೇವಪ್ಪ ತಾವೇ ಉಸ್ತುವಾರಿ ಸಚಿವರಾಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಮೈಸೂರು ಜಿಲ್ಲೆಯವರೇ ಆದ ಕೆ.ವೆಂಕಟೇಶ್ ಅವರು ಸಹ ಉಸ್ತುವಾರಿಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ವೆಂಕಟೇಶ್ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನೀಡಲು ಮುಖ್ಯಮಂತ್ರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಡ್ಯಕ್ಕೆ ಚಲುವರಾಯಸ್ವಾಮಿ ಅವರ ಉಸ್ತುವಾರಿ ಚರ್ಚೆಯಲ್ಲಿದೆ. ಕೊಡಗಿಗೆ ಕೆ. ಜೆ.ಜಾರ್ಜ್ ಅವರ ಹೆಸರು ಕೇಳಿ ಬರುತ್ತಿದೆ. ರಾಮನಗರಕ್ಕೆ ರಾಮಲಿಂಗಾರೆಡ್ಡಿ, ಹಾಸನಕ್ಕೆ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಉಸ್ತುವಾರಿಗೆ ಚರ್ಚೆಯಲ್ಲಿದೆ. ತುಮಕೂರು ಜಿಲ್ಲೆಯ ಉಸ್ತುವಾರಿಗೆ ಡಾ.ಜಿ.ಪರಮೇಶ್ವರ್ ಹಾಗೂ ಕೆ. ಎನ್.ರಾಜಣ್ಣ ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಮೊದಲ ಬಾರಿಗೆ ಸಚಿವರಾಗಿರುವ ರಾಜಣ್ಣ ಜಿಲ್ಲಾ ಉಸ್ತುವಾರಿ ಬೇಕೆಂದು ಹಟಕ್ಕೆ ಬಿದ್ದಿದ್ದಾರೆ. ಆದರೆ, ಮಾಜಿ ಉಪಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಜಿಲ್ಲೆಯ ಅಭಿವೃದ್ಧಿಯ ಕನಸುಗಳನ್ನು ಪೂರ್ಣಗೊಳಿಸಲು ಉಸ್ತುವಾರಿ ಬೇಕೆಂದು ಪ್ರತಿಪಾದಿಸುತ್ತಿರುವುದಾಗಿ ತಿಳಿದು ಬಂದಿದೆ.

ಇನ್ನು ಪ್ರಮುಖವಾಗಿ ಬೆಂಗಳೂರು ಜಿಲ್ಲೆಯ ಉಸ್ತುವಾರಿ ಕಾಂಗ್ರೆಸ್ಸಿಗೆ ಸವಾಲಿನ ಪ್ರಶ್ನೆಯಾಗಿದೆ. ಈಗಾಗಲೇ ನಗರಾಭಿವೃದ್ಧಿ ಸಚಿವರಾಗಿರುವ ಡಿ. ಕೆ.ಶಿವಕುಮಾರ್ ಅವರನ್ನೇ ಜಿಲ್ಲಾ ಉಸ್ತುವಾರಿಯನ್ನಾಗಿ ಮುಂದುವರಿಸಬೇಕು ಎಂಬ ಚರ್ಚೆ ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರಕ್ಕೆ ಕೃಷ್ಣ ಬೈರೇಗೌಡ ಉಸ್ತುವಾರಿಯಾಗಬಹುದು.

ಕೋಲಾರ ಜಿಲ್ಲೆಯಲ್ಲಿ ಸಚಿವರಿಲ್ಲದ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ಶಾಸಕ ಕೆ.ಎಚ್.ಮುನಿಯಪ್ಪ ಕೋಲಾರದ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಕಸರತ್ತು ನಡೆದಿದ್ದು, ಉಸ್ತುವಾರಿ ಸಚಿವರ ಪಟ್ಟಿ ಬಹುತೇಕ ಅಂತಿಮವಾಗಿದೆ ಎಂದು ಹೇಳಲಾಗುತ್ತಿದೆ. ಅಧಿಕೃತ ಆದೇಶ ಬಾಕಿ ಉಳಿದಿದೆ.

ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ.

  • ಬೆಂಗಳೂರು ನಗರ- ಕೆ.ಜೆ. ಜಾರ್ಜ್
  • ಬೆಂಗಳೂರು ಗ್ರಾಮಾಂತರ- ರಾಮಲಿಂಗಾರೆಡ್ಡಿ
  • ಕೋಲಾರ- ಕೆ.ಎಚ್. ಮುನಿಯಪ್ಪ
  • ಚಿಕ್ಕಬಳ್ಳಾಪುರ- ಡಾ. ಎಂ.ಸಿ. ಸುಧಾಕರ್
  • ರಾಮನಗರ- ಡಿ.ಕೆ. ಶಿವಕುಮಾರ್
  • ಮಂಡ್ಯ- ಎನ್. ಚೆಲುವರಾಯಸ್ವಾಮಿ
  • ಮೈಸೂರು- ಡಾ.ಎಚ್. ಸಿ. ಮಹದೇವಪ್ಪ
  • ಚಾಮರಾಜನಗರ- ದಿನೇಶ್ ಗುಂಡೂರಾವ್
  • ಕೊಡಗು- ವೆಂಕಟೇಶ್
  • ದಕ್ಷಿಣಕನ್ನಡ- ಕೃಷ್ಣ ಬೈರೇಗೌಡ
  • ಉಡುಪಿ- ಡಾ. ಜಿ ಪರಮೇಶ್ವರ್
  • ಉತ್ತರ ಕನ್ನಡ- ಮಂಕಾಲ್ ವೈದ್ಯ
  • ಧಾರವಾಡ- ಸಂತೋಷ್ ಲಾಡ್​
  • ಬೆಳಗಾವಿ- ಸತೀಶ್ ಜಾರಕಿಹೊಳಿ
  • ಬೀದರ್- ರಹೀಮ್ ಖಾನ್
  • ಕಲಬುರ್ಗಿ- ಶರಣ ಪ್ರಕಾಶ್ ಪಾಟೀಲ್
  • ವಿಜಯಪುರ- ಎಂ.ಬಿ.ಪಾಟೀಲ್
  • ಬಳ್ಳಾರಿ- ನಾಗೇಂದ್ರ
  • ಗದಗ- ಎಚ್. ಕೆ. ಪಾಟೀಲ್
  • ಹಾವೇರಿ- ಬಿ. ಝಡ್. ಜಮೀರ್ ಅಹ್ಮದ್ ಖಾನ್
  • ಕೊಪ್ಪಳ- ಶಿವರಾಜ್ ತಂಗಡಗಿ
  • ಯಾದಗಿರಿ- ಶರಣಪ್ಪಬಸಪ್ಪ ದರ್ಶಣಾಪುರ
  • ಬಾಗಲಕೋಟೆ- ಶೀವನಾಂದ ಪಾಟೀಲ್
  • ವಿಜಯನಗರ- ಲಕ್ಷ್ಮೀ ಹೆಬ್ಬಾಳ್ಕರ್
  • ತುಮಕೂರು- ಕೆ.ಎನ್. ರಾಜಣ್ಣ
  • ಚಿತ್ರದುರ್ಗ- ಡಿ. ಸುಧಾಕರ್
  • ಶಿವಮೊಗ್ಗ- ಮಧು ಬಂಗಾರಪ್ಪ
  • ಹಾಸನ- ಈಶ್ವರ್ ಖಂಡ್ರೆ
  • ಚಿಕ್ಕಮಗಳೂರು- ಪ್ರಿಯಾಂಕ್ ಖರ್ಗೆ
  • ದಾವಣಗೆರೆ- ಎಸ್. ಎಸ್. ಮಲ್ಲಿಕಾರ್ಜುನ
  • ರಾಯಚೂರು- ಎನ್.ಎಸ್. ಬೋಸ್ ರಾಜು

Spread the love

About Laxminews 24x7

Check Also

ವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ

Spread the loveವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ ನವದೆಹಲಿ: ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಟೇಪ್ ವಿವಾದದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ